ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ – ಬಿಜೆಪಿಯಿಂದ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಭಿಯಾನ

Advertisements

ಬೆಂಗಳೂರು: ಕಾಂಗ್ರೆಸ್‌ನ PAY CM ಅಭಿಯಾನಕ್ಕೆ ಬಿಜೆಪಿ ಸಿದ್ದರಾಮಯ್ಯ(Siddaramaiah), ಡಿಕೆ ಶಿವಕುಮಾರ್(Shivakumar) ಫೋಟೋ ಹಾಕಿ ತಿರುಗೇಟು ನೀಡಲು ಮುಂದಾಗಿದೆ.

Advertisements

ಸ್ಕ್ಯಾನ್ ಕೋಡ್ ಮೇಲೆ ಸಿದ್ದರಾಮಯ್ಯ, ಡಿಕೆಶಿ ಚಿತ್ರ ಹಾಕಿ, ರಾಜ್ಯ ಲೂಟಿ ಮಾಡಿದ ಈ ಭ್ರಷ್ಟ(Corruption) ಜೋಡಿಯನ್ನು ರಾಜ್ಯದಿಂದ ಕಿತ್ತೆಸೆಯಲು ಇದನ್ನು ಸ್ಕ್ಯಾನ್ ಮಾಡಿ ಅಂತ ಟಾಂಗ್ ನೀಡಿದೆ. ಇದನ್ನೂ ಓದಿ: 40 ಪರ್ಸೆಂಟ್‌ ಸರ್ಕಾರ ಅಣಕ – ಪೇಟಿಎಂ ಮಾದರಿಯಲ್ಲಿ ʻಪೇ ಸಿಎಂʼ ಪೋಸ್ಟರ್‌ ವೈರಲ್‌

Advertisements

ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ ಎಂದು ಅಭಿಯಾನ ಮಾಡಲು ಸಿದ್ಧತೆ ನಡೆಸಿದೆ. ಹಿರಿಯ ನಾಯಕರ ಗಮನಕ್ಕೆ ತಂದು ಅಭಿಯಾನ ನಡೆಸಲು ಮುಂದಾಗಿದೆ.

ಬೇಡಾಗಿದ್ದಾರೆ ಹೆಸರಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಫೋಟೋ ಪ್ರಕಟಿಸಿದೆ  ನಿಮ್ಮ ಹತ್ತಿರ ಇವರನ್ನ ಸುಳಿದಾಡಲು ಬಿಡಬೇಡಿ. ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಂತ ಕಾಲೆಳೆದು ಪೋಸ್ಟರ್ ರಚಿಸಿದೆ.

ಕಾಂಗ್ರೆಸ್‌ ಪೋಸ್ಟರ್‌ಗೆ ಪ್ರತಿಯಾಗಿ ಬಿಜೆಪಿ ಕೌಂಟರ್‌ ಕೊಟ್ಟರೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಫೋಟೋ ಇರುವ ಸ್ಕ್ಯಾನ್‌ ರೀಡ್‌ ಆಗುತ್ತಿಲ್ಲ.

Advertisements

Live Tv

Advertisements
Exit mobile version