Connect with us

Bengaluru City

ರಾಜ್ಯದಲ್ಲಿ 6,955, ಬೆಂಗಳೂರಿನಲ್ಲಿ 4,384 ಮಂದಿಗೆ ಕೊರೊನಾ – 36 ಮಂದಿ ಬಲಿ

Published

on

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೇಸ್ ಏರಿಕೆ ಆಗ್ತಾನೆ ಇದೆ. ರಾಜ್ಯದಲ್ಲಿ ಹದಿಮೂರು ಜಿಲ್ಲೆಗಳಲ್ಲಿ ಮತ್ತೆ ಕೊರೊನಾ ಆರ್ಭಟ ಜೋರಿದೆ. ಒಂದು ವಾರದಿಂದ ಐದು ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗ್ತಿತ್ತು ಇಂದು ಬರೋಬ್ಬರಿ 7 ಸಾವಿರ ಸನಿಹಕ್ಕೆ ಕೇಸ್ ಬಂದಿದೆ.

 ರಾಜ್ಯದಲ್ಲಿ ಬರೋಬ್ಬರಿ 6,955 ಕೇಸ್ ದಾಖಲಾಗಿ 36 ಜನ ಸಾವನ್ನಪ್ಪಿದ್ದಾರೆ. ಕೊರೊನಾ ಪ್ರಕರಣಗಳ ಜೊತೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗ್ತಾ ಇರೋದು ಎರಡನೇ ಅಲೆಯಲ್ಲಿ ಬೀಕರ ಪರಿಸ್ಥಿತಿ ಎದುರಾಗುತ್ತಾ ಎಂಬ ಆತಂಕ ಶುರುವಾಗಿದೆ. ಇಂದಿನ ಕೇಸ್ ನಲ್ಲಿ ಬೆಂಗಳೂರಿದ್ದೆ ಬಹುಪಾಲಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 4,384 ಕೇಸ್ ದಾಖಲಾಗಿದೆ. ಬೆಂಗಳೂರು ಒಂದರಲ್ಲೆ 19 ಜನ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದ ಜೊತೆ ಮೈಸೂರಿನಲ್ಲಿ 266 ಕೇಸ್ ದಾಖಲಾದ್ರೆ, ತುಮಕೂರಿನಲ್ಲಿ 206 ಕೇಸ್ ದಾಖಲಾಗಿದೆ. ಇದರ ಜೊತೆ ದಕ್ಷಿಣ ಕನ್ನಡ, ಮೈಸೂರು, ಹಾಸನ, ಬೀದರ್, ಬಳ್ಳಾರಿ, ವಿಜಯಪುರದಲ್ಲೂ ಕೇಸ್ ಏರಿಕೆಯಾಗ್ತಾ ಇದೆ. ಜಿಲ್ಲೆಗಳಲ್ಲಿ ಕೇಸ್ ಏರಿಕೆಯಾಗ್ತಾ ಇರೋದು ಆತಂಕ ಮೂಡಿಸಿದೆ. ಇಂದು 3,350 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾಗೆ 36 ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 12,849ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 405 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.7.04ಕ್ಕೆ ಏರಿಕೆಯಾಗಿದೆ. ಇತ್ತ ಮರಣ ಪ್ರಮಾಣ ಶೇ. 0.51ಕ್ಕೆ ತಲುಪಿದೆ. ರಾಜ್ಯದಲ್ಲಿ ಇದುವರೆಗೂ 10,55,040 ಕೋವಿಡ್ ಪ್ರಕರಣಗಳು ವರದಿಯಾಗಿವೆ. 83,61,487 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 44, ಬಳ್ಳಾರಿ 62, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ 152, ಬೆಂಗಳೂರು ನಗರ 4,384, ಬೀದರ್ 215, ಚಾಮರಾಜನಗರ 35, ಚಿಕ್ಕಬಳ್ಳಾಪುರ 74, ಚಿಕ್ಕಮಗಳೂರು 36, ಚಿತ್ರದುರ್ಗ 59, ದಕ್ಷಿಣ ಕನ್ನಡ 137, ದಾವಣಗೆರೆ 49, ಧಾರವಾಡ 88, ಗದಗ 17, ಹಾಸನ 100, ಹಾವೇರಿ 16, ಕಲಬುರಗಿ 276, ಕೊಡಗು 20, ಕೋಲಾರ 121, ಕೊಪ್ಪಳ 28, ಮಂಡ್ಯ 119, ಮೈಸೂರು 266, ರಾಯಚೂರು 30, ರಾಮನಗರ 72, ಶಿವಮೊಗ್ಗ 47, ತುಮಕೂರು 206, ಉಡುಪಿ 68, ಉತ್ತರ ಕನ್ನಡ 64, ವಿಜಯಪುರ 71 ಮತ್ತು ಯಾದಗಿರಿಯಲ್ಲಿ 24 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *