Connect with us

Latest

ಮಾರಾಟವಾಗದೇ ಉಳಿದಿದ್ದ ಲಾಟರಿಗೆ ಸಿಕ್ತು 12 ಕೋಟಿ ಬಂಪರ್ ಬಹುಮಾನ

Published

on

ತಿರುವನಂತಪುರಂ: ಬಹಳ ಕಷ್ಟು ಪಟ್ಟು ಜೀವನ ನಡೆಸುತ್ತಿದ್ದ ಲಾಟರಿ ವ್ಯಾಪಾರಸ್ಥರಿಗೆ ರಾತ್ರೋ ರಾತ್ರಿ ಲಾಟರಿ ಹೊಡೆದು 12 ಕೋಟಿ ರೂಪಾಯಿಯ ಒಡೆಯರಾಗಿದ್ದಾರೆ.

 

ಕೇರಳದ ತೆಂಕಾಶಿ ಮೂಲದವರಾದ ಶರಾಫುದ್ದೀನ್ (46) ಈ ಅದೃಷ್ಟಶಾಲಿ ವ್ಯಕ್ತಿ. ಶರಾಫುದ್ದೀನ್ ಈ ಹಿಂದೆ ವಿದೇಶದಲ್ಲಿ ಹಲವು ಕೆಲಸಗಳನ್ನು ಮಾಡಿ ಯಾವುದು ಸರಿಹೊಂದದೆ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ನಂತರ ಕೇರಳದಲ್ಲಿ ಲಾಟರಿ ಟಿಕೆಟ್ ವ್ಯಾಪಾರ ಮಾಡಲು ಪ್ರಾರಂಭಿಸಿದ್ದರು.

ಕೇರಳ ಸರ್ಕಾರವು ಕ್ರಿಸ್‍ಮಸ್ ಹೊಸವರ್ಷದ ಪ್ರಯುಕ್ತ ಲಾಟರಿ ಟಿಕೆಟ್‍ಗಳನ್ನು ಹೊರ ತಂದಿತ್ತು. ಇದನ್ನು ತಮ್ಮ ಅಂಗಡಿಯಲ್ಲಿ ಶರಾಫುದ್ದೀನ್ ಮಾರಾಟ ಮಾಡಿದ್ದರು. ಈ ಪೈಕಿ ಕೆಲವು ಟಿಕೆಟ್‍ಗಳು ಮಾರಾಟವಾಗದೇ ಹಾಗೆ ಉಳಿದಿದ್ದವು. ಆದರೆ ಅದೃಷ್ಟ ಇವರ ಬೆನ್ನತ್ತಿದ್ದ ಪರಿಣಾಮ ಮಾರಾಟವಾಗದೇ ಉಳಿದಿದ್ದ ಒಂದು ಟಿಕೆಟ್‍ಗೆ ಮೊದಲ ಬಹುಮಾನವಾಗಿ 12 ಕೋಟಿ ರೂಪಾಯಿ ಜಾಕ್‍ಪಾಟ್ ಹೊಡೆದಿದೆ. ಈ ಮೂಲಕ ಕೋಟ್ಯಧಿಪತಿ ಆಗಿದ್ದಾರೆ.

ಈ ಹಿಂದೆ ಲಾಟರಿ ಅಂಗಡಿಯಿಂದ ಬರುತ್ತಿದ್ದ ಆದಾಯದಿಂದ ಶರಾಫುದ್ದೀನ್ ಕುಟುಂಬ ನಡೆಸುತ್ತಿದ್ದರು. ಆ ಬಳಿಕ ಕೊರೊನಾದಿಂದಾಗಿ ಹಲವು ಕಷ್ಟ ಅನುಭವಿಸಿ ಜೀವನ ನಡೆಸಲು ಸೆಣಸಾಡುತ್ತಿದ್ದ ಈ ಜೀವಕ್ಕೆ ಇದೀಗ ಅದೃಷ್ಟ ಖುಲಾಯಿಸಿದೆ. ಈ ಹಿಂದೆಯೂ ಸಣ್ಣ ಪ್ರಮಾಣದ ಲಾಟರಿ ಬಹುಮಾನ ಪಡೆದಿದ್ದ ಶರಾಫುದ್ದೀನ್ ಇದೀಗ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿರುವುದರಿಂದ ಫುಲ್ ಖುಷಿಯಾಗಿದ್ದಾರೆ.

ಕಳೆದ ವರ್ಷ ಕೇರಳದ 24ರ ಹರೆಯದ ಅನಂತು ವಿಜಯನ್ ಅವರಿಗೆ 12 ಕೋಟಿ ಲಾಟರಿ ಒಲಿದಿತ್ತು. ವಿಜಯನ್ ಕೂಡ ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಿದ್ದರು.

Click to comment

Leave a Reply

Your email address will not be published. Required fields are marked *