Connect with us

Bagalkot

ಯುಡಿಯೂರಪ್ಪ ಬಜೆಟ್‌ – ಯಾವ ಜಿಲ್ಲೆಗೆ ಏನು ಸಿಕ್ಕಿದೆ? ಇಲ್ಲಿದೆ ವಿವರ

Published

on

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಅಳೆದು ತೂಗಿ ಅಯವ್ಯಯ ಮಂಡಿಸಿರುವ ಸಿಎಂ ಯಡಿಯೂರಪ್ಪ, ಇದ್ದಿದ್ದರಲ್ಲೇ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಶಿವಮೊಗ್ಗದ ಜೊತೆ ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ರಾಮನಗರ,  ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿರುವ ಬಾದಾಮಿಗೂ ಅನುದಾನ ನೀಡಿದ್ದಾರೆ. ಎಲ್ಲ ಜಿಲ್ಲೆಗಳಿಗೂ ಬಜೆಟ್ ಸ್ಪರ್ಶವಾಗಿದೆ.

ಶಿವಮೊಗ್ಗ
* ಆಯುರ್ವೇದ ಕಾಲೇಜು ಆಯುಷ್ ವಿವಿಯಾಗಿ ಮೇಲ್ದರ್ಜೆಗೆ
* ಶಿವಮೊಗ್ಗ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ 100 ಕೋಟಿ
* 2 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ
* ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರಕ್ಕೆ 25 ಕೋಟಿ
* ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 384 ಕೋಟಿ
* ಮಲೆನಾಡು ಕರಾವಳಿ ಭಾಗದ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ

ಬಾಗಲಕೋಟೆ
* ಬಾದಾಮಿಯ ಗುಳೇದಗುಡ್ಡದಲ್ಲಿ ಗುಳೆ ತಪ್ಪಿಸಲು ಜವಳಿ ಪಾರ್ಕ್ (ಖಾಸಗಿ-ಸರ್ಕಾರಿ ಸಹಭಾಗಿತ್ವ)
* ಬಾದಾಮಿಯಲ್ಲಿ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ ಯೋಜನೆಗೆ 25 ಕೋಟಿ
* ಕುರಿ, ಮೇಕೆಗಳ ಆಕಸ್ಮಿಕ ಸಾವಿಗೆ ಪರಿಹಾರ ನೀಡುವ `ಅನುಗ್ರಹ ಕೊಡುಗೆ’ ಮುಂದುವರಿಕೆ
* ಆಲಮಟ್ಟಿ ಜಲಾಶಯದಿಂದ ಬಾಗಲಕೋಟೆಗೆ ಜಲಮಾರ್ಗ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಕೆ

ರಾಮನಗರ
* ರಾಮನಗರದಲ್ಲಿ ರೇಷ್ಮೆಗೂಡು ಮಾರುಕಟ್ಟೆಗೆ ಹೈಟೆಕ್ ಸ್ಪರ್ಶ – 75 ಕೋಟಿ (ನಬಾರ್ಡ್ ಸಹಾಯ)

 

ಮೈಸೂರು
* ಮೈಸೂರು ಹೊರ ವಲಯದ ಮುಡಾ ವ್ಯಾಪ್ತಿ ಬಡಾವಣೆಗಳಿಗೆ ಕಾವೇರಿ ನೀರು
* 100 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ
* ಮೈಸೂರು ವೈದ್ಯಕೀಯ ವಿದ್ಯಾಲಯದಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪನೆ
* ಕೆಆರ್‍ಎಸ್ ಮಾದರಿಯಲ್ಲಿ ಕಬಿನಿಯಲ್ಲಿ ಪಾರ್ಕ್
* ನಿರ್ಮಾಣ ಕಾರ್ಮಿಕರಿಗೆ ವಸತಿ ನೀಡಲು ತಾತ್ಕಾಲಿಕ ವಸತಿ ಗೃಹ

ಹಾಸನ
* 10 ವರ್ಷದಿಂದ ಬಾಕಿ ಉಳಿದಿರುವ ಹಾಸನದ ವಿಮಾನ ನಿಲ್ದಾಣಕ್ಕೆ 175 ಕೋಟಿ
* ನಿರ್ಮಾಣ ಕಾರ್ಮಿಕರಿಗೆ ವಸತಿ ನೀಡಲು ತಾತ್ಕಾಲಿಕ ವಸತಿ ಗೃಹ
* ಅಂಬೇಡ್ಕರ್‌ ಭೇಟಿ ನೀಡಿದ್ದ ಎ.ಕೆ. ಬೋರ್ಡಿಂಗ್‌ ಹೋಮ್‌ನಲ್ಲಿ ಐತಿಹಾಸ ಸ್ಮಾರಕ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ
* ಶ್ರವಣಬೆಳಗೊಳ ಸೇರಿದಂತೆ ಇತರೇ ಜೈನ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ 50 ಕೋಟಿ.
* ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ಕಾಮಗಾರಿ ಈ ವರ್ಷ ಪೂರ್ಣ

ಚಿಕ್ಕಮಗಳೂರು
* ಮಲೆನಾಡು-ಕರಾವಳಿ ಭಾಗದಲ್ಲಿ ಕಾಲುಸಂಕ ನಿರ್ಮಾಣಕ್ಕೆ 100 ಕೋಟಿ
* ಕೆಮ್ಮಣ್ಣುಗುಂಡಿ ಪ್ರವಾಸೋದ್ಯಮಕ್ಕೆ ಹಸ್ತಾಂತರ
* ಭದ್ರಾ ಮೇಲ್ದಂಡೆ ಯೋಜನೆ ತ್ವರತಿ ಅನುಷ್ಠಾನಕ್ಕೆ ಆದ್ಯತೆ
* ಕೆಮ್ಮಣ್ಣುಗುಂಡಿ ಗಿರಿಧಾಮವನ್ನು ಅಂತರಾಷ್ಟ್ರೀಯ ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ
* ಅಡಿಕೆಗೆ ಸಂಬಂಧಿಸಿದ ಹಳದಿ ಎಲೆ ರೋಗ ಕುರಿತು ಸಂಶೋಧನೆ ಮತ್ತು ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ಅನದಾನ

ಮಂಡ್ಯ
* ಮಂಡ್ಯದಲ್ಲಿ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ
* ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ
* ಮಿಮ್ಸ್‌ನಲ್ಲಿ ಪ್ರಸಕ್ತ ಸಾಲಿನಿಂದ 100 ಸ್ನಾತಕೋತ್ತರ ಸೀಟುಗಳ ಹೆಚ್ಚಳ
* ಮೈ ಶುಗರ್ ಕಾರ್ಖಾನೆಯ ಆರಂಭದ ಪ್ರಸ್ತಾಪವಾಗಿಲ್ಲ

ತುಮಕೂರು
* ಶ್ರೀ ಶಿವಕುಮಾರ ಸ್ವಾಮೀಜಿ ಗೌರವಾರ್ಥ ಸ್ಮೃತಿ ವನ ನಿರ್ಮಾಣಕ್ಕೆ 2 ಕೋಟಿ ರೂ.
* ವೃಷಭಾವತಿ ಕಣಿವೆಯಿಂದ ತುಮಕೂರಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ

ಬೆಳಗಾವಿ
* ನಿಪ್ಪಾಣಿಯಲ್ಲಿ ಕೊಲ್ಹಾಪುರಿ ಪಾದರಕ್ಷೆ ಕ್ಲಸ್ಟರ್ ಸ್ಥಾಪನೆ
* ಬೆಳಗಾವಿ ವರ್ತುಲ ರಸ್ತೆ ನಿರ್ಮಾಣಕ್ಕೆ 140 ಕೋಟಿ
* ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗಕ್ಕೆ 463 ಕೋಟಿ
* ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ
* ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ಕಾಮಗಾರಿ ಈ ವರ್ಷ ಪೂರ್ಣ

ದಕ್ಷಿಣ ಕನ್ನಡ 
* ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್‍ಗೆ 150 ಕೋಟಿ
* ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ 10 ಕೋಟಿ
* ಮಂಗಳೂರು-ಪಣಜಿ ಜಲಮಾರ್ಗ ಅಭಿವೃದ್ಧಿ
* ಮಂಗಳೂರಿನಲ್ಲಿ ಅಡ್ವಾನ್ಸ್ ಬಯೋಟೆಕ್ ಸೆಂಟರ್ ಫಾರ್ ಆಕ್ವಾ ಮೆರಿನ್ ಸ್ಥಾಪನೆ
* ಮಂಗಳೂರಿನಲ್ಲಿ ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ಕಾಮಗಾರಿ ಈ ವರ್ಷ ಪೂರ್ಣ
* ಅಡಿಕೆಗೆ ಸಂಬಂಧಿಸಿದ ಹಳದಿ ಎಲೆ ರೋಗ ಕುರಿತು ಸಂಶೋಧನೆ ಮತ್ತು ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ಅನದಾನ

ಕೊಡಗು
* ಕೊಡಗಿನಲ್ಲಿ ಜಿಲ್ಲಾ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ 8 ಕೋಟಿ
* ರಸ್ತೆ, ಸೇತುವೆ ನಿರ್ಮಾಣ ಕಾರ್ಯಕ್ಕೆ 65 ಕೋಟಿ
* ಅಡಿಕೆಗೆ ಸಂಬಂಧಿಸಿದ ಹಳದಿ ಎಲೆ ರೋಗ ಕುರಿತು ಸಂಶೋಧನೆ ಮತ್ತು ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ಅನದಾನ

ಉತ್ತರ ಕನ್ನಡ
* ಅಡಿಕೆ ಹಳದಿ ರೋಗ ನಿವಾರಣೆಗೆ ಸಂಶೋಧನಾ ಕೇಂದ್ರ ಹಾಗೂ ಪರ್ಯಾಯ ಬೆಳೆಗೆ ಪ್ರೋತ್ಸಾಹ 25 ಕೋಟಿ
* ಯಾಂತ್ರಿಕ ದೋಣಿಗಳಿಗೆ ಟ್ಯಾಕ್ಸ್ ರಹಿತ ಡೀಸೆಲ್ ವಿತರಣೆ
* ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅನುಷ್ಠಾನಕ್ಕೆ 62 ಕೋಟಿ
* 6 ಕೋಟಿ ವೆಚ್ಚದಲ್ಲಿ ಮೀನಿನ ಉತ್ಪನ್ನ ಸಂಸ್ಕರಣೆ, ಮೌಲ್ಯ ವರ್ದಿತಾ ಕೇಂದ್ರ ಸ್ಥಾಪನೆ
* ಗ್ರಾಮ ಬಂಧು ಯೋಜನೆಯಡಿ ಕರಾವಳಿ, ಮಲೆನಾಡು ಭಾಗದಲ್ಲಿ ಕಾಲುಸಂಕ ನಿರ್ಮಾಣ ಯೋಜನೆಗೆ 100 ಕೋಟಿ
* ಅಂಕೋಲಾ ನೌಕಾ ವಾಯುನೆಲೆ ಸಮೀಪದಲ್ಲಿ ಸಿವಿಲ್ ಎನ್‍ಕ್ಲೇವ್ ಅಭಿವೃದ್ಧಿ
* ಶಿರಸಿಯಲ್ಲಿ 7 ಕೋಟಿ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ

ಉಡುಪಿ
* ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಇತರ ಕಡಲ ತೀರ ಅಭಿವೃದ್ಧಿಗೆ 10 ಕೋಟಿ
* ಬೈಂದೂರು-ಸೋಮೇಶ್ವರ ಬೀಚ್ ಅಭಿವೃದ್ಧಿ 10 ಕೋಟಿ
* ತ್ರಾಸಿ, ಒತ್ತಿನೆಣೆ, ಮರವಂತೆ ಬೀಚ್ ಅಭಿವೃದ್ಧಿಗೆ 10 ಕೋಟಿ* ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್
* ಪಶ್ಚಿಮ ವಾಹಿನಿ ಯೋಜನೆಗೆ 500 ಕೋಟಿ
*ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿ ವನ ನಿರ್ಮಾಣಕ್ಕೆ 2 ಕೋಟಿ ರೂ.

ಧಾರವಾಡ
* ಹುಬ್ಬಳ್ಳಿ ಕಿಮ್ಸ್‌ನಲ್ಲಿ ತುರ್ತು ಚಿಕಿತ್ಸಾ ವಿಭಾಗಕ್ಕೆ 5 ಕೋಟಿ
* ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗಕ್ಕೆ 463 ಕೋಟಿ
* ಆದಿಕವಿ ಪಂಪನ ಕೃತಿಗಳ ಡಿಜಿಟಲೀಕರಣ
* ಹುಬ್ಬಳ್ಳಿಗೆ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರ ಮಂಜೂರು

ಗದಗ
* ನಿರ್ಮಾಣ ಕಾರ್ಮಿಕರಿಗೆ ವಸತಿ ನೀಡಲು ತಾತ್ಕಾಲಿಕ ವಸತಿ ಗೃಹ

ಕಲಬುರಗಿ
* ಫೀರೋಜಾಬಾದ್ ಬಳಿ 500 ಮೆಗಾವ್ಯಾಟ್ ಸೌರಶಕ್ತಿ ಕೇಂದ್ರ
* ಜಿಮ್ಸ್ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿ ಘಟಕ ಸ್ಥಾಪನೆ
* 1500 ಕೋಟಿ ಅನುದಾನದಲ್ಲಿ ಕೆಕೆಆರ್‍ಡಿಬಿ ಮಂಡಳಿಗೆ ಮಂಜೂರು

ಬಳ್ಳಾರಿ
* ಬಳ್ಳಾರಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ
* ಐತಿಹಾಸಿಕ ಯುಗದ ಅವಶೇಷಗಳ ಮ್ಯೂಸಿಯಂಗೆ 2 ಕೋಟಿ
* ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆ
* ನಿರ್ಮಾಣ ಕಾರ್ಮಿಕರಿಗೆ ವಸತಿ ನೀಡಲು ತಾತ್ಕಾಲಿಕ ವಸತಿ ಗೃಹ

ಚಿಕ್ಕಬಳ್ಳಾಪುರ
* ಜಿಲ್ಲೆಯ ಕೆರೆಗಳಿಗೆ ವೃಷಭಾವತಿ ಕಣಿವೆಯಿಂದ ತ್ಯಾಜ್ಯ ಸಂಸ್ಕೃರಿತ ನೀರು ಯೋಜನೆ
* ಎಚ್‍ಎನ್ ವ್ಯಾಲಿ ಮೂಲಕವೇ ನೀರು ಹರಿಸುವ ಉದ್ದೇಶ
* ನಂದಿ ಗಿರಿಧಾಮವನ್ನು ಅಂತರಾಷ್ಟ್ರೀಯ ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ

ಕೋಲಾರ
* ಕೆ.ಸಿ.ವ್ಯಾಲಿ ಯೋಜನೆ ವಿಸ್ತರಣೆ

ಕೊಪ್ಪಳ
* ನಾರಿ ಸುವರ್ಣ ಕುರಿ ಸಂವರ್ಧನ ಕೇಂದ್ರ
* ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ

ಚಾಮರಾಜನಗರ
* ಅರಿಶಿಣ ಮಾರುಕಟ್ಟೆ ಸಮಗ್ರ ಅಭಿವೃದ್ಧಿ
* ಗೋಪಿನಾಥಂ ಪ್ರದೇಶದಲ್ಲಿ ಸಫಾರಿ, ಪರಿಸರ ಪ್ರವಾಸೋದ್ಯಮಕ್ಕೆ 5 ಕೋಟಿ
* ಬಿ.ಆರ್.ಟಿ ಹುಲಿ ಸಂರಕ್ಷಿತಾರಣ್ಯದ ಬೂದಿಪಡಗದಲ್ಲಿ ಆನೆ ಶಿಬಿರಕ್ಕೆ 1 ಕೋಟಿ

ವಿಜಯಪುರ
* ವಿಜಯಪುರ ಜಿಲ್ಲೆ ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್
* ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ದಿಗೆ 5 ಕೋಟಿ
* ವಿಜಯಪುರ ವಿಮಾನ ನಿಲ್ದಾಣಕ್ಕೆ 220 ಕೋಟಿ

ಚಿತ್ರದುರ್ಗ
* ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
* ಕೇಂದ್ರ ಪಾದರಕ್ಷೆ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ

ದಾವಣಗೆರೆ
* ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪ ಕೇಂದ್ರ ಸ್ಥಾಪನೆಗೆ 20 ಕೋಟಿ
* ನಿರ್ಮಾಣ ಕಾರ್ಮಿಕರಿಗೆ ವಸತಿ ನೀಡಲು ತಾತ್ಕಾಲಿಕ ವಸತಿ ಗೃಹ

ಬೀದರ್
* ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ

ರಾಯಚೂರು
* ಸುಗಮ ಸಂಚಾರಕ್ಕೆ ರಿಂಗ್ ರಸ್ತೆ
* ರಾಯಚೂರಿನಲ್ಲಿ ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ಕಾಮಗಾರಿ ಈ ವರ್ಷ ಪೂರ್ಣ

ಹಾವೇರಿ
* ಕರ್ನಾಟಕ ರಾಜ್ಯ ಮೀಸಲು ಪಡೆ ಬಲಪಡಿಸಲು 8 ಕೋಟಿ ಅನುದಾನ
* ನೂತನ ಜಿಲ್ಲಾ ಪೋಲಿಸ್ ಸಂಕೀರ್ಣ ನಿರ್ಮಾಣಕ್ಕೆ 8 ಕೋಟಿ
* ಬ್ಯಾಡಗಿ ಎಪಿಎಂಸಿಯಲ್ಲಿ 4 ಕೋಟಿ ವೆಚ್ಚದಲ್ಲಿ ಆಧುನಿಕ ಗುಣ ವಿಶ್ಲೇಷಣಾ ಘಟಕ

ಯಾದಗಿರಿ
* ಕಡೆಚೂರಿನಲ್ಲಿ ಬಲ್ಕ್ ಡ್ರಗ್ ಪಾರ್ಕ್ ನಿರ್ಮಾಣಕ್ಕೆ 1,478 ಕೋಟಿ

Click to comment

Leave a Reply

Your email address will not be published. Required fields are marked *