Connect with us

Bengaluru City

ರಾಜ್ಯದ ಒಟ್ಟು 10 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆ

Published

on

ಬೆಂಗಳೂರು: ರಾಜ್ಯದಲ್ಲಿ ಬ್ರಿಟನ್ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ರಾಜ್ಯದ 10 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿದೆ.

ಬೆಂಗಳೂರು ಒಂದರಲ್ಲಿಯೇ 6 ಜನರಿಗೆ ಬ್ರಿಟನ್ ವೈರಸ್ ಕನ್ಫರ್ಮ್ ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಬ್ರಿಟನ್ ವೈರಸ್ ಆತಂಕ ಶುರುವಾಗಿದೆ. ಬೆಂಗಳೂರಿನಲ್ಲಿ 6 ಜನರಿಗೆ ಬ್ರಿಟನ್ ಬೆನ್ನಲ್ಲೇ ಇನ್ನಷ್ಟು ರಿಸಲ್ಟ್ ಬರುವುದು ಬಾಕಿ ಇದೆ.

ಬ್ರಿಟನ್ ನಿಂದ ಬಂದು ಪಾಸಿಟಿವ್ ಆದ 5 ಜನರ ರಿಪೋರ್ಟ್ ಬರೋದು ಬಾಕಿ ಇದೆ. ಈ 5 ಜನರ ಜೆನೆಟಿಕ್ ಸೀಕ್ವೆನ್ಸ್ ರಿಪೋರ್ಟ್ ಇನ್ನಷ್ಟೇ ಬರಬೇಕಿದೆ. ಜೆನೆಟಿಕ್ ಸೀಕ್ವೆನ್ಸ್ ರಿಪೋರ್ಟ್ ಬಾಕಿ ಬೆನ್ನಲ್ಲೇ ಆತಂಕ ಹೆಚ್ಚಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 6 ಕೇಸ್, ಶಿವಮೊಗ್ಗದಲ್ಲಿ 4 ಕೇಸ್ ಪತ್ತೆಯಾಗಿದೆ.

ನಾಳೆ ಅಥವಾ ನಾಡಿದ್ದು ಬರೋಬ್ಬರಿ 5 ಜನರ ಜೆನೆಟಿಕ್ ಸೀಕ್ವೆನ್ಸ್ ರಿಪೋರ್ಟ್ ಬರಲಿದೆ. ಈ 5 ಜನರಲ್ಲಿ ಎಷ್ಟು ಜನಕ್ಕೆ ಬ್ರಿಟನ್ ವೈರಸ್ ಇದೆಯೋ ಎಂಬ ಆತಂಕ ಎದುರಾಗಿದೆ. ಬೆಂಗಳೂರಿನ ಮೂರು ವಲಯದ 5 ಜನರ ಜೆನೆಟಿಕ್ ಸೀಕ್ವೆನ್ಸ್ ರಿಪೋರ್ಟ್ ಬರಬೇಕಾಗಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಮತ್ತೆ ಬ್ರಿಟನ್ ವೈರಸ್ ಪತ್ತೆಯಾದ್ರೆ ಆತಂಕ ತಪ್ಪಿದ್ದಲ್ಲ.

Click to comment

Leave a Reply

Your email address will not be published. Required fields are marked *

www.publictv.in