Bengaluru CityDistrictsKarnatakaLatestMain Post

ಇಬ್ಬರು ಕೊರೊನಾಗೆ ಬಲಿ – 839 ಮಂದಿಗೆ ಸೋಂಕು ಪತ್ತೆ

ಬೆಂಗಳೂರು: ಕೊರೊನಾದಿಂದ ಇಬ್ಬರು ಮಂದಿ ಸಾವನ್ನಪ್ಪಿದ್ದು, 839 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಇಂದು ಬೆಂಗಳೂರು ನಗರದಲ್ಲಿಯೇ 775 ಹೊಸ ಕೇಸ್ ಪತ್ತೆಯಾಗಿದ್ದು, ಯಾವುದೇ ಮರಣ ಪ್ರಕರಣ ಪತ್ತೆಯಾಗಿಲ್ಲ. ಈ ಮೂಲಕ ನಗರದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,988ಕ್ಕೆ ಏರಿಕೆ ಕಂಡಿದೆ. ಇದೀಗ ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,398ಕ್ಕೆ ತಲುಪಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 3.40 ಇದ್ದು, ಮರಣ ಪ್ರಮಾಣ ಶೇ. 0.23 ದಾಖಲಾಗಿದೆ. ಇದನ್ನೂ ಓದಿ: ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ 

ಇಂದು 913 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,27,353 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 24,009 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 24,652 ಸ್ಯಾಂಪಲ್(ಆರ್‍ಟಿಪಿಸಿಆರ್ 16,878 + 7,774 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 01, ಬಳ್ಳಾರಿ 03, ಬೆಳಗಾವಿ 04, ಬೆಂಗಳೂರು ಗ್ರಾಮಾಂತರ 06, ಬೆಂಗಳೂರು ನಗರ 775, ಬೀದರ್ 01, ದಕ್ಷಿಣ ಕನ್ನಡ 17, ದಾವಣಗೆರೆ 01, ಧಾರವಾಡ 04, ಹಾಸನ 02, ಕಲಬುರಗಿ 03, ಕೋಲಾರ 03, ಮಂಡ್ಯ 03, ಮೈಸೂರು 04, ರಾಯಚೂರು 02, ಶಿವಮೊಗ್ಗ 01, ತುಮಕೂರು 03, ಉಡುಪಿ 03 ಮತ್ತು ಉತ್ತರ ಕನ್ನಡ 03 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಇದನ್ನೂ ಓದಿ:  ಬಕ್ರೀದ್ ಹಬ್ಬದಲ್ಲಿ ಅನಧಿಕೃತವಾಗಿ ಗೋಹತ್ಯೆಗೆ ಮುಂದಾದ್ರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ 

Live Tv

Leave a Reply

Your email address will not be published.

Back to top button