Connect with us

Cinema

ನನ್ನ ಕನಸಿನ ಮೇಲೆ ನಡೆಸಿದ ಅತ್ಯಾಚಾರವಿದು- ಫೋಟೋ ಶೇರ್ ಮಾಡಿದ ಕಂಗನಾ

Published

on

ಮುಂಬೈ: ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ತಮ್ಮ ಕಚೇರಿಯನ್ನು ಭಾಗಶಃ ಧ್ವಂಸ ಮಾಡಿದ್ದು, ಸದ್ಯ ಕಚೇರಿಯ ಸ್ಥಿತಿ ಹೇಗಿದೆ ಎಂಬ ಫೋಟೋಗಳನ್ನು ನಟಿ ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ.

ಇದು ನನ್ನ ಕನಸು, ಆತ್ಮಗೌರವ ಹಾಗೂ ಭವಿಷ್ಯದ ಮೇಲೆ ನಡೆಸಿರುವ ಅತ್ಯಾಚಾರ ಎಂದು ಟ್ವೀಟ್ ಮಾಡಿರುವ ಕಂಗನಾ, ಕಚೇರಿಯ ವಸ್ತುಸ್ಥಿತಿಯನ್ನು ತೆರೆದಿಡುವ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ, ನನ್ನ ಕಚೇರಿ ಸ್ಮಶಾನದಂತೆ ಮಾರ್ಪಟ್ಟಿದೆ ಎಂದು ಹೇಳಿರುವ ಕಂಗನಾ, ಕಾಂಗ್ರೆಸ್ ಪಕ್ಷ ಇಂದು ನಡೆಸಿದ ನಿರುದ್ಯೋಗ ದಿನಾಚರಣೆಯ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್ 9 ರಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಕಂಗನಾ ಅವರ ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್ ಬಂಗಲೆಯನ್ನು ಅಕ್ರಮ ಕಟ್ಟಡ ಎಂದು ಪರಿಗಣಿಸಿ ತೆರವು ಕಾರ್ಯಾಚರಣೆ ಮಾಡಿತ್ತು. ಬಿಎಂಸಿ ಅಧಿಕಾರಿಗಳ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಕಂಗನಾ ಅವರು, ಬಿಎಂಸಿ ಈಗಾಗಲೇ ಬಂಗಲೆಗೆ ಶೇ.40ರಷ್ಟು ಹಾನಿ ಮಾಡಿದೆ. ಅಲ್ಲದೆ ಬಂಗಲೆಯ ಒಳಗಡೆ ಇದ್ದ ಕೆಲವೊಂದು ಅಪರೂಪದ ಕಲಾತ್ಮಕ ವಸ್ತುಗಳನ್ನು ಕೂಡ ನಾಶಪಡಿಸಿದೆ. ಹೀಗಾಗಿ ಬಿಎಂಸಿ ತನಗೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮುಂಬೈ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 7 ರಂದು ಬಿಎಂಸಿ ನೋಟಿಸ್ ಕಳುಹಿಸುವ ಮೂಲಕ ಕಿರುಕುಳ ನೀಡಲು ಹೊರಟಿದೆ. ಅಲ್ಲದೆ ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ತಾನು ಮನಾಲಿಯಲ್ಲಿದ್ದಾಗ 24 ಗಂಟೆಯೊಳಗಡೆ ನೋಟಿಸ್‍ಗೆ ಉತ್ತರ ನೀಡಲು ತಿಳಿಸಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಿದ್ದರು. ಅದಾದ ಎರಡು ದಿನಗಳ ಬಳಿಕ ಕಂಗನಾ ಮುಂಬೈಗೆ ವಾಪಸ್ಸಾಗಿದ್ದರು. ಈ ವೇಳೆ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರಲು ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ದೂರು ನೀಡಿದ್ದರ ಪರಿಣಾಮ ಅವರಿಗೆ ಕೇಂದ್ರ ಸರ್ಕಾರ ‘ವೈ-ಪ್ಲಸ್’ ಭದ್ರತೆ ಒದಗಿಸಿತ್ತು.

ಕಂಗನಾ ಸಲ್ಲಿಸುವ ಅರ್ಜಿ ಸಂಬಂಧ ಸೆಪ್ಟೆಂಬರ್ 22 ರಂದು ಮುಂಬೈ ಹೈಕೊರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ.

Click to comment

Leave a Reply

Your email address will not be published. Required fields are marked *