Connect with us

Districts

ಆಡಿಯೋ ವೈರಲ್ ಬೆನ್ನಲ್ಲೇ ಪೀಠತ್ಯಾಗಕ್ಕೆ ಮುಂದಾದ ಕಣ್ವಮಠದ ಸ್ವಾಮೀಜಿ

Published

on

-ಕೆಲವರ ಷಡ್ಯಂತ್ರಕ್ಕೆ ಬಲಿಪಶು ಆಗಿದ್ದೇನೆ

ಯಾದಗಿರಿ: ಜಿಲ್ಲೆಯ ಕಣ್ವಮಠ ಕಾಮಿಸ್ವಾಮಿಯ ಕಾಮಪುರಾಣ ಆಡಿಯೋ ಸ್ಥಳೀಯ ಮಟ್ಟದಲ್ಲಿ ಬಾರಿ ಸುದ್ದಿಯಲ್ಲಿದೆ. ಆದರೆ ಇದರಲ್ಲಿ ನಂದೇನು ತಪ್ಪಿಲ್ಲ, ಇದೆಲ್ಲಾ ಷಡ್ಯಂತ್ರ ಎಂದು ಕಣ್ವಮಠದ ವಿದ್ಯಾವಾರೀಧಿತೀರ್ಥ ಸ್ವಾಮೀಜಿ ಪೀಠತ್ಯಾಗ ಮಾಡಲು ಮುಂದಾಗಿದ್ದಾರೆ.

ಸುರಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ, ಪೀಠಾಧಿಪತಿ ಶ್ರೀ 1008 ವಿದ್ಯಾವಾರೀಧಿತೀರ್ಥ ಸ್ವಾಮಿಯ ಅಕ್ರಮ ಸಂಬಂಧ ಬಟಾ ಬಯಲಾಗಿದೆ. ಸಾಕ್ಷಿಗಳು ಸ್ವಾಮಿಯ ವಿರುದ್ಧವೇ ಇದ್ದರೂ ಇದರಲ್ಲಿ ನಂದೇನು ತಪ್ಪಿಲ್ಲ ಎಂದು ಸ್ವಾಮೀಜಿ ಹೇಳುತ್ತಿದ್ದಾರೆ. ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸಪ್‍ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ. ಇದನ್ನೂ ಓದಿ:ಈಗ ಬರ್ತಿಯಾ, ನಾನು ಬೇಡ್ವಾ- ಕಾಮಿಸ್ವಾಮಿಯ ಆಡಿಯೋ ಔಟ್

ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸ್ವಾಮಿ ಮೇಲಿದೆ. ಎಷ್ಟೇಲ್ಲಾ ಸಾಕ್ಷಿಗಳು ಸ್ವಾಮೀಜಿಯ ವಿರುದ್ಧವಿದ್ದರೂ ನಾನೇನು ಮಾಡಿಲ್ಲ, ನನ್ನ ಹೆಸರನ್ನು ಹಾಳು ಮಾಡಲು ಮಠವನ್ನು ಕಂಡರೆ ಆಗದವರು ಈ ರೀತಿ ಮಾಡುತ್ತಿದ್ದಾರೆ. ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ನನಗೆ ಗೊತ್ತಿರದ ಮಹಿಳೆಯರು ಈ ರೀತಿ ಮೆಸೆಜ್ ಮಾಡಿದ್ದಾರೆ. ಆದರೆ ನಾನು ಅವರ ಬಳಿ ಅಸಭ್ಯವಾಗಿ ವರ್ತಿಸಿಲ್ಲ. ಅವರೇ ನನಗೆ ಮೊದಲು ಫೋಟೋ, ವಿಡಿಯೋ ಕಾಲ್ ಮಾಡಿದ್ದು ಎಂದು ಹೇಳಿದರು. ಪೀಠದಲ್ಲಿ ಇದ್ದುಕೊಂಡು ಈ ಆರೋಪವನ್ನು ನಾನು ಎದುರಿಸುವುದು ಸರಿಯಲ್ಲ. ಆದ್ದರಿಂದ ಪೀಠತ್ಯಾಗ ಮಾಡಿ ಆರೋಪವನ್ನು ಎದುರಿಸಿ, ಹೋರಾಡುತ್ತೇನೆ. ನಾನು ಯಾವ ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

ಅಲ್ಲದೆ ನನ್ನ ಮೊಬೈಲ್‍ಗೆ ಲಾಕ್ ಇಟ್ಟಿಲ್ಲ. ಆದ್ದರಿಂದ ನನ್ನ ಫೋನ್ ತೆಗೆದುಕೊಂಡು ಯಾರೋ ನನ್ನ ವಿರುದ್ಧ ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ನನ್ನ ಧ್ವನಿಯಲ್ಲಿ ಕಾಲ್ ಮಾಡಿದ್ದಾರೆ, ನನ್ನ ಹೆಸರಿನಲ್ಲಿ ಮಹಿಳೆಯರೊಂದಿಗೆ ಚಾಟ್ ಮಾಡಿದ್ದಾರೆ. ನಾನು ಚಾಚುರ್ಮಾಸದ ಕಾರ್ಯಕ್ರಮಗಳಲ್ಲಿ ಇದ್ದಾಗ ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಬೇಕಾದ ವ್ಯಕ್ತಿಗಳಿಗೆ ಕರೆ ಮಾಡಲು ಬಳಸುತ್ತಿದ್ದೆ. ಆದರೆ ನಾನು ಯಾರಿಗೂ ಚಾಟ್, ವಿಡಿಯೋ ಕಾಲ್ ಮಾಡಿಲ್ಲ ಎಂದರು.

ಆಡಿಯೋ ಹೊರಬಂದಿರುವ ಬಗ್ಗೆ ಮಾತನಾಡಿ, ನನ್ನ ಧ್ವನಿಯಲ್ಲಿ ಯಾರೋ ಮಾತನಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಾನು ಮಾತನಾಡಿರುವುದು ಅಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ. ನಿಮಗೆ ಕೇವಲ ಒಂದೆರಡು ನಂಬರ್‍ಗಳ ಚಾಟ್ ಮಾತ್ರ ಸಿಕ್ಕಿದೆ. ಆದ್ರೆ ಮೊದಲು ಮೂರ್ನಾಲ್ಕು ನಂಬರ್‍ಗಳಿಂದ ಏನು ಚಾಟ್ ಮಾಡಿದ್ದರು, ಏನೆಲ್ಲಾ ಫೋಟೋ ವಿಡಿಯೋ ಕಳುಹಿಸಿದ್ದರು ಎಂದು ನಿಮಗೆ ಗೊತ್ತಿಲ್ಲ. ಸಂಚು ರೂಪಿಸಿದ್ದಾರೆ ಅದ್ಯಾವುದನ್ನು ನಿಮಗೆ ತಲುಪಿಸಿಲ್ಲ. ಇದೆಲ್ಲಾ ಒಂದು ಸಂಚು, ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಕಳೆದ 4-5 ವರ್ಷಗಳಿಂದಲೂ ಈ ರೀತಿ ಸಂಚುಗಳು ನನ್ನ ವಿರುದ್ಧ ನಡೆಯುತ್ತಲೇ ಬಂದಿದೆ. ನಾನು ಈ ಪೀಠವನ್ನು ಆರೋಹಣ ಮಾಡುತ್ತಿದ್ದಾಗ ಗಲಾಟೆ ಮಾಡಿದ ವ್ಯಕ್ತಿಗಳೇ ಇದರ ರುವಾರಿಗಳಾಗಿದ್ದಾರೆ. ಅವರೇ ನನ್ನ ವಿರುದ್ಧ ಸಂಚು ಹೂಡಿದ್ದಾರೆ. ಮಠದ ಟ್ರಸ್ಟ್ ಮುಖಾಂತರ, ಭಕ್ತರ ಸಹಾಯ ಪಡೆದು ಇದರ ತನಿಖೆ ನಡೆಸುತ್ತೇವೆ ಎಂದರು.