Monday, 20th May 2019

ಕರ್ನಾಟಕ ಬಜೆಟ್ : ಲೈವ್ ಅಪ್‍ಡೇಟ್ಸ್

ಬೆಂಗಳೂರು: ದೋಸ್ತಿ ಸರ್ಕಾರದ ಎರಡನೇ ಬಜೆಟ್ ಅನ್ನು ಸಿಎಂ ಕುಮಾರಸ್ವಾಮಿ ಮಂಡಿಸುತ್ತಿದ್ದಾರೆ. ಈ ನಡುವೆ ಈ ಬಾರಿ ಸಂಸತ್ತಿನ ಮಾದರಿಯಲ್ಲಿ ಬಜೆಟ್ ಪ್ರತಿ ನೀಡಲು ನಿರ್ಧಾರ ಮಾಡಿದ್ದಾರೆ. ಬಿಜೆಪಿ ಗಲಾಟೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯ ಆರಂಭದಲ್ಲಿಯೇ ಸದನದ ಸದಸ್ಯರಿಗೆ ಮತ್ತು ಮಾಧ್ಯಮದವರಿಗೆ ಬಜೆಟ್ ಪ್ರತಿ ನೀಡದಿರಲು ನಿರ್ಧರಿಸಿದ್ದಾರೆ.

ಬಜೆಟ್ ಹೈಲೈಟ್ಸ್

– ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ಹೊಸ ತಾಲ್ಲೂಕುಗಳ ರಚನೆ.
– ಕೊಡಗು ಪುನರ್ ನಿರ್ಮಾಣ, ಪುನರ್ವಸತಿ ಮತ್ತು ಅಭಿವೃದ್ಧಿ ಪ್ರಾಧಿಕಾರದ ದೈನಂದಿನ ಕಾರ್ಯ ಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನ ಅನುದಾನ ಐತಿಹಾಸಿಕ ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೆ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ; 5 ಕೋಟಿ ರೂ. ಅನುದಾನ.
– 2019-20ನೇ ಸಾಲಿನಲ್ಲಿ ರಾಜ್ಯದ ವಿವಿಧ ಮಠಗಳು ಹಾಗೂ ಇತರ ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ. ಗಳ ಅನುದಾನ.

ಇಂಧನ
– ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದ ನೀರಾವರಿ ಪಂಪ್‍ಸೆಟ್, ಭಾಗ್ಯ ಜ್ಯೋತಿ, ಕುಟೀರಜ್ಯೋತಿ ಗ್ರಾಹಕರ ಸಹಾಯಧನ 11,250 ಕೋಟಿ ರೂ.ಗಳಿಗೆ ಹೆಚ್ಚಳ.
– Roof-top ಸೌರ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸಲು ಆದ್ಯತೆ.

ಬೆಳೆ ಸಾಲ ಮನ್ನಾ ಯೋಜನೆ
– ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ 6,500 ಕೋಟಿ ರೂ. ಅನುದಾನ ವಾಣಿಜ್ಯ ಬ್ಯಾಂಕುಗಳಿಗೆ ಹಾಗೂ 6,150 ಕೋಟಿ ರೂ. ಸಹಕಾರಿ ಕ್ಷೇತ್ರಕ್ಕೆ ನಿಗದಿ. ಸಹಕಾರ ಬ್ಯಾಂಕ್‍ಗಳ ಸಾಲ ಮನ್ನಾ ಪ್ರಕ್ರಿಯೆ ಜೂನ್-2019 ರೊಳಗೆ ಪೂರ್ಣ; ವಾಣಿಜ್ಯ ಬ್ಯಾಂಕುಗಳ ಸಾಲ ಯೋಜನೆಯೂ 2019-20 ರಲ್ಲಿ ಪೂರ್ಣ.

ಅಬಕಾರಿ
– ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೊಹಾಲಿಕ್ ಬಿವೆರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ.

– ಅನ್ನಭಾಗ್ಯ ಯೋಜನೆಯಡಿ 4.07 ಕೋಟಿಗಿಂತ ಹೆಚ್ಚು ಫಲಾನುಭವಿಗಳಿಗೆ ಆಹಾರ ಧಾನ್ಯಗಳ್ನು ವಿತರಿಸಲು 3,700 ಕೋಟಿ ರೂ. ಅನುದಾನ.
– 2019 ನ್ನು ಜಲವರ್ಷ ಎಂದು ಘೋಷಣೆ. ‘ಜಲಾಮೃತ’ ಯೋಜನೆಯಡಿ 20,000 ಜಲಸಂರP್ಷÀಣಾ ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಡಿ ನಿರ್ವಹಿಸಲು 500 ಕೋಟಿ ರೂ. ಅನುದಾನ.

– 1000 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಒಣ ಮತ್ತು ಹಸಿ ತ್ಯಾಜ್ಯವನ್ನು ವಿಂಗಡಿಸಿ ಒಣ ಕಸ ಮರುಬಳಕೆ ಹಾಗೂ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ “ಸ್ವಚ್ಛಮೇವ ಜಯತೆ” ಆಂದೋಲನ.

– ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ವರ್ಷ 1,500 ಕೋಟಿ ರೂ. ಅನುದಾನ; ಹಾಗೂ ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ 70 ಕೋಟಿ ರೂ., ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರಕ್ಕೆ 95 ಕೋಟಿ ರೂ. ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ ರೂ. ಅನುದಾನದಲ್ಲಿ ಕ್ರಿಯಾ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕ್ರಮ.

ಕನ್ನಡ ಮತ್ತು ಸಂಸ್ಕೃತಿ
– ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. ಗಳ ವಿಶೇಷ ಅನುದಾನ.
– ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮಸ್ಥಳ ರಾಮನಗರ ಜಿಲ್ಲೆಯ ಬಿಡದಿ ತಾಲ್ಲೂಕಿನ ಬಾಣಂದೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ಶ್ರೀಗಳ ಜೀವನ ಸಾಧನೆಗಳು ಮತ್ತು ವಿಚಾರಗಳನ್ನು ಸಾರಲು ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಪಿಸಲು 25 ಕೋಟಿ ರೂ. ಅನುದಾನ.
– ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.ಗಳ ಅನುದಾನ.
– ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ 

– “ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ” ಯೋಜನೆಯಡಿ 70,000 ಹೊಸ ಅಭ್ಯರ್ಥಿಗಳಿಗೆ 90 ಕೋಟಿ ರೂ.ಗಳ ವೆಚ್ಚದಲ್ಲಿ ಕೌಶಲ್ಯ ತರಬೇತಿ.
– ಸಾಂಪ್ರದಾಯಿಕ ಕರಕುಶಲತೆಯನ್ನು ಉತ್ತೇಜಿಸಲು, ಮಾಸ್ಟರ್ ಟ್ರೈನರ್‍ಗಳು ಹಾಗೂ ಆಧುನಿಕ ವಿನ್ಯಾಸಕಾರರ ಸಹಯೋಗದೊಂದಿಗೆ “ಕೌಶಲ್ಯ ಪರಂಪರೆ ಶಾಲೆ” ಎಂಬ ಹೊಸ ಕಾರ್ಯಕ್ರಮಕ್ಕೆ ಚಾಲನೆ.

– ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ, ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸಲು ಸಹಾಯಧನ; ಸಾರಿಗೆ ಇಲಾಖೆ ಮೂಲಕ ಈ ಯೋಜನೆ ಜಾರಿ. 30 ಕೋಟಿ ರೂ. ಅನುದಾನ.
– ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಎಲ್ಲಾ ಜಿಲ್ಲೆಗಳಲ್ಲಿ ಚಾಲಕರ ದಿನಾಚರಣೆ. ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ. ಪುರಸ್ಕಾರ.

– 2019-20ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಒಟ್ಟು 4 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ.
– ಬಿಬಿಎಂಪಿಯ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಯೋಜನೆಯಡಿ 300 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುತ್ತಿರುವ ಅಧಿಸೂಚಿತ ಕೊಳಗೇರಿ ಪ್ರದೇಶಗಳ ಅಭಿವೃದ್ಧಿ.
– ಬೆಂಗಳೂರಿನ ಆಟೋ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ 50 ಕೋಟಿ ರೂ. ವೆಚ್ಚದಲ್ಲಿ “ಸಾರಥಿಯ ಸೂರು” ಬಾಡಿಗೆ ಆಧಾರದ ವಸತಿ ಯೋಜನೆ.
– ಸಿದ್ಧ ಉಡುಪು ಕಾರ್ಮಿಕರಿಗೆ ಬಾಡಿಗೆ ಆಧಾರದ ವಸತಿ ಯೋಜನೆಗೆ 50 ಕೋಟಿ ರೂ. ಅನುದಾನ.

– ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರಪಟ್ಟಣದಲ್ಲಿ 10 ಕೋಟಿ ರೂ. ಅನುದಾನದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ ಪ್ರಾರಂಭ.
– ಮುಸ್ಲಿಂ ಸಮುದಾಯದಲ್ಲಿ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ ಒಂದಾವರ್ತಿಯಾಗಿ 25 ಕೋಟಿ ರೂ. ಅನುದಾನ.
– ಶ್ರೀ ಗುರುನಾನಕ್ ದೇವ್‍ರವರ 550ನೇ ಜನ್ಮ ದಿನೋತ್ಸವ ಅಂಗವಾಗಿ ಬೀದರ್‍ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ ರೂ. ಹಾಗೂ ಬೆಂಗಳೂರಿನ ಹಲಸೂರು ಗುರುದ್ವಾರಕ್ಕೆ 25 ಕೋಟಿ ರೂ. ಅನುದಾನ.

ಸಮಾಜ ಕಲ್ಯಾಣ
– ಪರಿಶಿಷ್ಟ ಜಾತಿ ವಿಶೇಷ ಘಟಕ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿ 30,445 ಕೋಟಿ ರೂ. ಅನುದಾನ.
– ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ / ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 30 ಸಂಯುಕ್ತ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು 100 ಕೋಟಿ ರೂ. ಅನುದಾನ.
– ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 100 ವಸತಿ ಶಾಲೆಗಳನ್ನು ಪಿ.ಯು.ಸಿ (ವಿಜ್ಞಾನ ಮತ್ತು ವಾಣಿಜ್ಯ) ಕೋರ್ಸ್‍ಗಳೊಂದಿಗೆ ಮೇಲ್ದರ್ಜೆಗೇರಿಸಲು ಕ್ರಮ.
– ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲು 20 ಕೋಟಿ ರೂ. ಅನುದಾನ.

– ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯ ಸಹಾಯಧನ ಮಾಸಿಕ 1 ಸಾವಿರ ರೂ. ಗಳಿಂದ 2 ಸಾವಿರ ರೂ. ಗಳಿಗೆ ಹೆಚ್ಚಳ. 2019ರ ನವೆಂಬರ್ 1ರಿಂದ ಜಾರಿ. ಈ ಯೋಜನೆಗೆ 470 ಕೋಟಿ ರೂ. ಅನುದಾನ.
– ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ. ಹಾಗೂ ಸಹಾಯಕಿಯರಿಗೆ 250 ರೂ. ಗೌರವಧನ 2019ರ ನವೆಂಬರ್ 1 ರಿಂದ ಹೆಚ್ಚಳ. 60 ಕೋಟಿ ರೂ. ಹೆಚ್ಚುವರಿ ಅನುದಾನ.

– ಹುಬ್ಬಳ್ಳಿಯಲ್ಲಿ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ತೃತೀಯ ಹಂತದ ಕ್ಯಾನ್ಸರ್ ಕೇಂದ್ರಕ್ಕೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರದಿಂದ 4.5 ಕೋಟಿ ರೂ.ಗಳ ಸಹಾಯಧನ.
– ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ 150 ಕೋಟಿ ರೂ.ಗಳ ವೆಚ್ಚದಲ್ಲಿ ಕಲಬುರಗಿಯ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ 300 ಹಾಸಿಗೆ ಸಾಮಥ್ರ್ಯದ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆ.

– ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಮಂಗನ ಕಾಯಿಲೆಯ ಸಂಶೋಧನಾ ಮತ್ತು ಚಿಕಿತ್ಸಾ ಘಟಕ ಪ್ರಾರಂಭ.
– ಆಶಾ ಕಾರ್ಯಕರ್ತೆಯರ ಗೌರವಧನವನ್ನು 500 ರೂ.ಗಳಷ್ಟು ಹೆಚ್ಚಳ. 1ನೇ ನವೆಂಬರ್ 2019 ರಿಂದ ಜಾರಿಗೆ ಬರಲಿದ್ದು, 25 ಕೋಟಿ ರೂ.ಗಳ ಅನುದಾನ ನಿಗದಿ.
– ಮಂಗಳೂರು, ತುಮಕೂರು, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಟ್ಟು 10 ಜಿಲ್ಲೆಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಸ್ತನರೇಖನ ವ್ಯವಸ್ಥೆ (Mammogram) ಹಾಗೂ Papsmear scanning ವ್ಯವಸ್ಥೆ ಪ್ರಾರಂಭಿಸಲು ಕ್ರಮ.

– ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ ಸರ್ಕಾರಿ / ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ತತ್ಸಮಾನ ವೃಂದಗಳ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ.

– ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಆಧಾರಿತ ಡಿಜಿಟಲ್ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳನ್ನು ಆನ್‍ಲೈನ್ ಮೂಲಕ ವಿತರಣೆ ಹಾಗೂ ದೃಢೀಕರಣ ವಿಧಾನ ಜಾರಿಗೆ 2 ಕೋಟಿ ರೂ. ಅನುದಾನ.

– ಮುಂದಿನ 4 ವರ್ಷದಲ್ಲಿ ಹೋಬಳಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗತಿ ವರೆಗೆ ಒಂದೇ ಸೂರಿನಡಿ ಶಿಕ್ಷಣ ಒದಗಿಸುವ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ. ಈ ಶಾಲೆಗಳಿಗೆ ಕೇಂದ್ರೀಯ ವಿದ್ಯಾಲಯ ಮಾದರಿಯ ಪ್ರತ್ಯೇಕ ಸಂಘಟನೆ ಹಾಗೂ ಮಾರ್ಗಸೂಚಿ ನಿಗದಿ.

– ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕಾಗಿ “ಉಪಯೋಗಿಸಿದ ರೈಲುಹಳಿ ತಡೆಗೋಡೆಯಿಂದ ಮಾನವ-ಆನೆ ಸಂಘರ್ಷ ನಿಯಂತ್ರಣ ಯೋಜನೆಯಡಿ ರೈಲು ಹಳಿ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ.

– ಕಾಲುವೆಗಳ ಆಧುನಿಕರಣಕ್ಕೆ ಒಟ್ಟು 860 ಕೋಟಿ ಅನುದಾನ. ಸೂಳೆಕೇರೆ ಅಭಿವೃದ್ಧಿಗಾಗಿ 25 ಕೋಟಿ ಅನುದಾನ.
– ಸಿದ್ದರಾಮಯ್ಯನವರ ಬಾದಾಮಿ ಕ್ಷೇತ್ರಕ್ಷೆ ನೀರಾವರಿಗೆ 200 ಕೋಟಿ ರೂ. ಅನುದಾನ.

– ಕೆರೆ ತುಂಬಿಸುವ ಯೋಜನೆಗೆ ಒಟ್ಟು 1600 ಕೋಟಿ. ಅನುದಾನ.
– 300 ಕೋಟಿ ವೆಚ್ಚದಲ್ಲಿ ಬಾದಾಮಿಗೆ ನೀರು ಹರಿಸುವ ಯೋಜನೆಗೆ ಒಪ್ಪಿಗೆ. ಪ್ರತಿ ಸಂತೆಯ ಮೂಲಭೂತ ಸೌಕರ್ಯ ಅಭಿವೃದ್ಧಿ 1 ಕೋಟಿ. ಆರಂಭದಲ್ಲಿ 600 ಗ್ರಾಮೀಣ ಸಂತೆಗಳಿಗೆ ಆಧ್ಯತೆ.
– ಕೇರಳ ಮಾದರಿಯಲ್ಲಿ ರೈತರ ಸಾಲ ಪರಿಹಾರ ಆಯೋಗ ಸ್ಥಾಪನೆಗೆ ನಿರ್ಧಾರ. ಉಗ್ರಾಣ ನಿಗಮದಲ್ಲಿ ಗರಿಷ್ಟ 8 ತಿಂಗಳ ಕಾಲ ಕೃಷಿ ವಸ್ತುಗಳ ಸಂಗ್ರಹಣೆಗೆ ಅವಕಾಶ.

– ಗೃಹಲಕ್ಷಿ ಯೋಜನೆಯ ಮೂಲಕ ರೈತರ ಆಭರಣಗಳಿಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಬೆಳೆ ಸಾಲ.
– ಶಾಶ್ವತ ಸಂಗ್ರಹಣ ಕೇಂದ್ರ ಸ್ಥಾಪನೆಗೆ ಒತ್ತು. ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ. ಮಲ್ಪೆ ಕಡಲ ತೀರದಲ್ಲಿ ಒಂದು ಜೆಟ್ಟಿ ನಿರ್ಮಾಣ.

– ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹ ಧನ 6 ರೂ. ಹೆಚ್ಚಳ. ಮೀನುಗಾರಿಕಾ ದೋಣಿಗಳಿಗೆ ಶೇ.50 ರಷ್ಟು ಸಹಾಯಧನ.
– 10 ಸಾವಿರ ಬಡ ನಿರುದ್ಯೋಗ ಯುವಕ ಯುವತಿಯರಿಗೆ ನಾಟಿ ಕೋಳಿ ತರಬೇತಿ.
ರೇಷ್ಮೇ ಸಂಶೋಧನೆಗೆ 2 ಕೋಟಿ ರೂ. ಮೀಸಲು. ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗೆ 150 ಕೋಟಿ ರೂ. ಅನುದಾನ.
– ಕರಾವಳಿ, ಮಲೆನಾಡಿನ ಮಳೆ ಹೆಚ್ಚು ಬೀಳುವ ಕಾರಣ ಭತ್ತ ಬೆಳೆಯಲು ಪ್ರೋತ್ಸಾಹ. ಪ್ರತಿ ಹೆಕ್ಟೇರಿಗೆ 7 ಸಾವಿರ ರೂ. ಪ್ರೋತ್ಸಾಹ ಧನ.

– ಸಿರಿ ಧಾನ್ಯಗಳ ಬೆಳೆಯುವ ರೈತರ ಖಾತೆಗೆ 10 ಸಾವಿರ ರೂ. ಹಣ ಜಮೆ. ಪ್ರತಿ ಹೆಕ್ಟೇರ್ ಹೊಂದಿನ ರೈತರ ಖಾತೆಗೆ ಹಣ ಜಮೆ. ಮಳೆಯ ಅಭಾವದಿಂದ ಕೃಷಿ ಬೆಳವಣಿಗೆ ಶೇ.4.8ರ ಕುಸಿತವಾಗುವ ಸಾಧ್ಯತೆ.

– ಹಿರಿಯ ನಾಗರಿಕರ ಮಾಸಶಾನ 600 ರೂ. 1 ಸಾವಿರ ರೂ.ಗೆ ಹೆಚ್ಚಳ. ಹೆರಿಗೆ ಪೂರ್ವದ 3 ತಿಂಗಳು ಹೆರಿಗೆ ನಂತರ 3 ತಿಂಗಳ ಕಾಲ ಪ್ರತಿ ತಿಂಗಳು 1 ಸಾವಿರ ರೂ. ಬಾಣಂತೀಯರಿಗೆ ನೀಡಲಾಗುತ್ತದೆ.
– ಮನೆ ನಿರ್ಮಾಣಕ್ಕೆ ಆನ್‍ಲೈನ್ ಮೂಲಕ 48,772 ಅರ್ಜಿಗಳನ್ನು ಸ್ವೀಕರಿಸಿದ್ದು, ಜಾಗ ಗುರುತಿಸಿ ಶೀಘ್ರವೇ ಮನೆ ನಿರ್ಮಾಣ.

– ಲೋಕೋಪಯೋಗಿ ಇಲಾಖೆಗೆ 10,405 ಕೋಟಿ ರೂ. ಅನುದಾನ. ಬೆಂಗಳೂರಿನಲ್ಲಿ 64 ಕೀಲೋಮೀಟರ್ ಉದ್ದದ ಫೆರಿಫೆರಲ್ ರಸ್ತೆ, 100 ಕಿ.ಮೀ ಉದ್ದ ಎಲಿವೆಟೇಡ್ ಕಾರಿಡರ್ ನಿರ್ಮಾಣಕ್ಕೆ ಅನುಮೋದನೆ. ತಿಪ್ಪಗೊಂಡನಗಳ್ಳಿ ಜಲಾಶಯದ ಪುನಶ್ಚೇತನಕ್ಕೆ ಕ್ರಮ.

– ಹಿರಿಯ ನಾಗರಿಕರ ಮಾಸಶಾನ 600 ರೂ. 1 ಸಾವಿರ ರೂ.ಗೆ ಹೆಚ್ಚಳ. ಹೆರಿಗೆ ಪೂರ್ವದ 3 ತಿಂಗಳು ಹೆರಿಗೆ ನಂತರ 3 ತಿಂಗಳ ಕಾಲ ಪ್ರತಿ ತಿಂಗಳು 1 ಸಾವಿರ ರೂ. ಬಾಣಂತೀಯರಿಗೆ ನೀಡಲಾಗುತ್ತದೆ.
– ಮನೆ ನಿರ್ಮಾಣಕ್ಕೆ ಆನ್‍ಲೈನ್ ಮೂಲಕ 48,772 ಅರ್ಜಿಗಳನ್ನು ಸ್ವೀಕರಿಸಿದ್ದು, ಜಾಗ ಗುರುತಿಸಿ ಶೀಘ್ರವೇ ಮನೆ ನಿರ್ಮಾಣ.

–  415 ಕೋಟಿ ರೂ. ವೆಚ್ಚದಲ್ಲಿ ನಗರ ಯೋಜನೆಗಳಿಗೆ ಚಾಲನೆ, ಕರ್ನಾಟಕ ಬಯಲು ಶೌಚ ಮುಕ್ತ ಜಿಲ್ಲೆ.
ಎಪಿಎಲ್ ಕುಟುಂಬಗಳಿಗೆ ಆರೋಗ್ಯ ಯೋಜನೆ ವಿಸ್ತರಣೆ. 160 ಪಬ್ಲಿಕ್ ಶಾಲೆ ಆರಂಭ. ಸಣ್ಣ ನಗರಗಳಿಗೆ ಕೈಗಾರಿಕೆ ವಿಸ್ತರಣೆಗೆ ಕ್ರಮ.

– ಬಡವರ ಬಂದು ಯೋಜನೆಯ ಮೂಲಕ 13,522 ಬೀದಿ ಬದಿಯ ವ್ಯಾಪಾರಿಗಳಿಗೆ ಒಟ್ಟು 7.69 ಕೋಟಿ ರೂ. ಸಾಲ ನೀಡಿಕೆ. ಕಾವೇರಿನ ನೀರಿನ ಸಮರ್ಪಕ ಬಳಕೆಗೆ ಒತ್ತು.

– ಮೇಕೆದಾಟಿಗೆ ಡಿಪಿಆರ್ ಸಲ್ಲಿಸಲಾಗಿದ್ದು, ಇದು ಮಹತ್ವದ ಮೈಲುಗಲ್ಲು. ಕರ್ನಾಟಕ ತಮಿಳುನಾಡು ರೈತರಿಗೆ ಸಹಕಾರ.

– ಬಿಜೆಪಿಯಿಂದ ಸಭಾತ್ಯಾಗ. ಹೊರ ನಡೆದ ಬಿಜೆಪಿ ಸದಸ್ಯರು.
– ರೈತರು ಕೃಷಿಯಲ್ಲಿ ಕೆಲ ಬದಲಾವಣೆ ಮಾಡಬೇಕು. ಇಸ್ರೇಲ್ ಮಾದರಿ, ನೈಸರ್ಗಿಕ ಪದ್ದತಿ ಅಳವಡಿಕೆಗೆ ಪ್ರೋತ್ಸಹಾ. 12 ಲಕ್ಷ ಸಾಲ ಖಾತೆಗಳಿಗೆ 5,450 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

– ಎರಡೂವರೆ ಸಾವಿರ ಕೋಟಿಗೆ ಮನವಿ ಸಲ್ಲಿಸಿದರೂ 900 ಕೋಟಿ ರೂ. ಹಣ ಬಿಡುಗಡೆ
– 14 ವರ್ಷ ಬರ ಬಂದಿದೆ.ರಾಜ್ಯದ 156 ತಾಲೂಕುಗಳು ಬರ ಬಂದಿದೆ.
– ಕೊಡಗಿನಲ್ಲಿ ಮನೆ ಕಳೆದುಕೊಂಡ 843 ನಿವಾಸಿಗಳಿಗೆ ಮನೆ ಕಟ್ಟುವ ಕೆಲಸ ನಡೆಯುತ್ತಿದೆ.

– ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಬಿಜೆಪಿ ಸದಸ್ಯರು. ಬಿಜೆಪಿ ಗದ್ದಲದ ನಡುವೆಯೇ ಸಿಎಂರಿಂದ ಬಜೆಟ್ ಮಂಡನೆ.
– ಅಭಿವೃದ್ಧಿಯೇ ನಮ್ಮ ಮಂತ್ರ, ನಮ್ಮ ಬಜೆಟ್ ಉತ್ತರ, ದಕ್ಷಿಣದ ಹಂಗಿಲ್ಲ. ರಾಜ್ಯ ರಾಜಕಾರಣದಲ್ಲಿ ಮೈತ್ರಿ ಸರ್ಕಾರ ಹೊಸದಲ್ಲ . ಸರ್ಕಾರ ಪತನಗೊಳಿಸುವ ಎಲ್ಲ ಯತ್ನ ವಿಫಲವಾಗಿದೆ. ನಮ್ಮ ಗುರಿ, ದಾರಿ ಸ್ಪಷ್ಟವಾಗಿದೆ.
– ರಾಜಸ್ಥಾನವನ್ನು ಹೊರತುಪಡಿಸಿದರೆ ಅತಿ ಹೆಚ್ಚು ಒಣ ಭೂಮಿ ಕರ್ನಾಟಕದಲ್ಲಿದೆ.

ಬಜೆಟ್ ಮಂಡನೆಗೆ ಪ್ರತಿಪಕ್ಷಗಳಿಂದ ಗೊಂದಲ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಬಿಜೆಪಿ ಸದಸ್ಯರು.

Leave a Reply

Your email address will not be published. Required fields are marked *