ಮೈಸೂರು, ಮಂಡ್ಯದಲ್ಲಿ ಕಾಂಗ್ರೆಸ್ ಗೆಲುವು

Advertisements

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು, ಮಂಡ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

Advertisements

ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ಕಾಂಗ್ರೆಸ್‍ನ ಡಾ. ಡಿ.ತಿಮ್ಮಯ್ಯ ಗೆಲುವು ಸಾಧಿಸಿದ್ದಾರೆ. ಎರಡನೇ ಸ್ಥಾನಕ್ಕೆ ಜೆಡಿಎಸ್-ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದೆ. ಬಿಜೆಪಿಯಿಂದ ಆರ್.ರಘು (ಕೌಟಿಲ್ಯ), ಜೆಡಿಎಸ್‍ನಿಂದ ಸಿ.ಎನ್.ಮಂಜೇಗೌಡ ಕಣದಲ್ಲಿದ್ದರು. ಇದನ್ನೂ ಓದಿ: ಗೆಲುವಿಗೆ ಕಾರಣರಾದ ನನ್ನ ತಾಯಿಯ ತ್ಯಾಗಕ್ಕೆ ಧನ್ಯವಾದ : ಸೂರಜ್ ರೇವಣ್ಣ

Advertisements

ಕ್ಷೇತ್ರದ ಅಸಿಂಧು ಮತಗಳನ್ನು ಬೇರ್ಪಡಿಸುವ ವೇಳೆ ಕಾಂಗ್ರೆಸ್‍ಗೆ ಮೊದಲ ಪ್ರಾಶಸ್ತ್ಯ ಮತಗಳು ಹೆಚ್ಚು ಇವೆ. ಎರಡನೇ ಸ್ಥಾನಕ್ಕೆ ಜೆಡಿಎಸ್ ಮತ್ತು ಬಿಜೆಪಿ ಪೈಪೋಟಿ ನಡೆಸುತ್ತಿವೆ.

ಇನ್ನು ಜೆಡಿಎಸ್ ಭದ್ರಕೋಟೆಯೇ ಆಗಿದ್ದ ಮಂಡ್ಯದಲ್ಲಿ ಜೆಡಿಎಸ್ ಸೋಲನುಭವಿಸಿದೆ. ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡ ಸೋತಿದ್ದು, ಕಾಂಗ್ರೆಸ್‍ನ ದಿನೇಶ್ ಗೂಳಿಗೌಡ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕೋಟ, ಮಂಜುನಾಥ ಭಂಡಾರಿಗೆ ಜಯ

Advertisements

Advertisements
Exit mobile version