Thursday, 17th October 2019

Recent News

ಇಂದು ಬೈ ಎಲೆಕ್ಷನ್ ರಿಸಲ್ಟ್: 2013ರಲ್ಲಿ ಯಾರಿಗೆ ಎಷ್ಟು ಮತ ಬಿದ್ದಿತ್ತು?

ಬೆಂಗಳೂರು: ಇಡೀ ರಾಜ್ಯದ ಗಮನ ಸೆಳೆದಿರೋ, ಭಾರೀ ಪೈಪೋಟಿ ನಡುವೆ ಪ್ರತಿಷ್ಠೆಯ ಅಖಾಡವಾಗಿರೋ ಬೈ ಎಲೆಕ್ಷನ್ ಫಲಿತಾಂಶ ಇಂದು ಪ್ರಕಟವಾಗಲಿದೆ. ನಂಜನಗೂಡಿನ ಜೆಎಸ್‍ಎಸ್ ಕಾಲೇಜಿನಲ್ಲಿ ಹಾಗೂ ಗುಂಡ್ಲುಪೇಟೆಯ ಸೇಂಟ್ ಜಾನ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಮತಎಣಿಕೆ ಪ್ರಾರಂಭವಾಗಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಪಷ್ಟ ಫಲಿತಾಂಶ ಸಿಗಲಿದೆ. ಪ್ರತಿಷ್ಠೆ, ಜಾತಿ ಲೆಕ್ಕಾಚಾರ ಹಾಗೂ ಅನುಕಂಪದ ಲೆಕ್ಕಾಚಾರಗಳ ಮೇಲೆ ಫಲಿತಾಂಶ ನಿಂತಿದೆ. ಆದರೂ ಸಾಕಷ್ಟು ಹಣಬಲ ಪ್ರದರ್ಶನವಾಗಿದೆ. ಮೂಲಗಳ ಪ್ರಕಾರ ನಂಜನಗೂಡು ಕ್ಷೇತ್ರದಲ್ಲಿ 35 ಕೋಟಿ ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ 40 ಕೋಟಿ ರೂಪಾಯಿ ಹಂಚಿದ್ದಾರೆ ಎನ್ನಲಾಗಿದೆ.

ಎರಡು ಕ್ಷೇತ್ರದಲ್ಲಿ ನಿಲ್ಲೋದು ಅಭಿವೃದ್ಧಿಯೋ, ಯಡಿಯೂರಪ್ಪ ಪ್ರತಿಷ್ಠೆಯೋ ಅಥವಾ ಸಿಎಂ ಸಿದ್ದರಾಮಯ್ಯನವರ ಪ್ರತಿಷ್ಠೆಯೋ ಅನ್ನೋದನ್ನ ಕಾದು ನೋಡಬೇಕು. ಈ ನಡುವೆ ಎರಡೂ ಕ್ಷೇತ್ರದಲ್ಲಿ ನಾವೇ ಗೆಲ್ತೀವಿ ಅಂತಾ ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಕೂಡಾ ಇದೇ ಭರವಸೆಯಲ್ಲಿದೆ.

ಪ್ರತಿಷ್ಠೆಯ ಕಣವಾಗಿರುವ ಎರಡು ಕ್ಷೇತ್ರಗಳಲ್ಲಿ 2013ರಲ್ಲಿ ಯಾರು ಎಷ್ಟು ಅಂತರದಿಂದ ಗೆದ್ದಿದ್ದಾರೆ? ಎಷ್ಟು ಮಂದಿ ಮತ ಚಲಾಯಿಸಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Leave a Reply

Your email address will not be published. Required fields are marked *