Tuesday, 16th July 2019

ಹಳ್ಳಿಯಿಂದ ಬಂದ ವ್ಯಕ್ತಿ 50 ವರ್ಷ ಪಕ್ಷವನ್ನು ಕಟ್ಟಿ ಆಳಿದ್ದಾರೆ: ಎಚ್‍ಡಿಡಿ

ನವದೆಹಲಿ: ಹಳ್ಳಿಯಿಂದ ಬಂದ ವ್ಯಕ್ತಿಯೊಬ್ಬರು 50 ವರ್ಷ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಎಂತಹ ಕಠಿಣ ಸಂದರ್ಭದಲ್ಲಿಯೂ ಪಂಚಾಯ್ತಿ ಮಟ್ಟದಿಂದ ಯಾವ ಒಬ್ಬ ಕಾರ್ಯಕರ್ತನೂ ಕರುಣಾನಿಧಿಯವರನ್ನು ಬಿಟ್ಟು ಹೋಗಲಿಲ್ಲ. ಆ ಜನತೆಯ ಆಶೀರ್ವಾದದಿಂದ ಕೇಂದ್ರದಲ್ಲಿ ಎನ್‍ಡಿಎ ಮತ್ತು ಯುಪಿಎ ಸರ್ಕಾರ ಆಡಳಿತ ನಡೆಸಲು ಸಹಾಯ ಮಾಡಿದ್ರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ಸರ್ವತೋಮ ಅಭಿವೃದ್ಧಿಗೆ ಕೇಂದ್ರದಿಂದ ಎಲ್ಲ ಆರ್ಥಿಕ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದ್ರು. ಕರುಣಾನಿಧಿ ಅವರ ಬೆಂಬಲದಿಂದಲೇ ಕೇಂದ್ರದಲ್ಲಿ ಎನ್‍ಡಿಎ ಮತ್ತು ಯುಪಿಎ ನಿರಾಂತಕವಾಗಿ ಸರ್ಕಾರ ನಡೆಸಿವೆ. ತಮಿಳುನಾಡಿನ ಅಭಿವೃದ್ಧಿಗಾಗಿ ಆಡಳಿತಾರೂಢ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮ ರಾಜ್ಯಕ್ಕೆ ತರುವಲ್ಲಿ ಯಶಸ್ವಿಯಾದ ನಾಯಕ ಅಂದ್ರು.

ಇಂದು ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಕುರುಣಾನಿಧಿಯವರ ಮರಣ ವಾರ್ತೆ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ. ಕರುಣಾನಿಧಿಯ ಸಾವಿನ ದುಃಖವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಸಂತಾಪ ಸೂಚಿಸಿದರು.

Leave a Reply

Your email address will not be published. Required fields are marked *