Connect with us

Bengaluru City

ಇಂದು 10 ಸಾವಿರ ಮಂದಿಗೆ ಸೋಂಕು – 40 ಬಲಿ, ಬೆಂಗಳೂರಿನಲ್ಲಿ ಬರೋಬ್ಬರಿ 7,584 ಕೇಸ್

Published

on

ಬೆಂಗಳೂರು: ಇಂದು ಕರ್ನಾಟಕದಲ್ಲಿ ಒಟ್ಟು 10,250 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯಾದ್ಯಂತ ಒಟ್ಟು 40 ಜನ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ 7,584 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 27 ಜನ ಕೊರೊನಾಗೆ ಬಲಿಯಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 69,225 ಕ್ಕೆ ಏರಿಕೆ ಕಂಡಿದೆ. ಇಂದು ರಾಜ್ಯದಲ್ಲಿ ಒಟ್ಟು 70,000 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,65,290 ಕ್ಕೆ ಏರಿಕೆ ಕಂಡಿದೆ. ಈ ಪೈಕಿ 9,83,157 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು ಇಲ್ಲಿಯವರೆಗೆ 12,889 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 440 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 9,635 ಆಂಟಿಜನ್ ಟೆಸ್ಟ್ 1,23,071 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,32,706 ಕೊರೊನಾ ಪರೀಕ್ಷೆ ಮಾಡಲಾಗಿದೆ.

ಕಲಬುರಗಿ 291, ಬೀದರ್ 290, ಮೈಸೂರು 277, ಹಾಸನ 170, ತುಮಕೂರು ಮತ್ತು ಧಾರವಾಡದಲ್ಲಿ 150, ದಕ್ಷಿಣ ಕನ್ನಡ 133, ರಾಯಚೂರು 103, ಬಳ್ಳಾರಿಯಲ್ಲಿ 103 ಮಂದಿಗೆ ಸೋಂಕು ಬಂದಿದೆ. ಒಟ್ಟು 440 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 177, ಕಲಬುರಗಿ 44, ಕೋಲಾರ 33, ಮೈಸೂರು 23, ಮತ್ತು ತುಮಕೂರಿನಲ್ಲಿ 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *