Connect with us

Cinema

2ನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಕರೀನಾ

Published

on

ಮುಂಬೈ: ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಸಂತಸದ ಸುದ್ದಿಯನ್ನ ಹಂಚಿಕೊಂಡಿದ್ದು, ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ತಿಳಿಸಿದ್ದಾರೆ.

ಈ ಕುರಿತು ದಂಪತಿ ಹೇಳಿಕೆ ನೀಡಿದ್ದು, ನಮ್ಮ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನ ಆಗಮನದ ನಿರೀಕ್ಷೆಯಲ್ಲಿರುವುದು ಸಂತಸ ತಂದಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಬೆಂಬಲಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಡಿಸೆಂಬರ್ 2016ರಲ್ಲಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ತೈಮುರ್ ಅಲಿ ಖಾನ್ ಜನಸಿದ್ದಾನೆ. ಈ ಜೋಡಿಯು ಮೊದಲ ಬಾರಿಗೆ ತಶಾನ್ ಸಿನಿಮಾ ಸೆಟ್‍ನಲ್ಲಿ ಭೇಟಿಯಾಗಿತ್ತು. ನಂತರ 2012ರಲ್ಲಿ ವಿವಾಹವಾಗಿದ್ದಾರೆ. ಇದೀಗ ಒಬ್ಬ ಮಗನಿದ್ದಾನೆ.

ಸೈಫ್ ಅಲಿ ಖಾನ್ ಸಹೋದರಿ ಸೋಹಾ ಸಹ ಈ ಕುರಿತು ಸ್ಪಷ್ಟಪಡಿಸಿದ್ದು, ಜೋಡಿಗೆ ಶುಭ ಕೋರಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಕಳೆದ ಬುಧವಾರವಷ್ಟೇ ಕರೀನಾ ಕಪೂರ್ ತಂದೆ ರಣಧೀರ್ ಕಪೂರ್ ಗಾಸಿಪ್ ಕುರಿತು ಪ್ರತಿಕ್ರಿಯಿಸಿ, ಈ ಸುದ್ದಿ ನಿಜ ಎಂದು ಅನ್ನಿಸುತ್ತಿದೆ. ಇದು ನಿಜವೇ ಆಗಿದ್ದಲ್ಲಿ ತುಂಬಾ ಸಂತೋಷಪಡುತ್ತೇನೆ ಎಂದು ಹೇಳಿದ್ದರು.

 

View this post on Instagram

 

Coming soon!! Couldn’t resist! Congratulations @kareenakapoorkhan be safe and healthy – and radiant as ever ! ❤️

A post shared by Soha (@sakpataudi) on

ಕರೀನಾ ಕಪೂರ್ ಕೊನೇಯದಾಗಿ ಅಂಗ್ರೇಜಿ ಮಿಡಿಯಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಇತ್ತಿಚೆಗೆ ಸಾವನ್ನಪ್ಪಿದ ಇರ್ಫಾನ್ ಖಾನ್, ರಾಧಿಕಾ ಮದನ್ ಹಾಗೂ ರಣವೀರ್ ಶೋರಿ ನಟಿಸಿದ್ದಾರೆ. ಇದೀಗ ಲಾಲ್ ಸಿಂಗ್ ಛಡಾ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ಕರೀನಾ ಕಾಣಿಸಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *