Connect with us

Districts

ಬಿಜೆಪಿಯ ರೈಲಿನ ಜೊತೆ ಜೆಡಿಎಸ್ ಬೋಗಿ ಸೇರಿದ್ರೆ ಅವರಿಗೂ, ರಾಜ್ಯಕ್ಕೂ ಒಳಿತು: ಸುಧಾಕರ್

Published

on

– ನಮ್ಮ ಜೊತೆ ಸೇರಿದ್ರೆ ದೆಹಲಿ ಸೇರ್ತಾರೆ

ಚಿಕ್ಕಬಳ್ಳಾಪುರ: ಬಿಜೆಪಿ ಪಕ್ಷ ಎಂಬ ರೈಲಿನ ಜೊತೆ ಜೆಡಿಎಸ್ ಪಕ್ಷವೆಂಬ ಬೋಗಿಯೂ ಸೇರಿಕೊಂಡರೆ ದೆಹಲಿ ಸೇರಬಹುದು. ಇಲ್ಲವಾದರೆ ಹಳ್ಳಿಯಲ್ಲೇ ಉಳಿಯಬೇಕಾದಿತು ಅಂತ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗ್ರಾಮಪಂಚಾಯತಿ ಚುನಾವಣೆ ಫಲಿತಾಂಶ ಸಂಬಂಧ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಈ ಬಾರಿ 469 ಸ್ಥಾನಗಳ ಪೈಕಿ 340 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದರ ಜೊತೆಗೆ 40 ಮಂದಿ ಇತರೆ ಪಕ್ಷ ಹಾಗೂ ಪಕ್ಷೇತರರು ನಮ್ಮ ಜೊತೆ ಸೇರಲಿದ್ದಾರೆ. ಹೀಗಾಗಿ ಕ್ಷೇತ್ರದ 29 ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತರೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದರು.

ಚಿಂತಾಮಣಿಯಲ್ಲಿ ರಾಜಕೀಯ ಧೃವೀಕರಣ: ಗೌರಿಬಿದನೂರುನಲ್ಲೂ ಸಹ ಬಿಜೆಪಿ ಬೆಂಬಲಿತ 89 ಅಭ್ಯರ್ಥಿಗಳು ಗೆಲುವು ಪಡೆದಿದ್ದು, ಬಾಗೇಪಲ್ಲಿ -ಗುಡಿಬಂಡೆಯಲ್ಲಿ 40 ಸ್ಥಾನ ಪಡೆಯಲಾಗಿದ್ದು ಉತ್ತಮ ಆರಂಭ ಆಗಿದೆ. ಶಿಡ್ಲಘಟ್ಟದಲ್ಲಿ 68-69, ಚಿಂತಾಮಣಿ ಯಲ್ಲಿ 25 ಸ್ಥಾನ ಗಳಿಸಿದ್ದೇವೆ. ಚಿಂತಾಮಣಿಯಲ್ಲಿ ಕಡಿಮೆ ಸ್ಥಾನ ಬಂದಿದ್ದರೂ ಮುಂದಿನ ದಿನಗಳಲ್ಲಿ ಪ್ರಭಾವಿ ರಾಜಕಾರಣಿ ಶಾಸಕರಾಗುವಂತಹ ವ್ಯಕ್ತಿ ಬಿಜೆಪಿಗೆ ಬರಲಿದ್ದು, ಚಿಂತಾಮಣಿಯಲ್ಲಿ ಮುಂದೆ ರಾಜಕೀಯ ಧ್ರುವೀಕರಣ ಆಗಲಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ಪರಿಸ್ಥಿತಿ ಯಾವ ಸ್ಥಿತಿ ತಲುಪಿದೆ ಅಂತ ದೇಶದ ಜನತೆಗೆ ಗೊತ್ತಿದೆ. ಆದರೆ ಜೆಡಿಎಸ್ ಪರಿಸ್ಥಿತಿ ಹಾಗಿಲ್ಲ. ಇನ್ನೂ ದಕ್ಷಿಣ ಕರ್ನಾಟಕದಲ್ಲಿ ಶಕ್ತಿ ಹೊಂದಿದೆ. ಇನ್ಯಾವತ್ತು ಜೆಡಿಎಸ್ ನವರು ಕಾಂಗ್ರೆಸ್ ನವರ ಸಹವಾಸ ಮಾಡಲ್ಲ. ನಮ್ಮ ಕ್ಷೇತ್ರವೂ ಸೇರಿ ಕಾಂಗ್ರೆಸ್ ಜೊತೆ ಹೋದ್ರೆ ಏನಾಗುತ್ತೆ ಅನ್ನೋ ಅರಿವು ಅವರಿಗಿದೆ. ಹೀಗಾಗಿ ಜೆಡಿಎಸ್ ನವರು ನಮ್ಮ ಕ್ಷೇತ್ರದಲ್ಲಿ ನಮ್ಮ ಜೊತೆ ಬಂದ್ರೆ ಉತ್ತಮ ಆಡಳಿತ ನಡೆಸಲು ಬೋನಸ್ ಸಿಕ್ಕಂತಾಗುತ್ತೆ ಎಂದು ಹೇಳಿದರು.

ದೆಹಲಿ ಸೇರ್ತಾರೆ: ಜೆಡಿಎಸ್ ನವರಿಗೆ ಯಾರ ಜೊತೆ ಇದ್ದರೆ ಅವರಿಗೆ ಒಳ್ಳೆಯದು ಅಂತ ಅರ್ಥ ಆಗುತ್ತೆ. ಅಂತಹ ರಾಜಕೀಯ ಧ್ರುವೀಕರಣ ಆದ್ರೆ ರಾಜ್ಯದ ಜನತೆ ಹಾಗೂ ಜೆಡಿಎಸ್ ಗೂ ಒಳ್ಳೆಯದು. ಕಾಂಗ್ರೆಸ್ ಜೊತೆ ಹೋದಾಗಲೆಲ್ಲಾ ಅವರ ಅಸ್ತಿತ್ವವೇ ಹಾಳಾಗಿದೆ. ತಮ್ಮ ಶಾಸಕರನ್ನ ಕಳೆದುಕೊಂಡಿದೆ. ಇದರಿಂದ ಜೆಡಿಎಸ್ ಗೆ ಇರುವ ಒಂದೇ ಅವಕಾಶ ಅದು ಬಿಜೆಪೆ ಜೊತೆ ಗುರುತಿಸಿಕೊಳ್ಳೋದ್ರಿಂದ ಅವರಿಗೆ ಲಾಭ ರಾಜ್ಯಕ್ಕೂ ಒಳಿತಾಗಲಿದೆ. ಬಿಜೆಪಿ ಜನರ ಪರಸರ್ಕಾರ ಅಂತ ಇಡೀ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಬಿಜೆಪಿ ರೈಲಿನ ಜೊತೆ ಹತ್ತಿಕೊಂಡವರು ದೆಹಲಿ ಸೇರ್ತಾರೆ ಇಲ್ಲ ಅಂದ್ರೆ ಹಳ್ಳಿಯಲ್ಲೇ ಉಳಿದು ಮಿಸ್ ಆಗ್ತಾರೆ ಅಂತ ವಿಮರ್ಷೆ ಮಾಡಿದರು.

Click to comment

Leave a Reply

Your email address will not be published. Required fields are marked *

www.publictv.in