Connect with us

Districts

ಕಲಬುರಗಿಯಲ್ಲಿರೋ ಕೇಂದ್ರ ಸರ್ಕಾರದ ಸಿಸಿಐ ಸಿಮೆಂಟ್ ಕಾರ್ಖಾನೆ ಅದಾನಿ ಪಾಲು

Published

on

Share this

ಕಲಬುರಗಿ: ತೊಗರಿ ಕಣಜವಾಗಿರುವ ಕಲಬುರಗಿ ಜಿಲ್ಲೆ ಸಿಮೆಂಟ್ ಹಬ್ ಅಂತಾನೆ ಇಡೀ ದೇಶದಲ್ಲಿ ತನ್ನ ಹೆಸರನ್ನು ಪಡೆದುಕೊಂಡಿದೆ. ಹೀಗಾಗಿಯೇ ಇಲ್ಲಿ 10ಕ್ಕೂ ಹೆಚ್ಚು ಪ್ರತಿಷ್ಠಿತ ಸಿಮೆಂಟ್ ಕಾರ್ಖಾನೆಗಳು ಜಿಲ್ಲೆಯಲ್ಲಿ ತಲೆ ಎತ್ತಿವೆ.

ಕಲಬುರಗಿ ಜಿಲ್ಲೆ ಸೇಡಂ ತಾಕೂಕಿನ ಕುರಕುಂಟಾ ಗ್ರಾಮದಲ್ಲಿ ಕೇಂದ್ರ ಸರ್ಕಾರಕ್ಕೆ ಸೇರಿದ ಸಿಸಿಐ ಸಿಮೆಂಟ್ ಕಾರ್ಖಾನೆ ಸಿಮೆಂಟ್ ಕಂಪನಿ ಆಫ್ ಇಂಡಿಯಾ(ಸಿಸಿಐ) ಕಾರ್ಖಾನೆ ಉದ್ಯಮಿ ಗೌತಮ ಅದಾನಿ ಮಾಲೀಕತ್ವದ ಅದಾನಿ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ (ಎಸಿಐಎಲ್) ಅಭಿವೃದ್ಧಿಪಡಿಸಲು ಮುಂದಾಗಿದೆ.

ಮೊದಲ ಬಾರಿಗೆ ಅದಾನಿ ಸಿಮೆಂಟ್ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದು, ಹೇರಳವಾಗಿ ಕಚ್ಚಾ ವಸ್ತು ಸಿಗುವ ಸಿಮೆಂಟ್ ನಾಡು ಕಲಬುರಗಿಗೆ ಇದರ ಲಾಭವಾಗಲಿದೆ. ಮುಚ್ಚಿರುವ ಸಿಸಿಐಗೆ ಮರು ಜೀವ ಸಿಗಲಿದೆ. ಉದ್ಯೋಗ ಅವಕಾಶಗಳು ಮತ್ತು ಉದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಬೂಸ್ಟ್ ಸಿಗಲಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಯುವ ವೈದ್ಯೆ ಸಾವು

ಕಲಬುರಗಿಯ ಮೊದಲ ಸಿಮೆಂಟ್ ಕಾರ್ಖಾನೆಯಾಗಿರುವ ಕುರಕುಂಟಾ ಸಿಸಿಐ ಅನ್ನು ಅದಾನಿ ಗ್ರೂಪ್‍ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಗತ್ಯ ಪ್ರಕ್ರಿಯೆ ನಡೆದಿದೆ. ಕಾರ್ಖಾನೆ ಆರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಶೀಘ್ರವೇ ಆರಂಭವಾಗಲಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ದೃಢಪಡಿಸಿದ್ದಾರೆ.

ಜಿಲ್ಲೆಯ ಸೇಡಂ ತಾಲೂಕಿನ ಕುರಕುಂಟಾದಲ್ಲಿ 1972ರ ಅಕ್ಟೋಬರ್‍ನಲ್ಲಿ ಆರಂಭವಾದ ಈ ಸಿಸಿಐ ವಾರ್ಷಿಕ 2 ಲಕ್ಷ ಟನ್ ಸಿಮೆಂಟ್ ಉದ್ಪಾದನೆ ಮಾಡುತ್ತಿತ್ತು. ಈ ಪ್ರದೇಶದಲ್ಲಿಖಾಸಗಿ ಸ್ವಾಮ್ಯದ ಹಲವು ಸಿಮೆಂಟ್ ಕಾರ್ಖಾನೆಗಳು ಬಂದಿದ್ದರಿಂದ ಇದನ್ನು 1998ರಲ್ಲಿಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಲಾಗಿತ್ತು. ಸುಮಾರು 430ಕ್ಕೂ ಹೆಚ್ಚು ಕಾರ್ಮಿಕರು ಇದರಲ್ಲಿಕೆಲಸ ಮಾಡುತ್ತಿದ್ದರು ಎಂದು ಕಾರ್ಮಿಕ ಮುಖಂಡರು ಹೇಳುತ್ತಾರೆ.

ಸಿಸಿಐ ಕಾರ್ಖಾನೆ ವ್ಯಾಪ್ತಿಯಲ್ಲಿ 932 ಎಕರೆ ಜಮೀನಿದೆ. ಸಿಮೆಂಟ್ ಉತ್ಪಾದನೆಗಾಗಿ ಇನ್ನೂ 132. 67 ಮಿಲಿಯನ್ ಟನ್ ಸುಣ್ಣದ ಕಲ್ಲುಮೀಸಲಿಡಲಾಗಿದೆ. ಶೇ 110ರಷ್ಟು ಸಿಮೆಂಟ್ ಉತ್ಪಾದಿಸಿದ್ದರಿಂದ ಈ ಕಾರ್ಖಾನೆಗೆ 1989ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಇದನ್ನೂ ಓದಿ: ಅಂಗಾಂಗ ದಾನ ಮಾಡಿ ಇಬ್ಬರು ರೋಗಿಗಳ ಪ್ರಾಣ ಉಳಿಸಿದ 27ರ ಯುವಕ

ಕಲಬುರಗಿ ಸಿಮೆಂಟ್ ವಲಯ ಅಧಿಕೃತ ಮೂಲಗಳ ಪ್ರಕಾರ ಕಲಬುರಗಿಯಲ್ಲಿ ಪ್ರತಿ ವರ್ಷ 30ಲಕ್ಷ ಟನ್ ಸಿಮೆಂಟ್ ಉತ್ಪಾದನೆ ಮಾಡಲಾಗುತ್ತಿದೆ. ಸಿಮೆಂಟ್ ಕಾರ್ಖಾನೆಗೆ ಬೇಕಿರುವ ಸುಣ್ಣದ ಕಲ್ಲುಹೇರಳವಾಗಿದೆ. 6,445 ಮಿಲಿಯನ್ ಟನ್ ಸುಣ್ಣದ ಕಲ್ಲುಸಿಮೆಂಟ್ ಉದ್ಯಮಕ್ಕಾಗಿ ಕಾದಿರಿಸಲಾಗಿದೆ.

ಅದಾನಿ ಸಿಮೆಂಟ್ಸ್‍ನಿಂದ ಏನು ಅನುಕೂಲ?:
2009-14ರವರೆಗೆ ಜಾರಿಯಲ್ಲಿದ್ದ ಕೈಗಾರಿಕಾ ನೀತಿಯಲ್ಲಿ ಕಲಬುರಗಿ ವಿಭಾಗವನ್ನು ಸಿಮೆಂಟ್ ವಲಯವನ್ನಾಗಿ ರಾಜ್ಯ ಸರಕಾರ ಘೋಷಿಸಿತ್ತು. ಅದಾನಿ ಗ್ರೂಪ್ ಸಿಸಿಐ ಕಾರ್ಖಾನೆ ಪಡೆದು ಅಭಿವೃದ್ಧಿಪಡಿಸಿದರೆ, 5 ಸಾವಿರ ಜನರಿಗೆ ಪ್ರತ್ಯಕ್ಷ ಮತ್ತು 20 ಸಾವಿರಕ್ಕೂ ಹೆಚ್ಚು ಪರೋಕ್ಷ ನೌಕರಿ ಸಿಗಲಿದೆ. ಇದರ ಜತೆಗೆ ಸಾರಿಗೆ, ಇಂಧನ, ಸಿಮೆಂಟ್ ಚೀಲ ಉತ್ಪಾದನೆ ಸೇರಿದಂತೆ ಇತರ ಕ್ಷೇತ್ರಗಳೂ ಅಭಿವೃದ್ಧಿಯಾಗಲಿವೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಯಾಕೆ ಸಿಮೆಂಟ್ ಉದ್ಯಮಕ್ಕೆ ಕಲಬುರಗಿ ಫೇವರೇಟ್..?
ಕಲಬುರಗಿಯಲ್ಲಿ ಸಿಮೆಂಟ್ ಉದ್ಯಮ ಹುಲುಸಾಗಿ ಬೆಳೆದಿದ್ದು, ಎಸಿಸಿ, ಒರಿಯಂಟ್, ರಾಜಶ್ರೀ, ಆದಿತ್ಯ ಬಿರ್ಲಾ, ಶ್ರೀ ಸಿಮೆಂಟ್, ಅಲ್ಟ್ರಾಟೆಕ್, ಚಟ್ಟಿನಾಡ್ ಸೇರಿದಂತೆ ಪ್ರಮುಖ ಸಿಮೆಂಟ್ ಕಂಪನಿಗಳು ಇಲ್ಲಿವೆ. ಅದಾನಿ ಸಿಮೆಂಟ್ಸ್‍ಗೆ ಅವಕಾಶಗಳು ಹೆಚ್ಚಿವೆ. ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಸಂಪರ್ಕಿಸುವ ರೈಲು ಸೌಲಭ್ಯವಿದೆ. ಇತ್ತೀಚೆಗೆ ವಿಮಾನ ಸಂಪರ್ಕದಿಂದ ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಪ್ರಶಸ್ತವಾಗಿದೆ.

Click to comment

Leave a Reply

Your email address will not be published. Required fields are marked *

Advertisement