Districts
ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ : ಸಚಿವ ಶಿವರಾಮ್ ಹೆಬ್ಬಾರ್

ಕಾರವಾರ: ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ, ಸಂಪುಟದಲ್ಲಿರುವ ಯಾವ ಸಚಿವರಿಗೂ ಅಸಮಾಧಾನವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಶಿರಸಿ ನಗರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಸಕ್ಕರೆ ಖಾತೆ ಹಿಂಪಡೆದಿದ್ದಕ್ಕೆ ಬೇಸರವಿಲ್ಲ. ಖಾತೆ ನೀಡುವುದು, ಹಿಂಪಡೆಯುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಅವರಿಗೆ ಪರಮಾಧಿಕಾರವಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ನಿರಂತರ ಪ್ರಕ್ರಿಯೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವವರಿಗೆ ಮುಖ್ಯಮಂತ್ರಿ ಖಾತೆ ನೀಡಿದ್ದಾರೆ. ಸಂಪುಟದಲ್ಲಿರುವ ಯಾವ ಸಚಿವರಿಗೂ ಅಸಮಾಧಾನವಿಲ್ಲ. ಸಚಿವ ಸ್ಥಾನ ಸಿಗದಿದ್ದವರಲ್ಲೂ ಬೇಸರವಿಲ್ಲ ಎಂದರು. ಮುಖ್ಯಮಂತ್ರಿ ಜೊತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಯತ್ನಾಳ್ ಹಾಗೂ ವಿಶ್ವನಾಥ ಅವರ ಹೇಳಿಕೆಯ ಕುರಿತು ಹೈಕಮಾಂಡ್ ವಿಚಾರಣೆ ನಡೆಸಲಿದೆ ಎಂದು ತಿಳಿಸಿದರು.
