Bengaluru City
ಇಂದು 1,185 ಪಾಸಿಟಿವ್, 11 ಬಲಿ – 1,594 ಡಿಸ್ಚಾರ್ಜ್

ಬೆಂಗಳೂರು: ಇಂದು ಒಟ್ಟು 1,185 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 1,594 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.
ಇಲ್ಲಿಯವರೆಗೆ ಒಟ್ಟು 9,03,425 ಮಂದಿಗೆ ಸೋಂಕು ಬಂದಿದ್ದು, 8,75,796 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಒಟ್ಟು 15,645 ಸಕ್ರಿಯ ಪ್ರಕರಣಗಳಿವೆ. ಒಟ್ಟು ರಾಜ್ಯದಲ್ಲಿ ಮೃತರ ಸಂಖ್ಯೆ 11,965ಕ್ಕೆ ಏರಿಕೆ ಆಗಿದ್ದು, ಐಸಿಯುನಲ್ಲಿ 253 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 15,270 ಆಂಟಿಜನ್ ಟೆಸ್ಟ್, 74,260 ಆರ್ಟಿ ಪಿಸಿಆರ್ ಟೆಸ್ಟ್ ಸೇರಿದಂತೆ ಒಟ್ಟು 89,530 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 1,25,09,743 ಕೊರೊನಾ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 673 ಪಾಸಿಟಿವ್ ಬಂದರೆ 3 ಮಂದಿ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 56, ದಕ್ಷಿಣ ಕನ್ನಡ 38, ಮೈಸೂರು 35 ಮಂದಿಗೆ ಸೋಂಕು ಬಂದಿದೆ. ಐಸಿಯುನಲ್ಲಿ 253 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬೆಂಗಳೂರು ನಗರ 106, ಕಲಬುರಗಿ 25, ತುಮಕೂರು 15 ಮಂದಿ ಐಸಿಯುನಲ್ಲಿದ್ದಾರೆ.
