Advertisements

ಕಚ್ಚಾ ಬಾದಾಮ್ ಗಾಯಕನಿಗೆ ರೈಲ್ವೆಯಲ್ಲಿ ಮ್ಯಾನೇಜರ್ ಹುದ್ದೆ – ಅಸಲಿ ಸುದ್ದಿ ಏನು?

ಕೋಲ್ಕತ್ತಾ: ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ನೆಟ್ಟಿಗರ ಮನಗೆದ್ದಿದ್ದ ಕಚ್ಚಾ ಬಾದಾಮ್ ಎಂಬ ಹಾಡವೊಂದನ್ನು ಹಾಡಿ ಪಶ್ಚಿಮ ಬಂಗಾಳದ ಗಾಯಕರಾದ ಬುಬನ್ ಗದ್ಯಾಕರ್ ರಾತ್ರೋರಾತ್ರಿ ವಿಶ್ವದಾದ್ಯಂತ ಪ್ರಖ್ಯಾತಿ ಪಡಿದಿದ್ದರು. ಬೀದಿ ಬದಿ ಕಡಲೆಕಾಯಿ ಮಾರುತ್ತಿದ್ದ ಇವರಿಗೆ ಭಾರತೀಯ ರೈಲ್ವೆಯಲ್ಲಿ ಮ್ಯಾನೇಜರ್ ಹುದ್ದೆ ನೀಡಲಾಗಿದೆ ಎನ್ನುವ ಸುದ್ದಿ ಓಡಾಡುತ್ತಿದೆ.

Advertisements

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೀಡಿಯೋದಲ್ಲಿ ಬುಬನ್ ರೈಲ್ವೆಯ ಬೋಗಿಯೊಂದರ ಬಾಗಿಲಲ್ಲಿ ನಿಂತು ವಾಕಿಟಾಕಿ ಹಿಡಿದು ನಿಂತಿದ್ದಾರೆ. ಅಲ್ಲದೆ ರೈಲ್ವೆ ಇಲಾಖೆಯ ಬಿಳಿ ಸಮವಸ್ತ್ರ ಧರಿಸಿದ್ದಾರೆ. ಇದನ್ನೂ ಓದಿ:  ಕಚ್ಚಾ ಬದಾಮ್ ಎಂದು ಹಾಡಿದ್ದವನ ಆತಂಕವೇನು ಗೊತ್ತಾ?

Advertisements

ಆದರೆ ವೀಡಿಯೋದ ಅಸಲಿಯತ್ತನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಿಕ್ಕ ಮಾಹಿತಿಯೇ ಬೇರೆಯಾಗಿದ್ದು, ವೀಡಿಯೋದಲ್ಲಿ ಇರುವುದು ಬುಬನ್ ಅಲ್ಲ. ಅವರನ್ನು ಹೋಲುವ ಈಗಾಗಲೇ ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೇರೊಬ್ಬ ವ್ಯಕ್ತಿಯೆಂದು ತಿಳಿದು ಬಂದಿದೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು

ಬುಬನ್ ರೈಲ್ವೆ ಇಲಾಖೆಯಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ. ಅಲ್ಲದೆ ವೀಡಿಯೋವನ್ನು ‘ಡೈಲಿ ಟ್ರಾವೆಲ್ ಹ್ಯಾಕ್’ ಎನ್ನುವ ವ್ಲಾಗ್ ನಡೆಸುವ ಬಿಹಾರ ಮೂಲದ ಧನಂಜಯ್ ಕುಮಾರ್ ಅವರು ಚಿತ್ರಿಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅವರೇ ಸೃಷ್ಟಿಸಿರುವಂತೆ ವೀಡಿಯೋದಲ್ಲಿರುವುದು ಬುಬನ್ ಅಲ್ಲ. ಅವರನ್ನ ಹೋಲುವ ಮತ್ತೊಬ್ಬ ವ್ಯಕ್ತಿ. ವೀಡಿಯೋವನ್ನು ಅಗರ್ತಲ್-ಆನಂದ್ ವಿಹಾರ್ ತೇಜಸ್ ರಾಜಧಾನಿ ಎಕ್ಸಪ್ರೆಸ್‍ನಲ್ಲಿ ಚಿತ್ರಿಕರಿಸಲಾಗಿದೆ. ಈ ಮೂಲಕ ಬುಬನ್ ಅವರಿಗೆ ಯಾವುದೇ ರೈಲ್ವೆ ಇಲಾಖೆಯ ಕೆಲಸ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ.

Advertisements

Advertisements
Exit mobile version