Connect with us

Chikkaballapur

ಸರಣಿ ಬಾಂಬ್ ಬ್ಲಾಸ್ಟ್- ಮಗು ಸಮೇತ ದಂಪತಿ ಬೆಂಗ್ಳೂರಿಗೆ ವಾಪಸ್

Published

on

ಚಿಕ್ಕಬಳ್ಳಾಪುರ: ದ್ವೀಪರಾಷ್ಟ್ರ ಶ್ರೀಲಂಕಾದ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಬೆದರಿದ ಕನ್ನಡಿಗರು ಒಬ್ಬೊಬ್ಬರಾಗಿ ತಾಯ್ನಾಡು ಕರ್ನಾಟಕದತ್ತ ಅಗಮಿಸುತ್ತಿದ್ದಾರೆ.

ಅಂದಹಾಗೆ ಶ್ರೀಲಂಕಾ ಗೆ ಪ್ರವಾಸಕ್ಕೆ ತೆರಳಿದ್ದ ಎಚ್ ಎಸ್ ಅರ್ ಲೇಔಟ್ ನಿವಾಸಿಗಳಾದ ಮಯೂರ್-ಅಮೂಲ್ಯ ದಂಪತಿ ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಅಗಮಿಸಿದ್ದಾರೆ. ಕಳೆದ ರಾತ್ರಿ ಏರ್ ಇಂಡಿಯೂ ವಿಮಾನದ ಮೂಲಕ ಕೆಐಎಎಲ್ ಗೆ ಅಗಮಿಸಿದ ದಂಪತಿ ಶ್ರೀಲಂಕಾದ ಘಟನಾವಳಿಗಳ ಬಗ್ಗೆ ಹಂಚಿಕೊಂಡರು.

ಬಾಂಬ್ ಬ್ಲಾಸ್ಟ್ ಆದ ಪಕ್ಕದ ಹೋಟೆಲ್ ನಲ್ಲಿ ತಂಗಿದ್ದ ದಂಪತಿ, ಅದೃಷ್ಟವಶಾತ್ ಘಟನೆ ನಡೆದ ದಿನ ನಾವು ಬೇರೋಂದು ಕಡೆ ತೆರಳಿದ್ದೆವು. ತಾವು ತಂಗಿದ್ದ ಪಕ್ಕದ ಶಾಂಗ್ರೀಲಾ ಹೋಟೆಲ್ ನಲ್ಲೇ ಘಟನೆ ನಡೆದ ವಿಷಯ ತಿಳಿದು ಅಘಾತವಾಯಿತು. ಹೇಗೋ ದೇವರ ದಯೆಯಿಂದ ಬದುಕಿ ಬೆಂಗಳೂರಿಗೆ ವಾಪಾಸ್ಸಾದೆವು ಎಂದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣ – 20ಕ್ಕೂ ಹೆಚ್ಚು ಕನ್ನಡಿಗರು ವಾಪಸ್

ಇದಕ್ಕೂ ಮುನ್ನ ನಿತೇಶ್ ನಾಯಕ್ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ರು. ಮತ್ತೊಂದೆಡೆ ಕೇವಲ ಕನ್ನಡಿಗರಷ್ಟೇ ಅಲ್ಲದೆ ನೆರೆಯ ರಾಜ್ಯ ಆಂಧ್ರದ ಕರ್ನೂಲು ಮೂಲದ ಮೂವತ್ತು ಮಂದಿ ಸಹ ತಡ ರಾತ್ರಿ 2.30 ರ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿನ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು.