ಶತಕದತ್ತ ಕೆಜಿಎಫ್

ಬೆಂಗಳೂರು: ಭಾರತದ ಚಿತ್ರರಂಗ ಅಷ್ಟೇನೂ ಲೆಕ್ಕಕ್ಕೇ ತೆಗೆದುಕೊಳ್ಳದಿದ್ದ ಪರಿಸ್ಥಿತಿಯಲ್ಲಿರುವಾಗ ಬಿರುಗಾಳಿಯಂತೆ ಬಂದು ಕನ್ನಡದ ಗತ್ತೇನು, ಖದರ್ ಏನು ಎಂಬುದನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಸಿನಿಮಾ ಕೆಜಿಎಫ್. ಇದು ಕನ್ನಡಿಗರ ಪಾಲಿಗೆ ಐಡೆಂಟಿಟಿ ಕಾರ್ಡ್ ಕೂಡ.

ಬಾಲಿವುಡ್ ನ ಕಿಂಗ್ ಖಾನ್ ಸಿನಿಮಾ ಜೀರೋ ವನ್ನು ಮಕಾಡೆ ಮಲಗುವಂತೆ ಮಾಡಿದ ಕೆಜಿಎಫ್ ಸಿನಿಮಾದ್ದು ಸ್ಯಾಂಡಲ್ ವುಡ್ ಪಾಲಿಗೆ ಸಾರ್ವಕಾಲಿಕ ದಾಖಲೆಯೇ ಸರಿ. ಸತತ ಎರಡು ವರ್ಷಗಳ ಕಾಲ ಯಶ್ ಅಭಿನಯದ ಕೆಜಿಎಫ್ ಗುಂಗಿನಲ್ಲಿದ್ದ ಅಭಿಮಾನಿಗಳು ಸಂತಸ ಪಡುವಂತಹ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಕೆಜಿಎಫ್ ಇದೀಗ ಶತದಿನವನ್ನು ಪೂರೈಸುವ ಮೂಲಕ ಗೆಲುವಿನ ನಗೆ ಬೀರಿದೆ. ಹೀಗೆ ಬಂದು ಹಾಗೆ ಹೋಗುವ ನೂರಾರು ಚಿತ್ರಗಳ ಮಧ್ಯೆ ಗಲ್ಲಾಪೆಟ್ಟಿಗೆಯನ್ನು ತುಂಬಿಸಿ ಕನ್ನಡಿಗರ ಹೃದಯ ಗೆದ್ದ ಕೆಜಿಎಫ್ ಶತದಿನದ ಸಂಭ್ರಮವನ್ನು ಕಾಣುತ್ತಿದೆ. ಬರೋಬ್ಬರಿ 950 ಪರದೆಗಳಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಬಹುಮಟ್ಟಿನ ನಿರೀಕ್ಷೆಯನ್ನು ಭರಪೂರ ಸ್ವಾಗತವನ್ನೂ ಪಡೆದಿತ್ತು. ಇಂದಿಗೂ ಹಲವೆಡೆ ಪ್ರದರ್ಶನ ಮುಂದುವರೆದಿದೆ. ಸಿನಿಮಾ ಶತದಿನೋತ್ಸವವನ್ನು ಆಚರಿಸುವ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 2 ಕೆಲಸವೂ ಭರದಿಂದ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಇನ್ನು ಕೆಜಿಎಫ್ ಸಿನಿಮಾವೂ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಾರ್ಚ್ 30ರಂದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

Leave a Reply

Your email address will not be published. Required fields are marked *