Bengaluru City
998 ಪಾಸಿಟಿವ್, 11 ಬಲಿ – 1,601 ಡಿಸ್ಚಾರ್ಜ್

ಬೆಂಗಳೂರು: ಕರ್ನಾಟಕದಲ್ಲಿ ಇಂದು 998 ಮಂದಿಗೆ ಸೋಂಕು ಬಂದಿದ್ದು 11 ಮಂದಿ ಸಾವನ್ನಪ್ಪಿ 1,601 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 8,94,004 ಕ್ಕೆ ಏರಿಕೆಯಾಗಿದೆ. ಈ ಪೈಕಿ 24,767 ಸಕ್ರಿಯ ಪ್ರಕರಣಗಳಿದ್ದು, 8,57,351 ಮಂದಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಒಟ್ಟು 11,867 ಮಂದಿ ಮೃತಪಟ್ಟಿದ್ದು, ಸದ್ಯ 279 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 6,472 ಆಂಟಿಜನ್ ಟೆಸ್ಟ್ ಮಾಡಿದ್ದು 69,999 ಆರ್ಟಿ ಪಿಸಿಆರ್ ಟೆಸ್ಟ್ ಮಾಡಿದ್ದು ಒಟ್ಟು 76,471 ಪರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 501 ಮಂದಿಗೆ ಸೋಂಕು ಬಂದಿದ್ದು,861 ಮಂದಿ ಬಿಡುಗಡೆಯಾಗಿ 7 ಮಂದಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 48, ಹಾಸನ 43, ಮೈಸೂರು 34 ಮಂದಿಗೆ ಸೋಂಕು ಬಂದಿದೆ.
ಐಸಿಯುನಲ್ಲಿ 279 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 133, ತುಮಕೂರು 23, ಚಾಮರಾಜನಗರದಲ್ಲಿ 16, ಹಾಸನ 15 ಮಂದಿ ದಾಖಲಾಗಿದ್ದಾರೆ.
