Saturday, 18th January 2020

ಸೆಲ್ಫಿ ತೆಗೆದುಕೊಳ್ಳುವಾಗ ಕತ್ರಿನಾ ಮೇಲೆ ಬೀಳಲು ಮುಂದಾದ ಅಭಿಮಾನಿ

– ತಾಳ್ಮೆ ಕಳೆದುಕೊಳ್ಳದ ನಟಿಗೆ ಜನರಿಂದ ಮೆಚ್ಚುಗೆ

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ವಿಮಾನ ನಿಲ್ದಾಣದಲ್ಲಿ ನೋಡಿದ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವಾಗ ಅವರ ಮೇಲೆ ಬೀಳಲು ಮುಂದಾಗಿದ್ದಾನೆ. ಆಗ ಕತ್ರಿನಾ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳದೆ ಶಾಂತಿಯುತವಾಗಿ ಅಭಿಮಾನಿ ಜೊತೆ ವರ್ತಿಸಿದ ನಡೆಗೆ ಅಭಿಮನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕತ್ರಿನಾ ಕೈಫ್ ದೆಹಲಿ ವಿಮಾನ ನಿಲ್ದಾಣದಲ್ಲಿ ತಮ್ಮ ಬಾಡಿಗಾರ್ಡ್ ಜೊತೆ ಬರುತ್ತಿದ್ದರು. ಈ ವೇಳೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಆಗ ಅಭಿಮಾನಿಯೊಬ್ಬ ಕತ್ರಿನಾ ಮೇಲೆ ಬೀಳಲು ಪ್ರಯತ್ನಿಸಿದ್ದಾನೆ. ಅಭಿಮಾನಿ ಹತ್ತಿರ ಬರುತ್ತಿದ್ದಂತೆ ಕತ್ರಿನಾ ಬಾಡಿಗಾರ್ಡ್ ಆತನಿಗೆ ದೂರ ಹೋಗಲು ಹೇಳಿದ್ದರು. ಅಭಿಮಾನಿ ಬಾಡಿಗಾರ್ಡ್ ಮಾತು ಕೇಳದೆ ಸೆಲ್ಫಿ ತೆಗೆದುಕೊಳ್ಳಲು ಕತ್ರಿನಾ ಬಳಿ ಬಂದಿದ್ದಾನೆ.

ಈ ವೇಳೆ ಕತ್ರಿನಾ ತಾಳ್ಮೆ ಕಳೆದುಕೊಳ್ಳದೇ ‘ಆರಾಮಾಗಿ ಅಲ್ಲಿಂದಲೇ ಸೆಲ್ಫಿ ತೆಗೆದುಕೊಳ್ಳಿ’ ಎಂದು ಹೇಳಿದ್ದಾರೆ. ಕತ್ರಿನಾ ಅಭಿಮಾನಿ ಜೊತೆ ನಡೆದುಕೊಂಡ ರೀತಿ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಕೆಲವರು “ತನ್ನ ನೆಚ್ಚಿನ ಕಲಾವಿದರನ್ನು ನೋಡಿ ಖುಷಿ ಆಗುವುದು ಸಾಮಾನ್ಯ. ಆದರೆ ಸೆಲ್ಫಿ ತೆಗೆದುಕೊಳ್ಳುವಾಗ ಅವರ ಮೇಲೆ ಬೀಳುವುದು ಸರಿಯಲ್ಲ. ಕತ್ರಿನಾ ಈ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ” ಎಂದು ಕಮೆಂಟ್ ಮಾಡಿದ್ದಾರೆ.

ಕಳೆದ ವರ್ಷ ಕತ್ರಿನಾ ನಟ ಸಲ್ಮಾನ್ ಖಾನ್ ಜೊತೆ `ದ-ಬ್ಯಾಂಗ್’ ಕಾನ್ಸರ್ಟ್ ಗಾಗಿ ಕೆನಡಾಗೆ ಹೋಗಿದ್ದರು. ಈ ಕಾರ್ಯಕ್ರಮ ಮುಗಿದ ಮೇಲೆ ಯುವತಿಯರು ಕತ್ರಿನಾ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದಿದ್ದರು. ಆದ್ರೆ ಕತ್ರಿನಾ ಕಾರ್ಯಕ್ರಮದಲ್ಲಿ ತುಂಬಾ ಆಯಾಸಗೊಂಡಿದ್ದ ಕಾರಣ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಲು ಸ್ವಲ್ಪ ತಡ ಮಾಡಿದ್ದರು. ಇದ್ದರಿಂದ ಯುವತಿಯರು ಕೋಪಗೊಂಡು ಅಲ್ಲಿಂದ ಹೊರಟು ಹೋಗಿದ್ದರು. ನಂತರ ಕತ್ರಿನಾ ಹೋಟೆಲ್‍ನಿಂದ ಹೊರಬಂದು ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಯುವತಿಯರು ಕತ್ರಿನಾರನ್ನು ಹಿಂಬಾಲಿಸಿ ಅವಮಾನ ಮಾಡಿದ್ದರು.

ಯುವತಿಯರ ಈ ವರ್ತನೆ ಕಂಡು ಕತ್ರಿನಾ ತನ್ನ ತಾಳ್ಮೆಯನ್ನು ಕಳೆದುಕೊಳ್ಳದೇ ಆ ಸಂದರ್ಭವನ್ನು ಶಾಂತಿಯಿಂದ ನಿಭಾಯಿಸಿದ್ದರು. ಕತ್ರಿನಾ ಅಲ್ಲಿದ್ದ ಬೇರೆ ಅಭಿಮಾನಿಗಳ ಜೊತೆ ಶಾಂತಿಯಿಂದ ಫೋಟೋಗೆ ಪೋಸ್ ಕೊಟ್ಟರು. ಅಲ್ಲದೇ ಅಭಿಮಾನಿಗಳಿಗೆ ತಮ್ಮ ಆಟೋಗ್ರಾಫ್ ಕೂಡ ನೀಡಿದ್ದರು. ಕತ್ರಿನಾ ಬೇರೆ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆ ಯುವತಿಯರು ಕತ್ರಿನಾ ಬಗ್ಗೆ ಕಮೆಂಟ್ ಮಾಡಿ ಅವಮಾನ ಮಾಡಿದ್ದರು.

Leave a Reply

Your email address will not be published. Required fields are marked *