2016ರಲ್ಲೇ ಮತಾಂತರ ಬಿಲ್ – ಕಾಂಗ್ರೆಸ್ ಡಬಲ್ ಸ್ಟ್ಯಾಂಡರ್ಡ್

- ಸದನದಲ್ಲಿ ಬಿಜೆಪಿ ಗಂಭೀರ ಆರೋಪ

Advertisements

ಬೆಳಗಾವಿ: ವಿಪಕ್ಷಗಳ ತೀವ್ರ ವಿರೋಧ, ಗದ್ದಲ ಕೋಲಾಹಲದ ನಡುವೆಯೂ ನಿರೀಕ್ಷೆಯಂತೆ ವಿಧಾನಸಭೆಯಲ್ಲಿ ಬಲವಂತದ ಮತಾಂತರ ನಿಗ್ರಹ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.

Advertisements

ಇಂದು ಬೆಳಗ್ಗೆಯಿಂದ ಚರ್ಚೆ ಆರಂಭಿಸಲಾಯಿತು. ಸಂಜೆ ಕಾಂಗ್ರೆಸ್ ವಿರೋಧದ ಮಧ್ಯೆ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದು ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾ ಎಂದು ಸಿದ್ದರಾಮಯ್ಯ ಆರೋಪಿಸಿದ್ರೆ, ಸಚಿವ ಈಶ್ವರಪ್ಪ, ಹೌದು, ನಾವೆಲ್ಲ ಬಿಜೆಪಿ ಅವರು ಆರ್‌ಎಸ್‌ಎಸ್‌, ಆರ್‌ಎಸ್‌ಎಸ್‌ನಿಂದಲೇ ನಾವು ಬಿಲ್ ತಂದಿದ್ದೇವೆ ಎಂದು ಘೋಷಿಸಿದ್ರು. ಅಷ್ಟೇ ಅಲ್ಲ ಹಿಂದೂ ಧರ್ಮದ ಸಂರಕ್ಷಣೆಗೆ ಇನ್ನೂ ಮೂರು ಬಿಲ್ ತರುತ್ತೇವೆ ಎಂದರು. ನಾವು ಯಾರ ತಂಟೆಗೂ ಹೋಗಲ್ಲ. ಆದರೆ ನಮ್ಮ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ. ಚಿಂದಿ ಚಿಂದಿ ಮಾಡ್ತೀವಿ ಎಂದ ಸದನದಲ್ಲೇ ನೇರಾ ನೇರ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

Advertisements

2016ರಲ್ಲಿ ಬಿಲ್ ತರೋದನ್ನು ತಡೆದಿದ್ದು ಸೋನಿಯಾ ಗಾಂಧಿ. ಕುರ್ಚಿಗೆ ಕಂಟಕ ಬರುತ್ತೆ ಎಂಬ ಭಯದಲ್ಲಿ ಸಿದ್ದರಾಮಯ್ಯ ಈ ಮಸೂದೆ ತರಲಿಲ್ಲ ಎಂದು ಛೇಡಿಸಿದ್ರು. ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ಹೊರಹಾಕಿದರು. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು? 

Advertisements

ಬಿಜೆಪಿ ಸದಸ್ಯರು ಕಮ್ಮಿ ಇಲ್ಲ ಎಂಬಂತೆ ಭಾರತ್ ಮಾತಾಕೀ. ಜೈ ಶ್ರೀರಾಮ್ ಎಂಬ ಘೋಷಣೆ ಮೊಳಗಿಸಿದ್ರು. ಬಿಲ್ ಪಾಸ್ ಮಾಡಿಕೊಳ್ಳಲಿ ಅಂತಾ ಅವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ, ಬಿಲ್ ಪಾಸ್ ಮಾಡಿ. ಬೇರೆ ಕಲಾಪದ ನಡಾವಳಿ ನಡೆಸಿ ಎಂದು ಸ್ಪೀಕರ್‌ಗೆ  ಯಡಿಯೂರಪ್ಪ ಸಲಹೆ ನೀಡಿದ್ರು. ಕೊನೆಗೆ ಸಿಎಂ ಬೊಮ್ಮಾಯಿ ಮಾತನಾಡಿ 2014ರಿಂದ 2016ರ ತನಕ ಏಕೆ ಒಪ್ಪಿಕೊಂಡ್ರು ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನೆ ಮಾಡಿದ್ರು. ಆರ್‌ಎಸ್‌ಎಸ್‌ ಕಾನೂನು ಪರ ಇದೆ. ಇದು ಓಪನ್ ಸೀಕ್ರೆಟ್. ಸಂಘದ ನೀತಿಯನ್ನು ಏಕೆ ಒಪ್ಪಿ ನೀವು ಬಿಲ್ ಪರಿಶೀಲನೆ ಮಾಡಿದ್ರಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

ಗದ್ದಲ ಕೋಲಾಹಲದ ನಡುವೆ ಸ್ಪೀಕರ್ ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಿದ್ರು. 10 ನಿಮಿಷ ಸದನ ಮುಂದೂಡಿದ್ರು. ಕೂಡಲೇ ಸ್ಪೀಕರ್ ಕೊಠಡಿಯಲ್ಲಿ ಸಿಎಂ, ಸಚಿವರು ಸಭೆ ನಡೆಸಿದ್ರು. ಅಧಿವೇಶನ ನಾಳೆ ಮುಗಿಯಲಿದ್ದು, ಪರಿಷತ್‍ನಲ್ಲಿ ನಾಳೆಯೇ ಈ ಮಸೂದೆ ಮಂಡಿಸಿ, ಅನುಮೋದನೆ ಪಡೆಯಲು ಬಿಜೆಪಿ ಪ್ಲಾನ್ ಮಾಡಿದೆ.

Advertisements
Exit mobile version