Crime
ಕಲಬುರಗಿ ಅಪಘಾತದಲ್ಲಿ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ಬಳಿ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಮೂರು ಜನ ಸಾವನ್ನಪ್ಪಿರುವ ಪ್ರಕರಣ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಸೋಮವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ರಾವೂರ ಗ್ರಾಮದ ಭಿಮಾಶಂಕರ್ ಪ್ಯಾಟಿ, ಅಕ್ಬರ್ ಪಟೇಲ್, ಭಾಗ್ಯಶ್ರೀ ಎಂಬವರು ಸ್ಥಳದಲ್ಲೆ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಸಾವನ್ನಪ್ಪಿದ ಯುವತಿ ಹಾಗೂ ಇಬ್ಬರು ಯುವಕರ ಮನೆಯಲ್ಲಿ ಇವರು ಎಲ್ಲಿಗೆ ಮತ್ತು ಯಾಕೆ ಹೋಗುತ್ತಿದ್ದರು ಎಂಬುದೆ ಗೊತ್ತಿಲ್ಲ.
ಸದ್ಯ ಪೊಲೀಸರು ಕಲೆ ಹಾಕಿರುವ ಮಾಹಿತಿ ಪ್ರಕಾರ ಈ ಮೂರು ಜನ ರಾವೂರ್ ನಿಂದ ವಾಡಿ ಕಡೆ ತೆರಳೊಕೆ ಮುಂದಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಮೂವರು ಅದು ನಸುಕಿನ ಜಾವ ಮನೆಯವರಿಗೆ ತಿಳಿಸದೇ ಬೈಕ್ ನಲ್ಲಿ ಎಲ್ಲಿಗೆ ಮತ್ತು ಏಕೆ ತೆರಳ್ತಿದ್ದರು ಅನ್ನೋದು ಮಾತ್ರ ನಿಗೂಢವಾಗಿದೆ. ಇನ್ನೂ ಘಟನೆಯ ಬಳಿಕ ಲಾರಿ ಚಾಲಕ ಎಸ್ಕೇಪ್ ಆಗಿದ್ದಾನೆ. ಅಪಘಾತ ಪ್ರಕರಣ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
