Saturday, 25th May 2019

Recent News

ಕರ್ನಾಟಕದಲ್ಲಿ ಬಿಡುಗಡೆಗೆ ಮುನ್ನವೇ ‘ಕಾಳ’ನಿಗೆ ಶಾಕ್!

ಬೆಂಗಳೂರು: ಇಂದು ಕರ್ನಾಟಕ ಹೊರತುಪಡಿಸಿ ವಿಶ್ವಾದ್ಯಂತ ತಮಿಳಿನ ಕಾಳಾ ಸಿನಿಮಾ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಕಾಳಾ ಸಿನಿಮಾ ಬಿಡುಗಡೆಯನ್ನು ರದ್ದುಗೊಳಿಸಬೇಕು ಎಂದು ರಾತ್ರಿಯಿಡಿ ಚಿತ್ರಮಂದಿರಗಳ ಮುಂದೆ ಬೀಡು ಬಿಟ್ಟಿದ್ದಾರೆ.

ಸಿಂಗಾಪುರದದಲ್ಲಿ ಕಾಳಾ ಸಿನಿಮಾ ರಿಲೀಸ್ ಆಗಿದೆ. ಆದ್ರೆ ಪ್ರೀಮಿಯರ್ ಶೋ ವೇಳೆ ಸಿನಿಮಾವನ್ನು ಲೈವ್ ಮಾಡಿದ್ದಾನೆ. ಕೂಡಲೇ ಜಾಗೃತರಾದ ಪೊಲೀಸರು ಪ್ರವೀಣ್ ತೇವರ್ ಎಂಬ ಯುವಕನನ್ನು ಬಂಧಿಸಿದ್ದಾರೆ.

ಈ ಸಂಬಂಧ ನಟ ವಿಶಾಲ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಕಾಳಾ ಸಿನಿಮಾ ಫೇಸ್‍ಬುಕ್ ಲೈವ್ ಮಾಡಿದ್ದ ಪ್ರವೀಣ್ ಎಂಬಾತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಸಿನಿಮಾ ಪೈರಸಿ ನಿಲ್ಲಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ರಜಿನಿಕಾಂತ್ ಪುತ್ರಿ ಸೌಂದರ್ಯ ಸಹ ಪೈರಸಿ ನಿಲ್ಲಬೇಕು ಅಂತಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ `ಕಾಳಾ’ ಚಲನಚಿತ್ರವು ಸುಗಮವಾಗಿ ಬಿಡುಗಡೆಯಾಗಲು ಕನ್ನಡಿಗರು ಸಹಕರಿಸಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ಸಿನೆಮಾ ನೋಡಬಯಸುವವರಿಗೆ ಯಾವುದೇ ತೊಂದರೆ ಮಾಡಬೇಡಿ. ಎಲ್ಲರೂ ಸಹಕಾರ ನೀಡಬೇಕು. ಕಾವೇರಿ ನಿರ್ವಹಣಾ ಮಂಡಳಿ ರಚನೆಯು ಸುಪ್ರೀಂ ಕೋರ್ಟ್ ನಿರ್ಧಾರ ಆಗಿದೆ. ಈ ಕುರಿತು ನಾನು ಪ್ರಸ್ತಾಪಿಸಿದ್ದರಲ್ಲಿ ತಪ್ಪೇನಿಲ್ಲ ಅಂತಾ ಹೇಳಿದ್ದಾರೆ.

ಬೆಂಗಳೂರಿನ ಕಾವೇರಿ, ನಟರಾಜ, ಸಂಪಿಗೆ, ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಡೀ ಚಿತ್ರಮಂದಿರಗಳ ಮುಂದೆ ಕಾವಲು ನಿಂತು ಸಿನಿಮಾ ರಿಲೀಸ್‍ಗೆ ಬ್ರೇಕ್ ಹಾಕಿದ್ದಾರೆ. ಇಂದು ನಗರದಲ್ಲಿ ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಫಸ್ಟ್ ಶೋ ರದ್ದಾಗಿದೆ.

Leave a Reply

Your email address will not be published. Required fields are marked *