Sunday, 19th August 2018

ಸಿಇಟಿ ಫಲಿತಾಂಶ ಪ್ರಕಟ – ಅಗ್ರಿಕಲ್ಚರ್, ಎಂಜಿನಿಯರಿಂಗ್ ನಲ್ಲಿ ಶ್ರೀಧರ್ ದೊಡ್ಡಮನಿ ಫಸ್ಟ್ ರ್‍ಯಾಂಕ್

ಬೆಂಗಳೂರು: ಇಂದು ರಾಜ್ಯ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಎಂಜಿನಿಯರಿಂಗ್ ಮತ್ತು ಅಗ್ರಿಕಲ್ಚರ್ ನಲ್ಲಿ ಶ್ರೀಧರ್ ದೊಡ್ಡಮನಿ ಫ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಮಾಡಿ, ಉನ್ನತ ಶಿಕ್ಷಣ ಇಲಾಖೆ ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ. ರಾಜ್ ಕುಮಾರ್ ಕತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ಅವರು ಫಲಿತಾಂಶ ಬಿಡುಗಡೆ ಮಾಡಿದರು.

ವಿಜಯಪುರದಲ್ಲಿರುವ ಎಕ್ಸಲೆಂಟ್ ಸೈನ್ಸ್ ಕಾಲೇಜು ವಿದ್ಯಾರ್ಥಿ ಎಂಜಿನಿಯರಿಂಗ್ ಮತ್ತು ಅಗ್ರಿಕಲ್ಚರ್ ನಲ್ಲಿ ಶ್ರೀಧರ್ ದೊಡ್ಡಮನಿ ಪ್ರಥಮ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ನಾರಾಯಣ ಪೈ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಏಪ್ರಿಲ್ 19 ರಿಂದ 20 ರವರೆಗೆ ಸಿಇಟಿ ಪರೀಕ್ಷೆ ನಡೆದಿತ್ತು. ಈ ಬಾರಿ 1,98,639 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದರು. ಕಳೆದ ವರ್ಷ 1.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೃಷಿ ಕೋಟಾದ ಅಡಿ 83,302 ವಿದ್ಯಾರ್ಥಿಗಳು ಮತ್ತು ಎಂಜಿನಿಯರಿಂಗ್, ಪಶು ವೈದ್ಯಕೀಯ ಹಾಗೂ ಕೃಷಿ ವಿಜ್ಞಾನ ವೃತ್ತಿ ಪರ ಕೋರ್ಸ್ ಗಳಿಗೆ ಸಿಇಟಿ ಪರೀಕ್ಷೆ ನಡೆದಿತ್ತು.

ಫಲಿತಾಂಶಕ್ಕಾಗಿ
http://karresults.nic.in/

ಎಂಜಿನಿಯರಿಂಗ್:
1 ಶ್ರೀಧರ್ ದೊಡ್ಡಮನಿ – ಎಕ್ಸಲೆಂಟ್ ಸೈನ್ಸ್ ಕಾಲೇಜು ವಿಜಯಪುರ
2 ನಾರಾಯಣ ಪೈ – ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜು ದಕ್ಷಿಣ ಕನ್ನಡ
3 ದೇಬರ್ಶೋ ಸನ್ಯಾಸಿ – ಜಿಂದಾಲ್ ವಿದ್ಯಾ ಮಂದಿರ, ಬಳ್ಳಾರಿ

ಅಗ್ರಿಕಲ್ಚರ್:
1 ಶ್ರೀಧರ್ ದೊಡ್ಡಮನಿ – ಎಕ್ಸಲೆಂಟ್ ಸೈನ್ಸ್ ಕಾಲೇಜು ವಿಜಯಪುರ
2 ಶೈಕುಮಾರ್ – ಚೇತನ ಇಂಡಿಪೆಂಡೆಂಟ್ ಪಿಯು ಕಾಲೇಜು, ಹುಬ್ಬಳ್ಳಿ ಧಾರವಾಡ
3 ಮಹಿಮಾ ಕೃಷ್ಣ – ವಿವಿಎಸ್ ಸರ್ದಾರ್ ಪಟೇಲ್, ಬೆಂಗಳೂರು

ವೆಟರ್ನರಿ ಸೈನ್ಸ್:
1 ವಿನೀತ್ ಮೆಗುರ್ – ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು
2 ಅಪರೂಪ – ಸಂಕಲ್ಪ ಪಿಯು ಕಾಲೇಜು, ಬಳ್ಳಾರಿ
3 ಆದಿತ್ಯ ಚಿದಾನಂದ – ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್, ಬೆಂಗಳೂರು

ಫಾರ್ಮ:
1 ತುಹೀನ್ ಗಿರಿನಾಥ್ – ನಾರಾಯಣ ಇ ಟೆಕ್ನೋ ಬೆಂಗಳೂರು.
2 ಅನಿತಾ ಜೇಮ್ಸ್ – ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು.
3 ಯೋಗೇಶ್ ಮಾಧವ – ನಾರಾಯಣ ಇ ಟೆಕ್ನೋ, ಬೆಂಗಳೂರು.

Leave a Reply

Your email address will not be published. Required fields are marked *