Connect with us

Bengaluru City

ಬಿಜೆಪಿಯಲ್ಲಿ ಅಂತ್ಯವಾಗುತ್ತಾ ಯಡಿಯೂರಪ್ಪ ಪರ್ವ..?

Published

on

ಬೆಂಗಳೂರು/ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳ ಮಧ್ಯೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೈಗೊಂಡ ದೆಹಲಿ ಪ್ರವಾಸದಲ್ಲಿ ಬಿಗ್ ಶಾಕ್ ಎದುರಾಗಿದೆ. ಇಂದು ಬೆಳಗ್ಗೆ ಸಂಸತ್ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಜೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾದ ಯಡಿಯೂರಪ್ಪಗೆ ಸ್ಪಷ್ಟ ಸಂದೇಶವೊಂದು ರವಾನೆಯಾಗಿದೆ ಅಂತ ತಿಳಿದುಬಂದಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಿದ್ಧವಾದಂತೆ ಕಾಣುತ್ತಿದೆ. 77 ವರ್ಷದ ಸಿಎಂ ಯಡಿಯೂರಪ್ಪ ಬದಲಿಗೆ ಉತ್ತರಾಧಿಕಾರಿ ಆಯ್ಕೆಗೆ ಆಲೋಚಿಸಿದೆ. ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆಗೆ ಬಿಜೆಪಿ ಈಗಿನಿಂದಲೇ ತಯಾರಿ ನಡೆಸಿದ್ದು, ಬದಲಿ ನಾಯಕನಿಗಾಗಿ ತಲಾಷ್ ನಡೆಸಿದೆ. ಮುಖ್ಯಮಂತ್ರಿ ಯಡಿಯೂರಪ್ಪರನ್ನು ಗೌರವಯುತವಾಗಿ ಬೀಳ್ಕೊಡಲು ಹೈಕಮಾಂಡ್ ಬಯಸಿದ್ದು, 3 ಡೇಟ್‍ಗಳನ್ನು ಮುಂದಿಟ್ಟಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಪ್ಲಾನ್ 1- ಅಕ್ಟೋಬರ್
ಸಿಎಂ ಬದಲಾವಣೆ ಆದರೆ ಅಕ್ಟೋಬರ್‍ನಲ್ಲಿ ಚಾಲನೆ, ಪ್ರಕ್ರಿಯೆ ಪೂರ್ಣ. ಆದರೆ ಶಿರಾ ಬೈ ಎಲೆಕ್ಷನ್, ಬಿಬಿಎಂಪಿ ಎಲೆಕ್ಷನ್, ಬಿಹಾರ ಎಲೆಕ್ಷನ್ ಇರೋದ್ರಿಂದ ಈ ಪ್ಲ್ಯಾನ್ ಅಷ್ಟು ಸುಲಭ ಇಲ್ಲ.

ಪ್ಲಾನ್ 2- ಡಿಸೆಂಬರ್
ಬಿಎಸ್‍ವೈ ಮನವೊಲಿಸಿ, ಡಿಸೆಂಬರ್ ಹೊತ್ತಿಗೆ ರಾಜೀನಾಮೆ ಕೊಡಲು ಸೂಚಿಸಬಹುದು. ಡಿಸೆಂಬರ್ ಹೊತ್ತಿಗೆ ಶಿರಾ ಬೈಎಲೆಕ್ಷನ್, ಬಿಹಾರ ಎಲೆಕ್ಷನ್ ಮುಗಿದಿರುತ್ತೆ. ಬಿಬಿಎಂಪಿ ಎಲೆಕ್ಷನ್ ನಡೆದ್ರೂ, ನಡೆಯದಿದ್ರೂ ಬೆಂಗಳೂರಲ್ಲಿ ತೊಂದರೆ ಆಗಲ್ಲ. ಹಾಗಾಗಿ ಡಿಸೆಂಬರ್ ಗುಡ್ ಆಪ್ಶನ್ ಅನ್ನೋ ನಿರ್ಧಾರಕ್ಕೆ ಬರಬಹುದು. ಇದನ್ನೂ ಓದಿ: ಸಂಪುಟ ಪುನರ್‌ ರಚನೆಯಾದ್ರೆ ಮೂವರು ಸಚಿವರಿಗೆ ಕೊಕ್ – 7 ಶಾಸಕರಿಗೆ ಸಚಿವ ಸ್ಥಾನ?

ಪ್ಲಾನ್ 3- ಫೆಬ್ರವರಿ
ಇದು ಯಡಿಯೂರಪ್ಪ ತೀರ್ಮಾನಕ್ಕೆ ಬಿಡುವ ಪ್ಲ್ಯಾನ್ ಆಗಿದ್ದು, ಫೆಬ್ರವರಿಯಲ್ಲಿ ಬಜೆಟ್ ಮಂಡಿಸಲು ಬಿಎಸ್‍ವೈಗೆ ಅವಕಾಶ ನೀಡಬಹುದು. ಬಜೆಟ್ ಮಂಡನೆ ಬಳಿಕ ವಾರ/15 ದಿನದಲ್ಲಿ ರಾಜೀನಾಮೆಗೆ ಸೂಚಿಸಬಹುದು. ಇದು ಲಾಸ್ಟ್ ಆಪ್ಶನ್ ಎಂದು ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಇದು ಸಕ್ಸಸ್ ಆದರೂ ಅಚ್ಚರಿ ಇಲ್ಲ ಎಂಬ ಲೆಕ್ಕಚಾರವಿದೆ.

ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬದಲಿಸೋದು ಅಷ್ಟು ಸುಲಭನಾ ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ಬದಲಿಸಿದ್ರೆ ಅದಕ್ಕೆ ಕಾರಣಗಳೇನು…? ಹೈಕಮಾಂಡ್ ಪ್ಲಾನ್ ಏನು..?
ಪ್ಲಾನ್ 1- ಭವಿಷ್ಯದಲ್ಲಿ ಸೂಕ್ತ ನಾಯಕನಿಗಾಗಿ ಹುಡುಕಾಟ
ಪ್ಲಾನ್ 2- ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಸಿದ್ಧತೆ
ಪ್ಲಾನ್ 3- ಹೊಸ ನಾಯಕನ ಆಯ್ಕೆ ಮೂಲಕ ಪಕ್ಷ ಸಂಘಟನೆ….?
ಪ್ಲಾನ್ 4- ಗೌರವಯುತ ನಿರ್ಗಮನಕ್ಕೆ ಬಿಎಸ್‍ವೈಗೆ ಕಾಲಾವಕಾಶ ನೀಡೋದು…?
ಪ್ಲಾನ್ 5- ಬಿಹಾರ ಎಲೆಕ್ಷನ್ ನಂತರ ಹೊಸ ಸಿಎಂ ಆಯ್ಕೆ ಮಾಡೋದು…?

ಹಾಗಾದ್ರೆ ಬಿಎಸ್‍ವೈ ಮುಂದಿರುವ ಆಯ್ಕೆಗಳೇನು?
ಆಯ್ಕೆ 1- ಸಿಎಂ ಸ್ಥಾನದಿಂದ ಕೆಳಗಿಳಿಯಲು ಟೈಂ ಕೇಳುವುದು
ಆಯ್ಕೆ 2- ಉತ್ತರಾಧಿಕಾರಿಯನ್ನು ಸೂಚಿಸಬಹುದು
ಆಯ್ಕೆ 3- ಮಕ್ಕಳ ರಾಜಕೀಯ ಪ್ರವೇಶಕ್ಕೆ ಸಿಎಂ ರಾಜಿ…?

ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ಸಂಪುಟ ಸಹೋದ್ಯೋಗಿಗಳು ನಿಂತಿದ್ದಾರೆ. ನಾಯಕತ್ವ ಬದಲಾವಣೆ ಕೇವಲ ಮಾಧ್ಯಮ ಚರ್ಚಿತ ಅಂತ ಸಚಿವ ಎಸ್‍ಟಿ ಸೋಮಶೇಖರ್ ಹೇಳಿದ್ದಾರೆ. ಇನ್ನು ನೂರಕ್ಕೆ ನೂರರಷ್ಟು ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ ಅಂತ ಸುರೇಶ್ ಕುಮಾರ್ ಹೇಳಿದ್ದಾರೆ. ಬಿಸಿ ಪಾಟೀಲ್ ಮಾತನಾಡಿ, ಯಡಿಯೂರಪ್ಪ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಎಲ್ಲಾ ಊಹಾಪೋಹಗಳಷ್ಟೇ. ಮುಂದಿನ ಮೂರು ವರ್ಷದ ಅವಧಿಗೂ ಯಡಿಯೂರಪ್ಪನವರೇ ಸಿಎಂ ಅಂದಿದ್ದಾರೆ.

 

Click to comment

Leave a Reply

Your email address will not be published. Required fields are marked *