Monday, 18th November 2019

Recent News

ಜನವರಿ 27ರಂದು ಕರ್ನಾಟಕ ಬಂದ್

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಮುನ್ನ ದಿನಾವದ ಜನವರಿ 27 ಶನಿವಾರದಂದು ಮಹದಾಯಿಗಾಗಿ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಇದೇ 28ರಂದು ಬರುವಾಗ ದೊಡ್ಡ ಹೋರಾಟ ಮಾಡಬೇಕು. ಈ ಕುರಿತು ಎಲ್ಲಾ ಕನ್ನಡ ಸಂಘಟನೆಯವರಿಗೆ ಕರೆ ಕೊಡ್ತೀನಿ. ಕನ್ನಡಿಗರ ಶಕ್ತಿ ಪ್ರದರ್ಶನ ಮಾಡೋಣ. ನನ್ನ ಬೆಂಬಲ ಇಲ್ಲ ಅಂತಾ ಕೆಲ ಸಂಘಟನೆಯವರು ಹೇಳಬಾರದು. ಕಳೆದ ಬಾರಿಯ ರೀತಿ ಈ ಬಾರಿ ಆಗಬಾರದು. ಕರವೇ ನಾರಾಯಣ ಗೌಡರಿಗೂ ಕರೆ ಕೊಡುತ್ತಿದ್ದೇನೆ, ನಮ್ಮ ಹೋರಾಟಕ್ಕೆ ಕೈ ಜೋಡಿಸಬೇಕು. ಮೋದಿಗೆ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

ಬೆಳಗ್ಗೆ 6ರಿಂದ ಸಂಜೆ 6ರ ತನಕ ಬಂದ್ ಹಾಗೂ ಹೋರಾಟ ನಡೆಯಲಿದ್ದು, ಕರ್ನಾಟಕ ಸರ್ಕಾರವೂ ನಮ್ಮ ಬಂದ್ ಗೆ ಬೆಂಬಲ ಕೊಡಬೇಕು. ಇನ್ನು ಮಂಗಳೂರು, ಉಡುಪಿ ಜನರು ನಮ್ಮ ಮೇಲಿನ ಮುನಿಸು ಬಿಟ್ಟು ದಯವಿಟ್ಟು ಈ ಬಾರಿಯ ಹೋರಾಟಕ್ಕೆ ಬೆಂಬಲ ಕೊಡಿ. ಈ ಬಾರಿಯ ಕನ್ನಡಿಗರ ಶಕ್ತಿ ಮೋದಿಗೆ ಮುಟ್ಟಲೇ ಬೇಕು ಅಂತ ಮನವಿ ಮಾಡಿಕೊಂಡರು. ಇದನ್ನೂ ಓದಿ: ಜನವರಿ 31ರ ಒಳಗಡೆ ಮಹದಾಯಿ ವಿವಾದ ಇತ್ಯರ್ಥಗೊಳಿಸಿ: ರಾಜಕೀಯ ಪಕ್ಷಗಳಿಗೆ ಡೆಡ್‍ಲೈನ್

ಇನ್ನು ಈ ಸಂಬಂಧ ಚಿತ್ರ ಪ್ರದರ್ಶನ ಚಿತ್ರೀಕರಣ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದ್ ಹೇಳಿದರು. ಇದನ್ನೂ ಓದಿ:  ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್

ಬಿಜೆಪಿಯ 75 ದಿನಗಳ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ನವೆಂಬರ್ 2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಚಾಲನೆ ನೀಡಿದ್ದರು. ಯಾತ್ರೆಯ ಸಮಾರೋಪ ಸಮಾರಂಭ ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.

Leave a Reply

Your email address will not be published. Required fields are marked *