Wednesday, 15th August 2018

Recent News

ಇಡೀ ದೇಶದಲ್ಲಿ ನಮ್ಮದು ಮಾದರಿ ಸರ್ಕಾರವಾಗಿತ್ತು: ಯತೀಂದ್ರ ಸಿದ್ದರಾಮಯ್ಯ

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಸಾಮಾಜಿಕ ನ್ಯಾಯ ಕೊಡುವಂತಹ ಕೆಲಸ ಮಾಡಲಾಗಿತ್ತು. ಇಡೀ ದೇಶದಲ್ಲಿ ನಮ್ಮದು ಮಾದರಿ ಸರ್ಕಾರವಾಗಿತ್ತು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣೆಯ ಬಳಿಕ ಬಾದಾಮಿ ಕ್ಷೇತ್ರದಲ್ಲಿ 5 ದಿನಗಳ ಪ್ರವಾಸ ಕೈಗೊಂಡಿರುವ ತಂದೆ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಇಂದು ಯತೀಂದ್ರ ಸಿದ್ದರಾಮಯ್ಯ ಅವರು ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕ್ಷೇತ್ರದ ಜನತೆಗೆ ತಂದೆಯನ್ನು ಗೆಲ್ಲಿಸಿಕೊಟ್ಟಿದಕ್ಕೆ ಚಿರಋಣಿಯಾಗಿದ್ದು, ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಭರವಸೆ ನೀಡಿದರು.

ಇದೇ ವೇಳೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಸೋಲಿನ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಚಾಮುಂಡೇಶ್ವರಿಯಲ್ಲಿ ಜಾತಿ, ಹಣ ಹಾಗೂ ತೋಳ್ ಬಲಕ್ಕೆ ಮಾರುಹೋದರು. ಆದರೆ ಬಾದಾಮಿ ಕ್ಷೇತ್ರದ ಜನತೆ ತಮ್ಮನ್ನು ಕೈ ಹಿಡಿದ್ದಾರೆ ಎಂದು ಹೇಳಿ ಸಿದ್ದರಾಮಯ್ಯ ಅವರ ಮುಂದಾಳತ್ವದ ಸರ್ಕಾರ ಕೈಗೊಂಡ ಸಾಧನೆಗಳನ್ನು ಹೊಗಳಿದರು.

ಈ ಹಿಂದೆ ಚಾಂಮುಡೇಶ್ವರಿ ಕ್ಷೇತ್ರ ಹೇಗೆ ಸಿದ್ದರಾಮಯ್ಯ ಅವರಿಗೆ ರಾಜಕೀಯ ಭವಿಷ್ಯವನ್ನು ನೀಡುತ್ತೋ, ಹಾಗೆಯೇ ಬಾದಾಮಿ ಕ್ಷೇತ್ರದ ಜನತೆ ಈಗ ಆದೇ ರೀತಿ ರೀತಿ ಹೊಸ ಉತ್ಸಾಹವನ್ನು ನೀಡಿದೆ. ವರುಣಾ ಕ್ಷೇತ್ರವೂ ಸಹ ಮಾದರಿಯಾಗಿದ್ದು, ಮುಂದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾದ ಕರ್ತವ್ಯ ನಮ್ಮ ಮೇಲಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಟಗೊಳಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *