Connect with us

Bengaluru City

ಬಜಾರ್ ಹುಡುಗನ ಎರಡನೇ ಇನ್ನಿಂಗ್ಸ್- ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲ್ಯಾಪ್

Published

on

ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಅಂಗಳಕ್ಕೆ ಎಂಟ್ರಿಕೊಟ್ಟ ಮಾಸ್ ಹೀರೋ ಧನ್ವೀರ್ ‘ಬಂಪರ್’ ಚಿತ್ರದ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಚಿತ್ರದಲ್ಲಿ ಸಾಕಷ್ಟು ಅಭಿಮಾನಿ ಬಳಗ ಸಂಪಾದಿಸಿದ ಬಜಾರ್ ಹುಡ್ಗ ಇದೀಗ ಬಂಪರ್ ನಲ್ಲೂ ಮಾಸ್ ಆಗಿ ಮನರಂಜನೆ ನೀಡೋಕೆ ಸಿದ್ಧವಾಗ್ತಿದ್ದಾರೆ.

ಜನವರಿ 15ಕ್ಕೆ ಚಿತ್ರದ ಮುಹೂರ್ತ ಸಮಾರಂಭವನ್ನು ಚಿತ್ರತಂಡ ಹಮ್ಮಿಕೊಂಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಪರ್ ಚಿತ್ರಕ್ಕೆ ಕ್ಲ್ಯಾಪ್ ಮಾಡಲಿದ್ದಾರೆ.

ಈಗಾಗಲೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಬಂಪರ್ ಚಿತ್ರಕ್ಕೆ ಹರಿ ಸಂತೋಷ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಫ್ಯಾಮಿಲಿ ಎಂಟಟೈನ್ಮೆಂಟ್ ಚಿತ್ರವಾಗಿದ್ದು ಕಮರ್ಶಿಯಲ್ ಎಳೆಯಲ್ಲಿ ವಿಭಿನ್ನವಾಗಿ ಚಿತ್ರವನ್ನು ತೆರೆಮೇಲೆ ತರಲು ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕ ಹರಿ ಸಂತೋಷ್.

ಕಿರಿಕ್ ಪಾರ್ಟಿ ಖ್ಯಾತಿಯ ಅಜನೀಶ್ ಲೋಕನಾಥ್ ಬಂಪರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ‘ಭರಾಟೆ’ ನಿರ್ಮಾಪಕ ಸುಪ್ರಿತ್ ‘ಬಂಪರ್’ ಚಿತ್ರಕ್ಕೆ ಬಂಡವಾಳ ಹೂಡಿದ್ಧಾರೆ. ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿರುವ ನಿರ್ದೇಶಕರು ಚಿತ್ರದ ಇನ್ನಷ್ಟು ಮಾಹಿತಿ ಹಾಗೂ ತಾರಾಬಳಗದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.