Connect with us

Bollywood

ನ್ಯಾಯ ಸಿಗುವ ನಂಬಿಕೆ ಇದೆ: ರಾಜ್ಯಪಾಲರ ಭೇಟಿ ಬಳಿಕ ಕಂಗನಾ ಮಾತು

Published

on

-ಮಗಳ ಮನವಿಯಂತೆ ಆಲಿಸಿದ್ರು

ಮುಂಬೈ: ಬಾಲಿವುಡ್ ಕ್ವೀನ್, ನಟಿ ಕಂಗನಾ ರಣಾವತ್ ಇಂದು ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶಯಾರಿ ಅವರನ್ನ ಭೇಟಿಯಾದರು. ಸೋದರಿ ರಂಗೋಲಿ ಜೊತೆ ರಾಜಭವನಕ್ಕೆ ಕಂಗನಾ ಆಗಮಿಸಿದ್ದರು.

ರಾಜ್ಯಪಾಲರ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್, ಒಬ್ಬ ಸಾಮಾನ್ಯ ಪ್ರಜೆಯಂತೆ ರಾಜಭವನಕ್ಕೆ ಬಂದಿದ್ದೆ. ನನಗಾದ ಅನ್ಯಾಯದ ಬಗ್ಗೆ ರಾಜ್ಯಪಾಲರ ಮುಂದೆ ಹೇಳಿಕೊಂಡಿದ್ದೇನೆ. ನನಗೆ ನ್ಯಾಯ ಸಿಗುವ ನಂಬಿಕೆ ಇದೆ. ರಾಜ್ಯಪಾಲರ ಮಗಳ ಮನವಿಯಂತೆ ನನ್ನ ಸಮಸ್ಯೆಯನ್ನ ಆಲಿಸಿರೋದು ಖುಷಿ ತಂದಿದೆ. ರಾಜಕೀಯ ಮತ್ತು ಯಾವುದೇ ಪಕ್ಷಗಳಿಗೆ ಸಂಬಂಧವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

ಕಳೆದ ಕೆಲ ದಿನಗಳಿಂದ ಶಿವಸೇನೆ ಮತ್ತು ಕಂಗನಾ ನಡುವೆ ಜಟಾಪಟಿ ನಡೆದಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಬಿಎಂಸಿ ನಿಯಮಗಳ ವಿರುದ್ಧವಾಗಿ ಕಂಗನಾ ಕಚೇರಿಯ ಕಟ್ಟಡ ವಿನ್ಯಾಸ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ನೋಟಿಸ್ ನೀಡಿದ ಕೆಲವೇ ಗಂಟೆಗಳಲ್ಲಿ ಬಿಎಂಸಿ ಕಚೇರಿ ಕಟ್ಟಡ ಒಳಾಂಗಣವನ್ನ ನೆಲಸಮ ಮಾಡಿತ್ತು. ಈ ಸಂಬಂಧ ಕಂಗನಾ ನ್ಯಾಯಾಲಯದ ಮೊರೆ ಹೋಗಿದ್ದರು. ಕಂಗನಾ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಬಿಎಂಸಿ ಕಾರ್ಯಚರಣೆಗೆ ತಡೆ ನೀಡಿದೆ. ಹಾಗೆ ದಿಢೀರ್ ನಿರ್ಧಾರಕ್ಕೆ ಕಾರಣ ತಿಳಿಸುವಂತೆ ಬಿಎಂಸಿಗೆ ನ್ಯಾಯಾಲಯ ಸೂಚನೆ ನೀಡಿದೆ. ಇದನ್ನೂ ಓದಿ: ಕಂಗನಾ ವಿರುದ್ಧ ಡ್ರಗ್‌ ಪರೀಕ್ಷೆ – ಸಾಬೀತಾದ್ರೆ ಮುಂಬೈ ತೊರೆಯುತ್ತೇನೆ

ಕಟ್ಟಡ ನೆಲಸಮ ಬೆನ್ನಲ್ಲೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಕಂಗನಾ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಶಿವಸೇನೆ ಸಂಸದ ಸಂಜಯ್ ರಾವತ್, ಸರ್ಕಾರಕ್ಕೂ ಮತ್ತು ಕಟ್ಟಡ ನೆಲಸಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿತ್ತು. ಈ ನಡುವೆ ಕಂಗನಾ ವಿರುದ್ಧ ಡ್ರಗ್ಸ್ ಸೇವನೆ ಆರೋಪವನ್ನ ಮಹಾರಾಷ್ಟ್ರ ಸರ್ಕಾರ ಮಾಡಿದೆ. ಆರೋಪ ಸಾಬೀತಾದ್ರೆ ಮುಂಬೈ ತೊರೆಯುವದಾಗಿ ಕಂಗನಾ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ

 

Click to comment

Leave a Reply

Your email address will not be published. Required fields are marked *