ಬೆಳಗಾವಿ: ಪ್ರತಿಯೊಬ್ಬರಿಗೆ 500 ರೂಪಾಯಿ ಕೊಟ್ಟು ಕರ್ಕೊಂಡು ಬರಬೇಕು ಅಂತಾ ಪ್ರಜಾಧ್ವನಿ ಯಾತ್ರೆ ಬಸ್ಸಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಡಿದ ಮಾತಿನ ವೀಡಿಯೋ ವೈರಲ್ ಆಗಿದೆ.
ಬೆಳಗಾವಿಯ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Prajadwani Yatra) ಯ ಸಮಾವೇಶ ಮುಗಿಸಿ ಬಸ್ಸಿನಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarakiholi), ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar), ಎಂಎಲ್ಸಿ ಚೆನ್ನರಾಜ ಹಟ್ಟಿಹೊಳಿ ಸೇರಿದಂತೆ ಇತರ ನಾಯಕರು ವಾಪಸ್ ಬರುತ್ತಿದ್ದರು. ಇದನ್ನೂ ಓದಿ: ಕಾಂಗ್ರೆಸ್ನತ್ತ ಮುಖ ಮಾಡಿದ ಕೆಆರ್ ಪೇಟೆ ಜೆಡಿಎಸ್ ಭಿನ್ನಮತೀಯರು
Advertisement
Advertisement
ನೀವಿಬ್ಬರು ಸಮಾವೇಶಕ್ಕೆ ಬರಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಹ್ವಾನ ನೀಡಿದರು. ಚುನಾವಣೆ ಇರೋದ್ರಿಂದ ಅವರು ಜನರನ್ನು ಸೇರಿಸುತ್ತಾರೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಈ ವೇಳೆ ಪ್ರತಿಯೊಬ್ಬರನ್ನು 500 ರೂಪಾಯಿ ಕೊಟ್ಟು ಕರೆದುಕೊಂಡು ಬರಬೇಕು ಎಂದು ಸಿದ್ದರಾಮಯ್ಯ ಹೇಳಿದ 20 ಸೆಕೆಂಡ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement
ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ.#CorruptCongress pic.twitter.com/aHp6ISBADG
— BJP Karnataka (@BJP4Karnataka) March 1, 2023
Advertisement
ಜನರನ್ನು ಸೇರಿಸಲು 500 ರೂ. ಕೊಡಬೇಕು ಎಂದಿರುವ ಸಿದ್ದರಾಮಯ್ಯ, ವಿಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ್ದಾರಾ? ಅಥವಾ ತಾವು ನಡೆಸುವ ಸಮಾವೇಶ ಬಗ್ಗೆ ಮಾತನಾಡಿದ್ದಾರಾ ಎಂಬ ಬಗ್ಗೆ ಅಸ್ಪಷ್ಟವಾಗಿದೆ. ಸದ್ಯ ಈ ವೀಡಿಯೋವನ್ನು ಬಿಜೆಪಿ (BJP) ಕರ್ನಾಟಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಕಿಡಿಕಾರಿದೆ.