Connect with us

Bengaluru City

ಅತ್ಯಾಕರ್ಷಕವಾದ ‘ಕುರುಕ್ಷೇತ್ರ’ದ ಹೊಸ ಟೀಸರ್ ರಿಲೀಸ್

Published

on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರದ ಹೊಚ್ಚ ಹೊಸ ಟೀಸರ್ ರಿಲೀಸ್ ಆಗಿದೆ.

ನಿರ್ದೇಶಕ ಮುನಿರತ್ನ ಅವರು ಸಿನಿಮಾ ಬಿಡುಗಡೆಯ ಡೇಟ್ ಅನೌನ್ಸ್ ಮಾಡಿರುವ ಬೆನ್ನಲ್ಲೇ ‘ಕುರುಕ್ಷೇತ್ರ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್‌ನಲ್ಲಿ ಅನೇಕ ಪಾತ್ರಗಳ ಮುಖ ರಿವೀಲ್ ಮಾಡಲಾಗಿದೆ. ಅತ್ಯಾಕರ್ಷಕ ಗ್ರಾಫಿಕ್ಸ್ ಮತ್ತು ತಂತ್ರಜ್ಞಾನ ಎದ್ದು ಕಾಣುತ್ತಿದೆ. ಜೊತೆಗೆ ದುರ್ಯೋಧನನ ಇನ್ನೊಂದು ಝಲಕ್ ಈ ಟೀಸರ್‌ನಲ್ಲಿ ಸಿಕ್ಕಿದೆ.

ದುರ್ಯೋಧನಾಗಿ ದರ್ಶನ್, ಅರ್ಜುನನಿಗೆ ಸಾರಥಿಯಾಗಿ ಕೃಷ್ಣ (ರವಿಚಂದ್ರನ್), ಕರ್ಣ (ಅರ್ಜುನ್ ಸರ್ಜಾ) ಹಾಗೂ ಭೀಷ್ಮ (ಅಂಬರೀಶ್) ಅವರ ಪಾತ್ರ ಟೀಸರ್‌ನಲ್ಲಿ ರಿವೀಲ್ ಆಗಿದೆ. ದ್ರೌಪದಿ (ಸ್ನೇಹ), ಕುಂತಿ (ಭಾರತಿ ವಿಷ್ಣುವರ್ಧನ್), ಶಕುನಿ (ರವಿಶಂಕರ್) ಮತ್ತು ಧರ್ಮರಾಯ (ಶಶಿಕುಮಾರ್) ಲುಕ್ ಕೂಡ ಬಿಡುಗಡೆಯಾಗಿದೆ.

ಸಿನಿಮಾವನ್ನು ಮುನಿರತ್ನ ನಿರ್ಮಾಣ ಮಾಡಿದ್ದರೆ, ನಾಗಣ್ಣ ಚಿತ್ರವನ್ನ ನಿರ್ದೇಶಿಸಿದ್ದಾರೆ. ಶೀಘ್ರದಲ್ಲೇ ಕುರುಕ್ಷೇತ್ರದ ಅದ್ಧೂರಿ ಆಡಿಯೋ ರಿಲೀಸ್ ಸಮಾರಂಭ ನಡೆಯಲಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್‍ಗೆ ಸಿದ್ಧವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವಾದ್ಯಂತ ತೆರೆಕಾಣುತ್ತಿದೆ.