Bengaluru City
3,589 ಪಾಸಿಟಿವ್, 49 ಬಲಿ – 8,521 ಡಿಸ್ಚಾರ್ಜ್

ಬೆಂಗಳೂರು: ಇಂದು 3,589 ಮಂದಿಗೆ ಸೋಂಕು ಬಂದಿದ್ದು, 49 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಇಂದು 8,521 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,20,398ಕ್ಕೆ ಏರಿಕೆಯಾಗಿದೆ. ಈ ಪೈಕಿ 59,499 ಸಕ್ರಿಯ ಪ್ರಕರಣಗಳಿದ್ದು, 7,49,740 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು ರಾಜ್ಯದಲ್ಲಿ 11,140 ಮಂದಿ ಮೃತಪಟ್ಟಿದ್ದು ಸದ್ಯ 935 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 23,912 ಆಂಟಿಜನ್ ಟೆಸ್ಟ್, 79,369 ಆರ್ಟಿ ಪಿಸಿಆರ್ ಟೆಸ್ಟ್ ಸೇರಿದಂತೆ ಒಟ್ಟು 1,03,281 ಕೋವಿಡ್ 19 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 78,04,312 ಕೋವಿಡ್ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರ 1811, ಚಿಕ್ಕಬಳ್ಳಾಪುರ 143, ದಕ್ಷಿಣ ಕನ್ನಡ 137, ತುಮಕೂರು 132 ಮಂದಿಗೆ ಕೊರೊನಾ ಬಂದಿದೆ.
