Districts
ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಶಾಸಕ ಬಸವರಾಜ್ ಮತ್ತಿಮೂಡ್ ನೆರವು

ಕಲಬುರಗಿ: ಪಬ್ಲಿಕ್ ಟಿವಿಯ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಕಲಬುರಗಿಯ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಸಹ ಕೈ ಜೋಡಿಸಿದ್ದಾರೆ.
ಶಾಸಕರ ಒಂದು ತಿಂಗಳ ಸಂಬಳ ಸೇರಿದಂತೆ ಒಟ್ಟು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಪಬ್ಲಿಕ್ ಟಿವಿಯ ಚಾರಿಟೇಬಲ್ ಟ್ರಸ್ಟಿಗೇ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಪಬ್ಲಿಕ್ ಟಿವಿ ಎಸ್ಎಸ್ಎಲ್ಸಿ ಮಕ್ಕಳ ಹಿತ ದೃಷ್ಟಿಯಿಂದ ಒಳ್ಳೆಯ ಸಮಾಜಮುಖಿ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.
ಈ ಬಾರಿ ಶೈಕ್ಷಣಿಕ ವರ್ಷವೇ ಮುಗಿಯಿತು ಎಂದು ಎಸ್.ಎಸ್.ಎಲ್.ಸಿ ಮಕ್ಕಳು ನಿರಾಸೆಯನ್ನು ಹೊಂದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಪಬ್ಲಿಕ್ ಟಿವಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡುವ ಮೂಲಕ ಅವರ ಬಾಳಿನಲ್ಲಿ ಬೆಳಕು ಚೆಲ್ಲಿದ್ದಾರೆ. ಹೀಗಾಗಿ ನನದು ಸಹ ಅಳಿಲು ಸೇವೆ ಇರಲಿ ಎಂದು ಪಬ್ಲಿಕ್ ಟಿವಿಯ ಅಭಿಯಾನದ ಜೊತೆ ಕೈ ಜೋಡಿಸುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಮತ್ತಿಮೂಡ್ ಹೇಳಿದ್ದಾರೆ.
