Districts
ಸಹೋದರನ ಪತ್ನಿ ಜೊತೆ ಕಣಕ್ಕೆ ಇಳಿದ ಬಾವ

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಅತ್ತೆ, ಮಾವ, ಸೊಸೆ, ಅಣ್ಣ, ತಮ್ಮ ಸ್ಪರ್ಧೆಗೆ ಇಳಿಯುವದು ಈ ಚುನಾವಣೆಯಲ್ಲಿ ಸರ್ವೆಸಾಮಾನ್ಯವಾಗಿದೆ. ಇಂತಹದ್ದೇ ಒಂದು ಘಟನೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 2ರಲ್ಲಿ ಒಂದೇ ಕುಟುಂಬದ ವ್ಯಕ್ತಿ ತಮ್ಮ ಸಹೋದರನ ಪತ್ನಿಯೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಇಬ್ಬರು ಬೇರೆ ಬೇರೆ ಅಭ್ಯರ್ಥಿಗಳ ಎದುರು ಸ್ಪರ್ಧೆ ಮಾಡುತ್ತಿದ್ದಾರೆ.
ಬಸವರಾಜ್ ಯೋಗಪ್ಪನವರ್ ಸಾಮನ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಬಸವರಾಜ್ ಅವರ ಸಹೋದರನ ಪತ್ನಿ (ಸೊಸೆ ) ವಿಶಾಲ ಯೋಗಪ್ಪನವರ್ “ಬಿ” ವರ್ಗದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಆದರೆ ಇವರಿಬ್ಬರು ಪರಸ್ಪರ ವಿರುದ್ಧವಾಗಿ ಸ್ಪರ್ಧೆ ಮಾಡುತ್ತಿಲ್ಲ. ಬೇರೆ ಬೇರೆ ಅಭ್ಯರ್ಥಿಗಳ ಎದುರು ಒಂದೇ ಮನೆಯ ಇಬ್ಬರು ಕಣಕ್ಕೆ ಇಳಿಯುವ ಮೂಲಕ ಗಮನ ಸೆಳೆದಿದ್ದಾರೆ.
