Connect with us

Crime

86 ವರ್ಷದ ವೃದ್ಧನಿಗೆ 6 ಕೋಟಿ ಪಂಗನಾಮ ಹಾಕಿದ ಅಪ್ರಾಪ್ತ

Published

on

– ಶಾಲೆ ಬಿಟ್ಟ 17 ವರ್ಷದವನಿಂದ ಕೃತ್ಯ
– 35 ಬ್ಯಾಂಕ್ ಖಾತೆ ತೆರೆದಿದ್ದ ಗ್ಯಾಂಗ್
– ವಿಮಾ ಕಂಪನಿ ಏಜೆಂಟ್‍ನಂತೆ ವರ್ತಿಸಿ ವಂಚನೆ

ನವದೆಹಲಿ: 86 ವರ್ಷದ ವೃದ್ಧನಿಗೆ ಶಾಲೆ ಬಿಟ್ಟ 17 ವರ್ಷದ ಹುಡುಗನೊಬ್ಬ ಬರೋಬ್ಬರಿ 6 ಕೋಟಿ ರೂ.ಗಳನ್ನು ವಂಚಿಸಿರುವ ಆಘಾತಕಾರಿ ಘಟನೆ ನಡೆದಿದೆ.

ದೆಹಲಿಯ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯು)ದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 17 ವರ್ಷದ ಶಾಲೆ ತೊರೆದ ಹುಡುಗನನ್ನು ಬಂಧಿಸಿದ್ದಾರೆ. ವಿಮಾ ಕಂಪನಿ ಏಜೆಂಟ್ ಎಂದು ಹೇಳಿಕೊಂಡು 86 ವರ್ಷದ ವೃದ್ಧನಿಗೆ ಬರೋಬ್ಬರಿ 6 ಕೋಟಿ ರೂ.ಗಳನ್ನು ವಂಚಿಸಿದ್ದಾನೆ.

ಆರೋಪಿ ವೃದ್ಧನ ಬ್ಯಾಂಕ್ ಖಾತೆಯಿಂದ ತಾನು ನಕಲಿ ದಾಖಲೆಗಳನ್ನು ನೀಡಿ ತೆರೆದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.

ಅಪ್ರಾಪ್ತ ಹಾಗೂ ಆತನ ಸಹಚರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿಮಾ ಸಂಸ್ತೆಯನ್ನೇ ಸೆಟ್ ಮಾಡಿದ್ದಾರೆ. ವಿಮಾ ಹಣವನ್ನು ಕೊಡೊಸಲು ಸಹಾಯ ಮಾಡುವ ನೆಪದಲ್ಲಿ ವೃದ್ಧನನ್ನು ಸಂಪರ್ಕಿಸಿದ್ದು, ನಂತರ ವೃದ್ಧನಿಂದ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯುವ ಕುರಿತು ಮನವೊಲಿಸಿದ್ದಾನೆ. ಈತನನ್ನು ನಂಬಿದ ವೃದ್ಧ ಆರೋಪಿ ಖಾತೆಗೆ ಹಣವನ್ನು ವರ್ಗಾಯಿಸಿದ್ದಾನೆ.

ಆರೋಪಿಯು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಗ್ಯಾಂಗ್‍ನ ಇತರ ಸದಸ್ಯರನ್ನು ಇತ್ತೀಚೆಗೆ ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಆರ್ಥಿಕ ಅಪರಾಧಗಳ ವಿಭಾಗ ಈ ಕುರಿತು ಟ್ವೀಟ್ ಮಾಡಿದ್ದು, ಅಪ್ರಾಪ್ತನಾಗಿದ್ದರೂ ವಯಸ್ಕ ಎಂದು ಹೇಳಿಕೊಂಡು ಬಾಲಾಪರಾಧಿ ಬ್ಯಾಂಕ್ ಖಾತೆ ತೆರೆದಿದ್ದ. ಈ ಟೆಲಿಫೋನಿಕ್ ವಿಮಾ ವಂಚನೆ ದಂಧೆಯನ್ನು ಇಒಡಬ್ಲ್ಯು ಹಾಗೂ ದೆಹಲಿ ಪೊಲೀಸರು ಬೇಧಿಸಿದ್ದು, ಹಿರಿಯ ನಾಗರಿಕನಿಗೆ 6 ಕೋಟಿ ರೂ. ಮೋಸ ಮಾಡಿದ ತಂಡವನ್ನು ಪತ್ತೆ ಹಚ್ಚಲಾಗಿದೆ. ಈ ತಂಡವು ಖಾಸಗಿ ವಿಮಾ ಕಂಪನಿಗಳಿಗೆ ಕಾಲ್ ಸೆಂಟರ್ ನಡೆಸುತ್ತಿದೆ ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ.


ಇಒಡಬ್ಲ್ಯುನ ಪೊಲೀಸ್ ಜಂಟಿ ಆಯುಕ್ತ ಒ.ಪಿ.ಮಿಶ್ರಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೇಂದ್ರ ದೆಹಲಿಯ ನಿವಾಸಿ ಅಪ್ರಾಪ್ತ ರಿತ್ವಿಕ್ ಬನ್ಸಾಲ್ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದ. ಸಂತ್ರಸ್ತ ವೃದ್ಧನ ಖಾತೆಯಿಂದ ತನ್ನ ಖಾತೆಗೆ ಹಣ ವರ್ಗಾವಣೆಯಾಗುತ್ತಿದ್ದಂತೆ ಎಟಿಎಂ ಮೂಲಕ ಹಣ ಬಿಡುಗಡೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಈ ಗ್ಯಾಂಗ್‍ನ ಸದಸ್ಯರು ಬರೋಬ್ಬರಿ 35 ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು. ಈ ಗ್ಯಾಂಗ್‍ನಲ್ಲಿ ಇನ್ನೂ ಹೆಚ್ಚಿನ ಜನರಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Click to comment

Leave a Reply

Your email address will not be published. Required fields are marked *