Connect with us

Bengaluru City

1,247 ಜನರಿಗೆ ಕೋವಿಡ್, 13 ಮಂದಿ ಸಾವು – 877 ಡಿಸ್ಚಾರ್ಜ್

Published

on

ಬೆಂಗಳೂರು: ರಾಜ್ಯದಲ್ಲಿ ಇಂದು 1,247 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇಂದು 877 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಕೊರೊನಾಗೆ 13 ಜನ ಮರಣ ಹೊಂದಿದ್ದು, ಸಾವನ್ನಪ್ಪಿದವರ ಸಂಖ್ಯೆ 11,834ಕ್ಕೇರಿಕೆಯಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ 8,90,360ಕ್ಕೆ ಏರಿಕೆಯಾಗಿದ್ದು, 25,046 ಸಕ್ರಿಯ ಪ್ರಕರಣಗಳಿವೆ. ಸದ್ಯ 287 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್-19 ಸೋಂಕು ಖಚಿತ ಪ್ರಮಾಣ ಶೇ.1.27 ಮತ್ತು ಮರಣ ಪ್ರಮಾಣ ಶೇ.1.04ರಷ್ಟಿದೆ. ರಾಜಧಾನಿಯಲ್ಲಿಯೂ ಕೊಂಚ ಕೊರೊನಾ ಇಳಿಕೆಯಾಗಿದ್ದು, ಇಂದು 620 ಹೊಸ ಪ್ರಕರಣಗಳು ವರದಿಯಾಗಿವೆ. ಇವತ್ತು 98,049 ಸ್ಯಾಂಪಲ್‍ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 13, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 19, ಬೆಂಗಳೂರು ನಗರ 620, ಬೀದರ್ 3, ಚಾಮರಾಜನಗರ 24, ಚಿಕ್ಕಬಳ್ಳಾಪುರ 20, ಚಿಕ್ಕಮಗಳೂರು 20, ಚಿತ್ರದುರ್ಗ 14, ದಕ್ಷಿಣ ಕನ್ನಡ 42, ದಾವಣಗೆರೆ 12, ಧಾರವಾಡ 32, ಗದಗ 5, ಹಾಸನ 49, ಹಾವೇರಿ 8, ಕಲಬುರಗಿ 19, ಕೊಡಗು 18, ಕೋಲಾರ 25, ಕೊಪ್ಪಳ 6, ಮಂಡ್ಯ 53, ಮೈಸೂರು 74, ರಾಯಚೂರು 14, ರಾಮನಗರ 4, ಶಿವಮೊಗ್ಗ 19, ತುಮಕೂರು 73, ಉಡುಪಿ 14, ಉತ್ತರ ಕನ್ನಡ 13, ವಿಜಯಪುರ 12 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

www.publictv.in