Connect with us

ಇಂದಿನಿಂದ ಕೇದಾರನಾಥ ದೇವಾಲಯ ಓಪನ್ – ಆನ್‍ಲೈನ್ ಮೂಲಕ ಭಕ್ತರಿಗೆ ದೇವರ ದರ್ಶನ

ಇಂದಿನಿಂದ ಕೇದಾರನಾಥ ದೇವಾಲಯ ಓಪನ್ – ಆನ್‍ಲೈನ್ ಮೂಲಕ ಭಕ್ತರಿಗೆ ದೇವರ ದರ್ಶನ

ದೆಹ್ರಾಡೂನ್: ಕೋವಿಡ್-19 ಲಾಕ್‍ಡೌನ್‍ನಿಂದ ಮುಚ್ಚಿದ್ದ ಕೇದಾರನಾಥ ದೇವಾಲಯವನ್ನು ಇಂದು ಬೆಳಗ್ಗೆ 5 ಗಂಟೆಗೆ ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭಕ್ಕೆ ಭಕ್ತರಿಗೆ ಪ್ರವೇಶವಿರಲಿಲ್ಲ. ಆದರೆ ಬದಲಾಗಿ ಆನ್‍ಲೈನ್ ಮೂಲಕ ದರ್ಶನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

ಕೇದಾರನಾಥ ದೇವಾಲಯವನ್ನು ಪುನರಾಂಭಿಸಿರುವ ಬಗ್ಗೆ ಉತ್ತರಾಖಂಡ್ ಸಿಎಂ ತಿರತ್ ಸಿಂಗ್ ರಾವತ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೇದಾರನಾಥ ದೇವಾಲಯವನ್ನು ಇಂದು ಬೆಳಗ್ಗೆ 5 ಗಂಟೆಗೆ ತೆರೆಯಲಾಯಿತು. ಎಲ್ಲರೂ ಆರೋಗ್ಯವಾಗಿರಲು ನಾನು ಬಾಬಾ ಕೇದಾರನಾಥನನ್ನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಹೆಚ್ಚಾಗಿರುವ ಹಿನ್ನೆಲೆ ಚಾರ್‍ಧಾಮ್ ದೇವಸ್ಥಾನ ಮಂಡಳಿಯು ಚಾರ್‍ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಆದರೆ ಆಡಳಿತ ಮಂಡಳಿಯು ದೇಶಾದ್ಯಂತ ಲಕ್ಷಾಂತರ ಭಕ್ತರಿಗೆ ಆನ್‍ಲೈನ್ ಮೂಲಕ ಬದ್ರಿನಾಥ್, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಧಮ್ಸ್ ದೇವಾಲಯಗಳ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

Advertisement
Advertisement