Connect with us

Bengaluru City

1,791 ಮಂದಿಗೆ ಕೊರೊನಾ, 21 ಸಾವು – 1,947 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Published

on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಳ ಸಂಖ್ಯೆ ಇಳಿಮುಖವಾಗಿದ್ದು, ಇಂದು ರಾಜ್ಯದಲ್ಲಿ 1,791 ಹೊಸ ಪ್ರಕರಣಗಳು ವರದಿಯಾಗಿವೆ. ಜೊತೆಗೆ 1,947 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಈವರೆಗೂ ರಾಜ್ಯದಲ್ಲಿ 8,29,188 ಜನ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.95.75ರಷ್ಟಿದೆ. ಇನ್ನು ಕೋವಿಡ್ ಮರಣ ಪ್ರಮಾಣ ಶೇ.1.17 ಮತ್ತು ಖಚಿತ ಪ್ರಕರಣಗಳ ಪ್ರಮಾಣ ಶೇ.1.84ರಷ್ಟಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,65,931ಕ್ಕೆ ಏರಿಕೆಯಾಗಿದ್ದು, 25,146 ಸಕ್ರಿಯ ಪ್ರಕರಣಗಳಿವೆ.

ಇಂದು ಕೊರೊನಾಗೆ 21 ಸೋಂಕಿತರು ಮರಣ ಹೊಂದಿದ್ದು, 636 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 97,042 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜಧಾನಿಯಲ್ಲಿಯೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಇಂದು 933 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 17,703 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 14, ಬಳ್ಳಾರಿ 18, ಬೆಳಗಾವಿ 32, ಬೆಂಗಳೂರು ಗ್ರಾಮಾಂತರ 33, ಬೆಂಗಳೂರು ನಗರ 933, ಬೀದರ್ 7, ಚಾಮರಾಜನಗರ 4, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 8, ಚಿತ್ರದುರ್ಗ 44, ದಕ್ಷಿಣ ಕನ್ನಡ 45, ದಾವಣಗೆರೆ 16, ಧಾರವಾಡ 14, ಗದಗ 12, ಹಾಸನ 71, ಹಾವೇರಿ 5, ಕಲಬುರಗಿ 15, ಕೊಡಗು 13, ಕೋಲಾರ 21, ಕೊಪ್ಪಳ 1, ಮಂಡ್ಯ 56, ಮೈಸೂರು 97, ರಾಯಚೂರು 8, ರಾಮನಗರ 10, ಶಿವಮೊಗ್ಗ 17, ತುಮಕೂರು 86, ಉಡುಪಿ 33, ಉತ್ತರ ಕನ್ನಡ 31, ವಿಜಯಪುರ 121 ಮತ್ತು ಯಾದಗಿರಿಯಲ್ಲಿ 12 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *