Wednesday, 26th February 2020

Recent News

ವಿಕಾಸ್, ಸಿಂಧು ಲೋಕನಾಥ್ ಅಭಿನಯದ ‘ಕಾಣದಂತೆ ಮಾಯಾವಾದನು’ ಜ. 31ಕ್ಕೆ ತೆರೆಗೆ

‘ಕಾಣದಂತೆ ಮಾಯವಾದನು’ ಸ್ಯಾಂಡಲ್‍ವುಡ್‍ನಲ್ಲಿ ಬಹಳ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಚಿತ್ರ. ನಟ ವಿಕಾಸ್, ಸಿಂಧು ಲೋಕನಾಥ್ ನಟಿಸಿರುವ ಈ ಚಿತ್ರ ಚಂದನವನದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ವಿಭಿನ್ನ ಕಥಾಹಂದರ, ಸ್ಟೋರಿ ಲೈನ್ ಇರುವ ಈ ಚಿತ್ರವನ್ನು ರಾಜ್ ಪಾತಿಪಾಟಿ ನಿರ್ದೇಶನ ಮಾಡಿದ್ದಾರೆ. ಜಯಮ್ಮನ ಮಗ ಚಿತ್ರದಲ್ಲಿ ದುನಿಯಾ ವಿಜಿಗೆ ಆ್ಯಕ್ಷನ್ ಕಟ್ ಹೇಳಿದ್ದ ವಿಕಾಸ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೇ ತಿಂಗಳ 31ಕ್ಕೆ ಈ ಚಿತ್ರ ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ.

ಚಿತ್ರದಲ್ಲಿ ಲವರ್ ಬಾಯ್, ಆ್ಯಕ್ಷನ್ ಹೀರೋ ಆಗಿ ಮಿಂಚಿರುವ ವಿಕಾಸ್‍ಗೆ ಈ ಚಿತ್ರವನ್ನು ಒಪ್ಪಿಕೊಳ್ಳಲು ಕಥೆಯೇ ಪ್ರೇರಣೆ. ಇನೋಸೆಂಟ್ ಪ್ರೇಮಕಥೆ ಚಿತ್ರದಲ್ಲಿದ್ದು, ಅದ್ರ ಜೊತೆಗೆ ಹಾರಾರ್, ಸಸ್ಪೆನ್ಸ್ ಹಾಗೂ ಥ್ರಿಲ್ ಕೊಡೋ ಎಲಿಮೆಂಟ್‍ಗಳು ಚಿತ್ರದಲ್ಲಿವೆ. ಒಟ್ಟಿನಲ್ಲಿ ಸಿನಿಮಾ ನೋಡಲು ಚಿತ್ರಮಂದಿರದ ಒಳಗೆ ಹೋದ ಪ್ರೇಕ್ಷಕರನಿಗೆ ಮನೋರಂಜನೆಯ ಮಹಾಪೂರದ ಜೊತೆ ಬೇರೆಯದ್ದೆ ಪ್ರಪಂಚ ಕಾಣಸಿಗಲಿದೆ ಎನ್ನುವುದು ಚಿತ್ರತಂಡದ ಮಾತು.

ಕಥೆ ಈ ಚಿತ್ರದ ಜೀವಾಳವಾದರೆ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಚಿತ್ರದ ಮತ್ತೊಂದು ಶಕ್ತಿ. ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಗಾನಪ್ರಿಯರ ಮನಸೆಳೆದಿದೆ. ಚಿತ್ರದ ಮೆಲೋಡಿ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದನಿಯಾಗಿದ್ದು ಈ ಹಾಡು ಸಖತ್ ವೈರಲ್ ಆಗೋದ್ರ ಜೊತೆ ಎಲ್ಲರ ಫೆವರೇಟ್ ಆಗಿದೆ.

ಚಿತ್ರದ ಪ್ರತಿ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಬೊಂಬಾಟ್ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಜನವರಿ ಅಂದರೆ ಇದೇ ತಿಂಗಳ 31ಕ್ಕೆ ‘ಕಾಣದಂತೆ ಮಾಯವಾದನು’ ಚಿತ್ರ ಬಿಡುಗಡೆಯಾಗುತ್ತಿದ್ದು ಪ್ರೇಕ್ಷಕ ಪ್ರಭು ಆರ್ಶೀವಾದಕ್ಕಾಗಿ ಚಿತ್ರತಂಡ ಕಾಯುತ್ತಿದೆ.

Leave a Reply

Your email address will not be published. Required fields are marked *