Connect with us

Cinema

ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂನಿಯರ್ ಎನ್‍ಟಿಆರ್ – ಹೊಸ ಲುಕ್ ವೈರಲ್

Published

on

ಹೈದರಾಬಾದ್: 38ನೇ ವಸಂತಕ್ಕೆ ಕಾಲಿಟ್ಟಿರುವ ಯಂಗ್ ಟೈಗರ್ ಗೆ ಅಭಿಮಾನಿಗಳು, ಸಿನಿ ತಾರೆಯಾರು ಶುಭಾಷಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಮಧ್ಯೆ ಜೂನಿಯರ್ ಎನ್‍ಟಿಆರ್ ಅವರ ಹೊಸ ಲುಕ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಜಿಮ್ ಮಾಡಿ ಕಟ್ಟುಮಸ್ತಾಗಿ ದೇಹ ಮಾಡಿಕೊಂಡಿರುವ ಜೂನಿಯರ್ ಎನ್‍ಟಿಆರ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಆರ್‌ಆರ್‌ಆರ್ ಚಿತ್ರದಲ್ಲಿ ಬ್ಯುಸಿಯಾಗಿರುವ ಯಂಗ್ ಟೈಗರ್ ಗೆ ಅಭಿಮಾನಿಗಳು, ಸಿನಿಮಾರಂಗದ ಅನೇಕರು ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಸ್ಪೇಷಲ್ ಫೋಟೋವೊಂದನ್ನು ಶೇರ್ ಮಾಡಿಕೊಂಡು ಹ್ಯಾಪಿ ಬರ್ತ್‍ಡೇ ತಾರಕ್ ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ. ನೀವು ಮೊದಲಿನಿಂದಲೂ ನನ್ನ ಪ್ರಯಾಣದ ಭಾಗವಾಗಿದ್ದೀರಿ ಎನ್ನವುದೇ ನನಗೆ ಖುಷಿ. ಹುಟ್ಟುಹಬ್ಬದ ಶುಭಾಷಯಗಳು ತಾರಕ್. ನಿಮಗಿಂತ ಉತ್ತಮವಾದ ಭೀಮನನ್ನು ನಾನು ಹುಡುಕಲು ಸಾಧ್ಯವಾಗಲ್ಲ ಎಂದು ಬರೆದು, ಜೂನಿಯರ್ ಎನ್‍ಟಿಆರ್ ಅವರನ್ನು ಅಪ್ಪಿಕೊಂಡಿರುವ ವಿಶೇಷ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ರಾಜಮೌಳಿ ಹಂಚಿಕೊಂಡಿದ್ದಾರೆ.

ಅನುಷ್ಕಾ ಶೆಟ್ಟಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿ ಹ್ಯಾಪಿ ಬರ್ತ್‍ಡೇ ಜೂನಿಯರ್ ಎನ್‍ಟಿಆರ್ ಅಂದಿದ್ದಾರೆ. ನಿಮ್ಮ ಆರ್‌ಆರ್‌ಆರ್ ಸಿನಿಮಾಕ್ಕಾಗಿ ಕಾಯುತ್ತಿರುವೆ. ಇಡೀ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಶುಭಕೋರಿದ್ದಾರೆ. ಹಾಗೆಯೇ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ಜೂನಿಯರ್ ಎನ್‍ಟಿಆರ್ ಅವರ ಸಿಕ್ಸ್ ಪ್ಯಾಕ್ ಫೋಟೋವನ್ನು ಟ್ವೀಟ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಭಿಮಾನಿಗಳು ಶುಭಾಷಯ ಕೋರುತ್ತಿರುವ ಪರಿಗೆ ಟ್ವಿಟ್ಟರ್ ನಲ್ಲಿ #HappyBirthdayNTR ಹಾಗೂ #HappyBirthdayTarak ಹ್ಯಾಶ್‍ಟ್ಯಾಗ್‍ಗಳು ಟ್ರೆಂಡಿಂಗ್‍ನಲ್ಲಿದೆ.

ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಆರ್‌ಆರ್‌ಆರ್ ಸಿನಿಮಾ ಮೂಡಿಬರುತ್ತಿದ್ದು, ಈಗಾಗಲೇ ಟಾಲಿವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. 400 ರಿಂದ 450 ಕೋಟಿ ರೂ. ಬಜೆಟ್‍ನಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಅವರ ಪಾತ್ರದಲ್ಲಿ ರಾಮ್ ಚರಣ್ ಮತ್ತು ಕೊಮರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ 2021ರ ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.