Connect with us

ತೂಕ ಇಳಿಸಿಕೊಂಡ ಬಾಲಿವುಡ್ ಬೇಬೋ – ಕರೀನಾ ಹಾಟ್ ಫೋಟೋ ವೈರಲ್

ತೂಕ ಇಳಿಸಿಕೊಂಡ ಬಾಲಿವುಡ್ ಬೇಬೋ – ಕರೀನಾ ಹಾಟ್ ಫೋಟೋ ವೈರಲ್

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಎರಡನೇ ಮಗುವಿಗೆ ಜನ್ಮನೀಡಿದ ನಂತರ ಇದೀಗ ದೇಹದ ತೂಕ ಇಳಿಸಿಕೊಂಡಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೈಫ್, ಕರೀನಾ ದಂಪತಿಗೆ ಫೆಬ್ರವರಿ ತಿಂಗಳಿನಲ್ಲಿ ಎರಡನೇ ಮಗು ಜನಿಸಿತ್ತು. ಇಷ್ಟುದಿನ ಮಗುವಿನ ಪಾಲನೆ ಪೋಷಣೆಯಲ್ಲಿ ನಿರತರಾಗಿದ್ದ ಕರೀನಾ ಇದೀಗ ಮತ್ತೆ ವೃತ್ತಿ ಜೀವನದತ್ತ ಮುಖ ಮಾಡಲು ಫಿಟ್‍ನೆಸ್ ವರ್ಕ್ ಔಟ್ ಶುರುಮಾಡಿದ್ದಾರೆ.

ಸುಮಾರು ನಾಲ್ಕು ತಿಂಗಳ ಬಳಿಕ ವರ್ಕ್‍ಔಟ್ ಮಾಡಿ ದೇಹದ ತೂಕ ಇಳಿಸಿಕೊಂಡಿರುವ ಫೋಟೋವನ್ನು ಕರೀನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕರಿನಾ ಪ್ರಿಂಟೆಡ್ ಬ್ಯಾಂಡೊ ಬ್ರಾ ಧರಿಸಿದ್ದು, ಗ್ಲಾಸ್‍ವೊಂದರ ಮುಂದೆ ಫೋಟೋಗೆ ಪೋಸ್ ನೀಡಿದ್ದಾರೆ. ಫೋಟೋದ ಹಿಂಬದಿಯಲ್ಲಿ ಸ್ವಿಮಿಂಗ್ ಪೂಲ್ ಇದ್ದು, ಕರೀನಾ ಪಕ್ಕದಲ್ಲಿ ಯೋಗ ಮ್ಯಾಟ್ ಇರುವುದನ್ನು ಕಾಣಬಹುದಾಗಿದೆ. ಇದನ್ನು ಓದಿ: ಅಮಿತಾಬ್ ಬಚ್ಚನ್, ಜಯಗೆ 48ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಫೋಟೊ ಜೊತೆಗೆ ಗ್ಲಾಸ್‍ನಲ್ಲಿ ಕಾಣಿಸುತ್ತಿರುವ ವಸ್ತುಗಳು ಬಹಳಷ್ಟು ಹತ್ತಿರದಲ್ಲಿದೆ. ಆದ್ದರಿಂದ ಅಂತರವನ್ನು ಕಾಯ್ದುಕೊಳ್ಳಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಹಲವು ವರ್ಷಗಳ ಕಾಲ ಡೇಟ್ ಮಾಡಿ ನಂತರ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ 2016ರಲ್ಲಿ ಈ ಜೋಡಿಗೆ ಮೊದಲ ಮಗು ತೈಮೂರ್ ಜನಿಸಿದ್ದ. ಇದನ್ನು ಓದಿ: ಈ ನಟಿ ಮೈಮೇಲೆ ಬಟ್ಟೆ ನಿಲ್ಲೋದೇ ಇಲ್ವಂತೆ- ಫೋಟೋ ವೈರಲ್

Advertisement
Advertisement