Crime
ಕಾಬೂಲಿನಲ್ಲಿ ಸರಣಿ ಬಾಂಬ್ ಸ್ಫೋಟ ಇಬ್ಬರು ಸಾವು!

ಕಾಬೂಲ್: ಅಪಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ.
ಇಂದು ಬೆಳಿಗ್ಗೆ ಅಫಘಾನಿಸ್ತಾನದಲ್ಲಿ ಸರಣಿ ಸ್ಫೋಟಗಳು ಸಂಭವಿಸಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ, ಇನ್ನೊಬ್ಬ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಪಶ್ಷಿಮ ಕಾಬೂಲ್ನಲ್ಲಿ ಪೊಲೀಸರ ವಾಹನಕ್ಕೆ ಜೋಡಿಸಲಾಗಿದ್ದ ಮ್ಯಾಗ್ನೆಟೆಕ್ ಬಾಂಬ್ ಸ್ಫೋಟಗೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ. ಈ ವೇಳೆ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಒಬ್ಬರಿಗೆ ಗಾಯವಾಗಿ ಎಂದು ಪೊಲೀಸ್ ವಕ್ತಾರ ಫರರ್ಮಾಜ್ ತಿಳಿಸಿದ್ದಾರೆ.
ದಕ್ಷಿಣ ಕಾಬೂಲ್ನಲ್ಲೂ ಇಂದು ಮುಂಜಾನೆ ಕಾರಿಗೆ ಜೋಡಿಸಲಾಗಿದ್ದ ಬಾಂಬ್ ಸ್ಫೋಟಿಸಿದೆ. ವಾಹನದಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ.
ಪೂರ್ವ ಕಾಬೂಲ್ನಲ್ಲಿಯೂ ಬಾಂಬ್ ಸ್ಫೋಟಿಸಿದೆ ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
