Wednesday, 15th August 2018

Recent News

ರಾಜ್ಯದ ಜನತೆ ಡೀಲ್ ಪಾರ್ಟಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ: ಹೆಚ್.ಆಂಜನೇಯ

ಚಿತ್ರದುರ್ಗ: ಕರ್ನಾಟಕ ಜನತೆ ಡೀಲ್ ಪಾರ್ಟಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ. ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳ ವಿರುದ್ಧ ಅಪಪ್ರಚಾರ ಮಾಡಲಾಯಿತು. ಪ್ರಧಾನಿ ಮೋದಿ ಕೂಡ ಆಧಾರ ರಹಿತವಾಗಿ ಆರೋಪ ಮಾಡಿದ್ರು ಅಂತಾ ಮಾಜಿ ಸಮಾಜ ಕಲ್ಯಾಣ ಸಚಿವ ಆಂಜನೇಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಗೆ ಬಹುಮತ ಸಿಗದಿರುವುದು ನಮಗೆ ನೆಮ್ಮದಿ ತಂದಿದೆ. ವಾಮ ಮಾರ್ಗದ ಮೂಲಕ ಗೆಲುವು ಸಾಧಿಸಲು ಹೊರಟ್ಟಿದ್ದ ಬಿಜೆಪಿ ಯತ್ನಕ್ಕೆ ವಿಫಲವಾಗಿದೆ. ಪ್ರಜಾಪ್ರಭುತ್ವಕ್ಕೆ ಅಪಚಾರವೆಸಗಿ, ಅಪಕೀರ್ತಿಗೆ ಒಳಗಾಗಿರುವ ಬಿಜೆಪಿಗೆ ಅಧಿಕಾರ ನೀಡದಿರುವುದು ಸ್ವಾಗತಾರ್ಹ. ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ್ರು.

ಚುನಾವಣೆಯಲ್ಲಿ ಸೋಲು-ಗೆಲುವನ್ನು ಎರಡನ್ನೂ ಸಮಾನಾಗಿ ಸ್ವೀಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲಿದ್ದು, ನಮ್ಮ ಬೆಂಬಲವನ್ನು ಜೆಡಿಎಸ್ ಗೆ ನೀಡುತ್ತೇವೆ ಅಂತಾ ತಿಳಿಸಿದ್ರು.

ಈ ಬಾರಿ ಹೆಚ್. ಆಂಜನೇಯ ಹೊಳಲ್ಕರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. ಆದ್ರೆ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ವಿರುದ್ಧ 40 ಸಾವಿರ ಮತಗಳಿಂದ ಪರಾಭವಗೊಂಡಿದ್ದಾರೆ.

Leave a Reply

Your email address will not be published. Required fields are marked *