Connect with us

Bagalkot

ಪೂಜ್ಯ ಕಾಡಸಿದ್ದೇಶ್ವರ ಶಿವಾಚಾರ್ಯರು ಲಿಂಗೈಕ್ಯ

Published

on

ಬಾಗಲಕೋಟೆ: ಗುಳೇದಗುಡ್ಡದ ಮರಡಿಮಠದ ಪೂಜ್ಯರು ಶ್ರೀ ಕಾಡಸಿದ್ದೇಶ್ವರ ಶಿವಾಚಾರ್ಯರು ಲಿಂಗೈಕ್ಯರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಭಾನುವಾರ ಸಂಜೆ 7 ಗಂಟೆಗೆ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಶಿವಾಚಾರ್ಯರು ಗುಳೇದಗುಡ್ಡ ಮರಡಿಮಠದ 10ನೇ ಪೀಠಾಧಿಪತಿಗಳಾಗಿದ್ದು, 1961ರಲ್ಲಿ ಪಟ್ಟಾಧೀಕಾರ ಆಗಿತ್ತು. ಮರಡಿಮಠ 20 ಶಾಖಾಮಠಗಳನ್ನು ಹೊಂದಿದೆ. 81ನೇ ವಯಸ್ಸಿನಲ್ಲಿ ಶಿವಾಚಾರ್ಯರು ಶಿವೈಕ್ಯರಾಗಿದ್ದಾರೆ.

ಇಂದು ಮಧ್ಯಾಹ್ನ 2.30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಗುಳೇದಗುಡ್ಡ ಪಟ್ಟಣದಲ್ಲಿ ಲಿಂಗೈಕ್ಯ ಶ್ರೀಗಳ ಮೆರವಣಿಗೆ ನಡೆಯಲಿದೆ. ಸಂಜೆ ಶ್ರೀಮಠದ ಆವರಣದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನದಲ್ಲಿ ಕ್ರಿಯಾ ಸಮಾಧಿ ಆಗಲಿದೆ.

ನಾಡಿನ ಹರಗುರು ಚರಮೂರ್ತಿಗಳು ಕ್ರಿಯಾ ಸಮಾಧಿಯಲ್ಲಿ ಭಾಗವಹಿಸಲಿದ್ದಾರೆ. ಸದ್ಯ ಲಿಂಗೈಕ್ಯ ಶ್ರೀಗಳ ಅಂತಿಮ ದರ್ಶನಕ್ಕೆ ಶ್ರೀಮಠದತ್ತ ಭಕ್ತರು ಆಗಮಿಸುತ್ತಿದ್ದು, ಇಂದು ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.