Advertisements

ಕರಾಚಿ ಸೂಸೈಡ್ ಬಾಂಬರ್ ಎಂಫಿಲ್‌ ಪದವೀಧರೆ, 2 ಮಕ್ಕಳ ತಾಯಿ – ಕೃತ್ಯ ಎಸಗಿದ್ದು ಯಾಕೆ?

ಇಸ್ಲಾಮಾಬಾದ್: ಮಂಗಳವಾರ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಘಟನೆ ಜಗತ್ತನ್ನೇ ತಲ್ಲಣಗೊಳಿಸಿತ್ತು. ಚೀನಾದ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದ ಮಹಿಳಾ ಸೂಸೈಡ್ ಬಾಂಬರ್ ಮೂವರು ಚೀನಾದ ಪ್ರಾಧ್ಯಾಪಕರನ್ನೊಳಗೊಂಡಂತೆ ನಾಲ್ವರ ಬಲಿ ಪಡೆದುಕೊಂಡಿದ್ದಳು.

Advertisements

ಕರಾಚಿ ವಿಶ್ವವಿದ್ಯಾನಿಲಯದ ಬಳಿ ತನ್ನು ತಾನೇ ಸ್ಫೋಟಿಸಿಕೊಂಡಿದ್ದ ಮಹಿಳೆ ಶಾರಿ ಬಲೋಚ್. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಡೆಸಿದ ಆತ್ಮಹತ್ಯಾ ಬಾಂಬಿಂಗ್ ಎಂದು ಬಲೂಚಿಸ್ತಾನ್ ಆರ್ಮಿ ಸಂಘಟನೆ ತಿಳಿಸಿದೆ.

Advertisements

ಶಾರಿ ಬಲೋಚ್ ಯಾರು?
30 ವರ್ಷದ ಶಾರಿ ಬಲೋಚ್ ಪ್ರಣಿಶಾಸ್ತ್ರ ಹಾಗೂ ಎಂಫಿಲ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಳು. ಶಾಲೆಯಲ್ಲಿ ಶಿಕ್ಷಕಿಯೂ ಆಗಿದ್ದ ಈಕೆಯ ತಂದೆ ಸರ್ಕಾರಿ ನೌಕರನಾಗಿದ್ದು, ಆಕೆಯ ಪತಿ ದಂತವೈದ್ಯನಾಗಿದ್ದಾನೆ. ಶಾರಿಗೆ 8 ವರ್ಷದ ಹಾಗೂ 4 ವರ್ಷದ ಇಬ್ಬರು ಮಕ್ಕಳಿದ್ದಾರೆ ಎಂದು ಅಫ್ಘಾನಿಸ್ತಾನದ ಪತ್ರಕರ್ತ ಬಶೀರ್ ಅಹ್ಮದ್ ತಿಳಿಸಿದ್ದಾರೆ. ಇದನ್ನೂ ಓದಿ: ಚೀನಿಯರನ್ನು ಗುರಿಯಾಗಿಸಿ ಕರಾಚಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು

ಶಾರಿ ಕುಟುಂಬ ಸುಶಿಕ್ಷಿತವಾಗಿದ್ದು, ಸಶಸ್ತ್ರ ಗುಂಪುಗಳೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. 2 ವರ್ಷಗಳ ಹಿಂದೆ ಶಾರಿ ಸ್ವ-ತ್ಯಾಗ ಮಿಷನ್(ಸೆಲ್ಫ್-ಸ್ಯಾಕ್ರಿಫೈಸಿಂಗ್ ಮಿಷನ್)ಗೆ ಸೇರಿಕೊಂಡಿದ್ದಳು ಎನ್ನಲಾಗಿದೆ.

Advertisements

 

ಮಂಗಳವಾರ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಶಾರಿ ಪತಿ, ಆಕೆಯ ನಿಸ್ವಾರ್ಥ ಕೃತ್ಯ ಮಾತು ಬರದಂತೆ ಮಾಡಿದೆ. ಆದರೂ ಆಕೆಯ ಈ ಕೃತ್ಯಕ್ಕೆ ಹೆಮ್ಮೆಪಡುತ್ತೇನೆ ಎಂದಿದ್ದಾನೆ. ಇದನ್ನೂ ಓದಿ: ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ: ಪಾಕ್‌ನಲ್ಲಿ ತನ್ನ ಪ್ರಜೆಗಳ ಹತ್ಯೆಗೆ ಚೀನಾ ಕಿಡಿ

ಕರಾಚಿ ವಿಶ್ವವಿದ್ಯಾನಿಲಯದ ಬಳಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಚೀನೀ ಉಪನ್ಯಾಸಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದರು. ಹಲವರಿಗೆ ಗಾಯಗಳಾಗಿದ್ದವು. ಚೀನಾ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದ ದಾಳಿಯಲ್ಲಿ ಶಾರಿ ಬುರ್ಕಾ ಧರಿಸಿ ರಸ್ತೆಯ ಬದಿ ನಿಂತುಕೊಂಡಿದ್ದಳು. ಉಪನ್ಯಾಸಕರ ವಾಹನ ಶಾರಿ ಬಳಿ ಬರುತ್ತಿದ್ದಂತೆ ಆಕೆ ರಿಮೋಟ್ ಕಂಟ್ರೋಲ್ ಮೂಲಕ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಳು. ಈ ಘಟನೆಯ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮಾನವನಿಗೆ ಹೆಚ್3ಎನ್8 ಹಕ್ಕಿಜ್ವರ – ಚೀನಾದಲ್ಲಿ ಮೊದಲ ಪ್ರಕರಣ ಪತ್ತೆ

ಆತ್ಮಹತ್ಯಾ ದಾಳಿಗೆ ಕಾರಣವೇನು?
ಬಲೂಚಿಸ್ತಾನ ಪಾಕಿಸ್ತಾನದಿಂದ ಹಲವು ವರ್ಷಗಳಿಂದ ಸ್ವಾತಂತ್ರ್ಯವನ್ನು ಕೇಳುತ್ತಿದೆ. ಇದರೊಂದಿಗೆ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಇದು ಪಾಕಿಸ್ತಾನದ ಅತಿ ದೊಡ್ಡ ಪ್ರಾಂತ್ಯವಾಗಿದ್ದರೂ ಅಭಿವೃದ್ಧಿಯಲ್ಲಿ ಮುಂದುವರಿದಿಲ್ಲ. ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ.5 ರಷ್ಟು ಮಾತ್ರವೇ ಬಲೂಚಿಸ್ತಾನದಲ್ಲಿ ವಾಸವಿದ್ದಾರೆ.

ಈ ಹಿಂದೆಯೂ ಬಲೂಚಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಬಿಎಲ್‌ಎ ಚೀನಾದ ನಾಗರಿಕ ಮೇಲೆ ದಾಳಿ ನಡೆಸಿದೆ. ಶಾರಿ ಬಲೋಚ್ ಕೂಡಾ ಬಲೂಚಿಸ್ತಾನದ ಹಿಂಸಾಚಾರದ ಬಗ್ಗೆ ತಿಳಿದಿದ್ದು, ಪ್ರತಿಕಾರ ತೀರಿಸಿಕೊಳ್ಳಲು ಆತ್ಮಹತ್ಯಾ ದಾಳಿ ನಡೆಸಿದ್ದಾಳೆ.

Advertisements
Exit mobile version