Connect with us

Districts

ಮನೆ ಹಿಂದೂ, ಮತದಾರ ಮಾತ್ರ ಮುಸ್ಲಿಂ: ಪ್ರಧಾನಿಗೆ ಪ್ರತಾಪ್ ಸಿಂಹ ದೂರು

Published

on

ಮೈಸೂರು: ಶುಕ್ರವಾರ ನಡೆದ ಮೈಸೂರು ಮಹಾ ನಗರ ಪಾಲಿಕೆ ಚುನಾವಣೆ ಸಂಬಂಧ ಮೈಸೂರು ಸಂಸದ ಪ್ರತಾಪ್ ಸಿಂಹ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿ ದೂರು ಕೊಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ, ಮೈಸೂರು ನಗರಪಾಲಿಕೆಗೆ ಚುನಾವಣೆ ಮುಗಿಯಿತು. ಆದರೆ ನಕಲಿ ಮತದಾನ ತಡೆಯಲು ಸಾಧ್ಯವಾಗಿಲ್ಲ. ನಕಲಿ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಕ್ಲಾಸ್!

ಕೆಲವು ಮತದಾರರು ಗುರುತಿನ ಚೀಟಿ ಹೊಂದಿದ್ದಾರೆ. ಆದರೆ, ಅವರ ವಿಳಾಸಕ್ಕೆ ಹೋಗಿ ಪರಿಶೀಲಿಸಿದರೆ ಖಾಲಿ ಸೈಟ್ ಇದೆ. 2-3 ಮತದಾರರು ಇರುವ ಹಿಂದೂಗಳ ಮನೆಗಳ ವಿಳಾಸದಲ್ಲಿ 15-20 ಮುಸ್ಲಿಂ ಮತದಾರರ ಹೆಸರಿದೆ. ಹೀಗಾಗಿ ನಕಲಿ ಮತದಾನ ತಡೆಯಲು ದಯವಿಟ್ಟು ವೋಟರ್ ಐಡಿಯನ್ನು ಆಧಾರ್ ಜತೆ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv