ರಾಜ್ಯದಲ್ಲಿಂದು 1,680 ಮಂದಿಗೆ ಕೊರೊನಾ – ಐವರು ಸಾವು

Advertisements

ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತಗಳು ಆಗುತ್ತಲೇ ಇದೆ. ನಿನ್ನೆ ರಾಜ್ಯದಲ್ಲಿ 1,608 ಕೊರೊನಾ ಕೇಸ್ ದಾಖಲಾಗಿದ್ದು, ಇಂದು 1,680ಕ್ಕೆ ಏರಿಕೆಯಾಗಿದೆ. ಸೋಂಕಿಗೆ ರಾಜ್ಯದಲ್ಲಿ ಇಂದು 5 ಜನ ಬಲಿಯಾಗಿದ್ದಾರೆ.

ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 10,351 ಇದೆ. ರಾಜಧಾನಿ ಬೆಂಗಳೂರಿನಲ್ಲಿ 1,058 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳ ಏರಿಳಿತ ಮುಂದುವರಿದಿದೆ. ಈವರೆಗೆ ಒಟ್ಟು 40,128 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 2,114 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Advertisements

ರಾಜ್ಯದ ಪಾಸಿಟಿವಿಟಿ ರೇಟ್ ಶೇ.6.85 ಕ್ಕೆ ತಲುಪಿದೆ. ಮರಣ ಪ್ರಮಾಣ ಶೇ.0.29ಕ್ಕೆ ತಲುಪಿದೆ. ರಾಜ್ಯದಲ್ಲಿ ಇಂದು ಒಟ್ಟು 1,21,670 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 24,504 ಸ್ಯಾಂಪಲ್(ಆರ್‌ಟಿ-ಪಿಸಿಆರ್ 19,116 + 5,388 ರ‍್ಯಾಪಿಡ್ ಆ್ಯಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು.ಲಲಿತ್ ನೇಮಕ

Advertisements

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 30, ಬಳ್ಳಾರಿ 42, ಬೆಳಗಾವಿ 43, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 1,058, ಬೀದರ್ 5, ಚಾಮರಾಜನಗರ 14, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 1, ಚಿತ್ರದುರ್ಗ 2, ದಕ್ಷಿಣ ಕನ್ನಡ 17, ದಾವಣಗೆರೆ 11, ಧಾರವಾಡ 39, ಗದಗ 0, ಹಾಸನ 65, ಹಾವೇರಿ 15, ಕಲಬುರಗಿ 33, ಕೊಡಗು 12, ಕೋಲಾರ 29, ಕೊಪ್ಪಳ 20, ಮಂಡ್ಯ 43, ಮೈಸೂರು 54, ರಾಯಚೂರು 32, ರಾಮನಗರ 14, ಶಿವಮೊಗ್ಗ 33, ತುಮಕೂರು 17, ಉಡುಪಿ 3, ಉತ್ತರ ಕನ್ನಡ 22, ವಿಜಯಪುರ 4 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನೂಪುರ್ ಶರ್ಮಾ ವಿರುದ್ಧದ ಎಲ್ಲಾ ಪ್ರಕರಣಗಳು ದೆಹಲಿಗೆ ವರ್ಗಾವಣೆ: ಸುಪ್ರೀಂ ಕೋರ್ಟ್

Live Tv

Advertisements
Exit mobile version